ನವದೆಹಲಿ:ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದೆ. ಇಡೀ ದೇಶವೇ ಒಗ್ಗಟ್ಟಿನಿಂದ ಇದರ ವಿರುದ್ಧ ಹೋರಾಟ ನಡೆಸಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರಕ್ಕಸ ಸೋಂಕಿನ ವಿರುದ್ಧ ದೇಶದ ಜನರು ಒಗ್ಗಟ್ಟಿನಿಂದ ಹೋರಾಟ ನಡೆಸಲಿದೆ ಎಂದು ಟ್ವೀಟ್ ಮಾಡಿರುವ ಅವರು, ಈ ವೇಳೆ ಧರ್ಮ, ಜಾತಿ ಮತ್ತು ವರ್ಗದ ಭಿನ್ನತೆ ದೂರು ಮಾಡಿ ಒಟ್ಟಾಗಿ ಹೋರಾಟಲು ನಿರ್ಧರಿಸಿದ್ದಾರೆ ಎಂದಿದ್ದಾರೆ.
ಮಾರಣಾಂತಿಕ ವೈರಸ್ ಸೋಲಿಸಲು ಜನರು ಸಾಮೂಹಿಕವಾಗಿ ಒಟ್ಟಾಗಿದ್ದು, ತಮ್ಮ ತಮ್ಮ ನಡುವಿನ ಭಿನ್ನತೆ ದೂರು ಮಾಡಿ ಸಹಾನುಭೂತಿ ಹಾಗೂ ಪರಾನುಭೂತಿಯಿಂದ ಕೈಜೋಡಿಸಿದ್ದಾರೆ ಎಂದು ಹೇಳಿದ್ದಾರೆ.
ಇದರ ಜತೆಗೆ ಏಕತೆ ಸಂದೇಶ ಸಾರುವ ಚಿತ್ರವೊಂದನ್ನ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಲೈಟ್ ಆಫ್ ಮಾಡಿ ಕ್ಯಾಂಡಲ್ ಬೆಳಗಿಸುವುದರಿಂದ ಕೊರೊನಾ ಹೋರಾಟ ಗೆಲ್ಲುವುದಿಲ್ಲ ಎಂದು ಹೇಳಿದ್ದರು.