ಕರ್ನಾಟಕ

karnataka

ಹೆತ್ತ ಮಗನನ್ನೇ ಸುಟ್ಟು ಹಾಕಿದ ತಂದೆ-ತಾಯಿ... ಆತ ಮಾಡಿದ ತಪ್ಪಾದ್ರೂ ಎಂತಹದ್ದು?

By

Published : Nov 12, 2019, 11:52 PM IST

ಹೆತ್ತ ತಂದೆ-ತಾಯಿಯೇ ಮಗನನ್ನು ಸಿಮೇ ಎಣ್ಣೆ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿರುವ ಘಟನೆ ತೆಲಂಗಾಣವನ್ನು ಬೆಚ್ಚಿ ಬೀಳಿಸಿದೆ.

ಹೆತ್ತ ಮಗನನ್ನೇ ಸುಟ್ಟು ಹಾಕಿದ ತಂದೆ ತಾಯಿ

ವರಂಗಲ್​(ತೆಲಂಗಾಣ):ಮಗನನ್ನು ಜೀವಂತವಾಗಿಯೇ ಹೆತ್ತ ತಂದೆ-ತಾಯಿ ಸುಟ್ಟು ಹಾಕಿರುವ ಘಟನೆ ವರಂಗಲ್​ ರೂರಲ್​ ಜಿಲ್ಲೆಯ ಮುತ್ಯಾಲಪಲ್ಲಿಯಲ್ಲಿ ನಡೆದಿದೆ.

ಮಗ ಮಹೇಶ್​​ನನ್ನು ಪ್ರೀತಿಯಿಂದ, ಮುದ್ದಾಗಿ ಸಾಕಿ ಬೆಳಸಿದ್ದರು ಆ ತಂದೆ-ತಾಯಿ. ಆತನಿಗೆ ಮದುವೆ ಸಹ ಮಾಡಿದ್ದರು. ಮಹೇಶ್​ಗೆ ಇಬ್ಬರು ಮಕ್ಕಳು. ಆದ್ರೆ ಮಹೇಶ್ ಮದ್ಯಕ್ಕೆ ದಾಸನಾಗಿದ್ದನು. ಕುಡಿದು ಬಂದು ಹೆಂಡ್ತಿಯೊಂದಿಗೆ ಜಗಳ ಕಾಯುತ್ತಿದ್ದನು. ಇದರಿಂದ ಬೇಸತ್ತ ಮಹಿಳೆ ಎರಡು ತಿಂಗಳ ಹಿಂದೆ ಮಹೇಶ್​ ಮತ್ತು ಮಕ್ಕಳನ್ನು ಬಿಟ್ಟು ತವರು ಮನೆ ಸೇರಿದ್ದಳು.

ಹೆತ್ತ ಮಗನನ್ನೇ ಸುಟ್ಟು ಹಾಕಿದ ತಂದೆ ತಾಯಿ

ಪತ್ನಿ ತವರು ಮನೆ ಸೇರಿದ ಬಳಿಕ ಮಹೇಶ್​ ತಂದೆ-ತಾಯಿಯೊಂದಿಗೆ ಜಗಳ ಕಾಯಲು ಶುರು ಮಾಡಿದ. ಎಷ್ಟೇ ಬುದ್ದಿ ಮಾತು ಹೇಳಿದ್ರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ತಂದೆ-ತಾಯಿ ಮಹೇಶ್​ನನ್ನು ಕಟ್ಟಿ ಹಾಕಿದ್ದಾರೆ. ಬಳಿಕ ಸಿಮೆ ಎಣ್ಣೆ ಸುರಿದು ಜೀವಂತವಾಗಿಯೇ ಸುಟ್ಟು ಹಾಕಿದ್ದಾರೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details