ಇಸ್ಲಾಮಾಬಾದ್:ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ವಿಚಾರವನ್ನು ವಿರೋಧಿಸಿ ವಿಶ್ವಸಂಸ್ಥೆ ಮೆಟ್ಟಿಲೇರಿದ್ದ ಪಾಕ್‌ಗೆ ಈಗಾಗಲೇ ಮುಖಭಂಗವಾಗಿದೆ. ಇಷ್ಟಾದ್ರೂ ಸುಮ್ಮನಾಗದ ಆ ದೇಶ ಇದೀಗ ಅಂತಾರಾಷ್ಟ್ರೀಯ ನ್ಯಾಯಾಲಯದ(ICJ) ಬಾಗಿಲು ತಟ್ಟಲು ನಿರ್ಧರಿಸಿದೆ.
ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಮಾತನಾಡಿ, ಜಮ್ಮು-ಕಾಶ್ಮೀರದ ವಿಚಾರವನ್ನು ನಾವು ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಪ್ರಕರಣವನ್ನು ಅಲ್ಲಿಗೆ ಕೊಂಡೊಯ್ಯುವ ಮುನ್ನ ನಾವು ಎಲ್ಲಾ ರೀತಿಯಲ್ಲೂ ಸಿದ್ದತೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.