ಇಸ್ಲಾಮಾಬಾದ್:ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಫರಾಬಾದ್ಗೆ ನಾಳೆ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಪ್ರಯಾಣ ಬೆಳೆಸಲಿದ್ದು, ಅಲ್ಲಿನ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಜಮ್ಮು- ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ಇದೇ ವಿಷಯವನ್ನಿಟ್ಟುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದ ಉದ್ಭವ ಮಾಡುವ ಹುನ್ನಾರ ಮಾಡುತ್ತಿದ್ದ ಪಾಕ್ಗೆ ಇದೀಗ ಅಮೆರಿಕ ಸಹಾಯ ಮಾಡದಿರಲು ನಿರ್ಧರಿಸಿರುವುದು ಹಾಗೂ ಚೀನಾ ಅದರ ಬೆನ್ನಿಗೆ ನಿಲ್ಲಲ್ಲು ಹಿಂದೇಟು ಹಾಕಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರ ಬೆನ್ನಲ್ಲೇ ನಾಳೆ ಪಾಕ್ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಿದ್ದು, ಈ ವೇಳೆ ಇಮ್ರಾನ್ ಖಾನ್ ಮುಜಫರಾಬಾದ್ನಲ್ಲಿ ಮಾತನಾಡಲಿದ್ದಾರೆ.