ಕರ್ನಾಟಕ

karnataka

ETV Bharat / bharat

ಸರ್ಕಾರಿ ಬಂಗಲೆ ಖಾಲಿ ಮಾಡ್ದಿದ್ರೆ ನೀರು, ಪವರ್​ ಕಟ್​... ಮಾಜಿ ಸಂಸದರಿಗೆ ಕಾದಿದೆ ಶಾಕ್​ - former MPs living in government bungalow

ಸಂಸದ ಸ್ಥಾನದ ಅವಧಿ ಮುಗಿದರು ಸರ್ಕಾರದ ಬಂಗಲೆಯಲ್ಲಿ ವಾಸಿಸುತ್ತಿರುವ ಮಾಜಿ ಸಂಸದರಿಗೆ ಸಂಸದೀಯ ಸಮಿತಿ ಶಾಕ್ ನೀಡಿದೆ. ಒಂದು ಗಡುವು ನೀಡಿದ್ದು, ಖಾಲಿ ಮಾಡದೆ ಇದ್ದಲ್ಲಿ ಅಲ್ಲಿಗೆ ಪೂರೈಸಲಾಗುತ್ತಿರುವ ನೀರು ಹಾಗೂ ವಿದ್ಯುತ್​ ಕಡಿತ ಮಾಡುವಂತೆ ಸೂಚಿಸಲಾಗಿದೆ.

ಸಂಸದರ ಬಂಗಲೆ

By

Published : Aug 20, 2019, 6:44 PM IST

ನವದೆಹಲಿ: ಅವಧಿ ಮುಗಿದರೂ ರಾಜಧಾನಿ ದೆಹಲಿಯ ಸರ್ಕಾರಿ ಬಂಗಲೆ ಖಾಲಿ ಮಾಡದ ಮಾಜಿ ಸಂಸದರಿಗೆ ಶಾಕ್​ ಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸಾಂದರ್ಭಿಕ ಚಿತ್ರ

ಹೊಸ ಸಂಸದರಿಗೆ ಅವಕಾಶ ಕೊಡದೆ ಇನ್ನೂ ಅದೇ ಬಂಗಲೆಯಲ್ಲಿ ಉಳಿದಿರುವ ಮಾಜಿ ಸಂಸದರಿಗೆ 1 ವಾರ ಗಡುವ ಕೊಟ್ಟಿರುವ ಸಂಸದೀಯ ಸಮಿತಿಯು, ನಂತರ ನೀರು ಹಾಗೂ ವಿದ್ಯುತ್​ ಪೂರೈಕೆ ಮಾಡುವುದನ್ನು ನಿಲ್ಲಿಸಲು ತೀರ್ಮಾನ ಕೈಗೊಂಡಿದೆ.

ಸಂಸದೀಯ ಸಮಿತಿಯು ಸೋಮವಾರವಷ್ಟೇ ಈ ತೀರ್ಮಾನ ಕೈಗೊಂಡಿದೆ.

ನಾವು 300 ಸಂಸದರಿಗೆ ಬಂಗಲೆಯನ್ನು ನೀಡಿದ್ದೇವೆ, ಆದರೆ, ಮಾಜಿ ಸಂಸದರು ಖಾಲಿ ಮಾಡದೆ ಅಲ್ಲಿಯೇ ವಾಸಿಸುತ್ತಿರುವುದರಿಂದ 1 ವಾರ ಕಾದು ನೋಡುತ್ತೇವೆ. ಖಾಲಿ ಮಾಡದೇ ಇದ್ದಲ್ಲಿ ನೀರು, ವಿದ್ಯುತ್​ ಪೂರೈಕೆ ನಿಲ್ಲಿಸಲು ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಸಮಿತಿ ಮುಖ್ಯಸ್ಥ ಚಂದ್ರಕಾಂತ್​ ಪಾಟೀಲ್​ ತಿಳಿಸಿದ್ದಾರೆ.

ABOUT THE AUTHOR

...view details