ನವದೆಹಲಿ: ಅತ್ಯಂತ ಹಿರಿಯ ಐಎಎಫ್ ಫೈಟರ್ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಿವೃತ್ತ ಸ್ಕ್ವಾಡ್ರನ್ ನಾಯಕ ದಲೀಪ್ ಸಿಂಗ್ ಮಜಿತಿಯಾ 100 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಭಾರತ ಸ್ವಾತಂತ್ರ್ಯ ಸಾಧಿಸಿದ ತಿಂಗಳಲ್ಲಿ ಅಂದರೆ ಆಗಸ್ಟ್ 1947 ರಲ್ಲಿ ನಿವೃತ್ತರಾದ ಇವರಿಗೆ ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಭದೌರಿಯಾ ಶುಭಾಶಯ ಕೋರಿದರು. "ದಲೀಪ್ ಸಿಂಗ್ ಅವರ 100ನೇ ಹುಟ್ಟು ಹಬ್ಬದಂದು ಭಾರತೀಯ ವಾಯುಪಡೆ ಈ ಶುಭಾಶಯ ಕೋರಿದೆ.
ಅವರು ಆಗಸ್ಟ್ 1947 ರಲ್ಲಿ ನಿವೃತ್ತರಾಗಿದ್ದರು. ಈಗ ಜೀವಂತ ಇರುವ 'ಅತ್ಯಂತ ಹಳೆಯ ಹಾಗೂ ಹಿರಿಯ' ಐಎಎಫ್ ಫೈಟರ್ ಪೈಲಟ್ ಎಂಬ ಹೆಗ್ಗಳಿಕೆ ದಲೀಪ್ ಸಿಂಗ್ ಅವರ ಹೆಗ್ಗಳಿಕೆಯಾಗಿದೆ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿ ನೆನಪಿಸಿಕೊಂಡಿದೆ.
ಏರ್ ಚೀಫ್ ಮಾರ್ಷಲ್ ಭದೌರಿಯಾ ಎಲ್ಲ ವಾಯುಪಡೆ ಯೋಧರ ಪರವಾಗಿ ಮಜಿತಿಯಾ ಅವರಿಗೆ ಆತ್ಮೀಯ ಶುಭಾಶಯಗಳನ್ನು ಮತ್ತು ಹೃತ್ಪೂರ್ವಕ ಅಭಿನಂದನೆಗಳು ಎಂದು ಶುಭಕೋರಿದ್ದಾರೆ. ಇದೇ ವೇಳೆ ದಲೀಪ್ ಸಿಂಗ್ ಅವರ ಬಗ್ಗೆ ಒಂದು ಸಣ್ಣ ವಿಡಿಯೊ ಕ್ಲಿಪ್ ಅನ್ನು ಸಹ ಹಂಚಿಕೊಂಡಿದೆ.
100 ನೇ ವಸಂತಕ್ಕೆ ಕಾಲಿಟ್ಟ ಐಎಎಫ್ ಫೈಟರ್ ಪೈಲಟ್