ಕರ್ನಾಟಕ

karnataka

ETV Bharat / bharat

ಕ್ಷೌರಿಕನ​ ನಿಯತ್ತಿ​ಗೆ ವಿದೇಶಿಗ ಫಿದಾ... ಆತನ ಪ್ರಾಮಾಣಿಕತೆಗೆ 30 ಸಾವಿರ ಬಹುಮಾನ! - 30 ಸಾವಿರ ಬಹುಮಾನ

ಅಹಮದಾಬಾದ್​: ಹಾದಿ ಕ್ಷೌರಿಕನ ನಿಯತ್ತಿಗೆ ವಿದೇಶಿಗನೊಬ್ಬ ಫಿದಾ ಆಗಿ ಆತನಿಗೆ 30 ಸಾವಿರ ನಗದನ್ನು ಬಹುಮಾನವಾಗಿ ನೀಡಿದ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ.

ಕೃಪೆ: Youtube

By

Published : Feb 13, 2019, 9:14 PM IST

Updated : Feb 13, 2019, 11:06 PM IST

ಸೂರ್ಯ ಮುಳುಗದ ನಾಡು ನಾರ್ವೇ ನಿವಾಸಿ ಹೆರಾಲ್ಡ್​ ಬಲ್ಡ್ರ ಯೂಟ್ಯೂಬ್​ನಿಂದ ಎಲ್ಲರಿಗೂ ಚೀರ ಪರಿಚಿತ. ಈತ ಪ್ರಪಂಚ ಪರ್ಯಾಟನೆ ಮಾಡುತ್ತಲೇ ಇರುತ್ತಾರೆ. ಈಗ ಗುಜರಾತ್​ನ ಅಹಮದಾಬಾದ್​ಗೆ ಭೇಟಿ ನೀಡಿದ್ದಾರೆ.

ಕೃಪೆ: Youtube

ಇಲ್ಲಿನ ಬೀದಿಯೊಂದಕ್ಕೆ ಹೆರಾಲ್ಡ್​ ಭೇಟಿ ನೀಡಿದ್ದರು. ಅಲ್ಲೇ ರಸ್ತೆ ಬದಿಯಲ್ಲಿರುವ ಕಟಿಂಗ್​ ಶಾಪ್​ಗೆ ಭೇಟಿಕೊಟ್ಟಿದ್ದ ಅವರು ಕಟಿಂಗ್​ ಮಾಡಿಸಿದ್ದರು. ಕಟಿಂಗ್​ ಮಾಡಿಸಿದ ಮೇಲೆ ಇದರ ಚಾರ್ಜ್​ ಎಷ್ಟು ಎಂದು ಕ್ಷೌರಿಕನಿಗೆ ಕೇಳಿದ್ದರು. ಆತ ಕೇವಲ 20 ಕೇಳಿ ಪಡೆದಿದ್ದಾನೆ.

ಇದರಿಂದ ಅಚ್ಚರಿಗೊಂಡ ಬಲ್ಡ್ರ, ರಸ್ತೆ ಮೂಲಕ ತೆರಳುತ್ತಿದ್ದ ಇಂಗ್ಲಿಷ್​ ಬಲ್ಲವರನ್ನು ಕರೆದು ಆತನ ಕಷ್ಟ-ನೋವುಗಳ ಬಗ್ಗೆ ವಿಚಾರಿಸಿದ್ದಾರೆ. ‘ ಕ್ಷೌರಿಕ 14 ವರ್ಷಗಳಿಂದ ನಾನು ಇಲ್ಲಿ ಕಟಿಂಗ್​ ಶಾಪ್​ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರಿಗೆ ಗಂಡು, ಹೆಣ್ಣು ಸೇರಿ ಇಬ್ಬರು ಮಕ್ಕಳಿದ್ದಾರೆ. ನಮ್ಮ ಜೀವನ ಇದರ ಮೇಲಿಯೇ ನಡೆಯುತ್ತಿದೆ ಎಂಬುದನ್ನ ತಿಳಿದುಕೊಂಡಿದ್ದಾರೆ.

ಕಥೆ ಕೇಳಿದ ಮೇಲೆ ಮರುಕಪಟ್ಟ ಹೆರಾಲ್ಡ್​ ಕ್ಷೌರಿಕನ ಸಹಾಯಕ್ಕೆ ಧಾವಿಸಿದ್ದಾರೆ. ತನ್ನ ಜೇಬಿನಲ್ಲಿದ್ದ 30 ಸಾವಿರ ರೂ.( ಅಂದ್ರೆ ಸರಿ ಸುಮಾರು 400 ಡಾಲರ್​ಗೂ ) ಹೆಚ್ಚು ಹಣವನ್ನು ಆತನ ಅಂಗಡಿ ನಿರ್ಮಾಣ ಮತ್ತು ಮನೆಯ ಖರ್ಚಿಗೆ ಬಳಸಲು ಸಹಾಯ ಮಾಡಿ ಮಾನವೀಯತೆ ಮೆರದಿದ್ದಾರೆ.

ಕೃಪೆ: Youtube

ಬಳಿಕ ಮಾತನಾಡಿದ ಹೆರಾಲ್ಡ್​, ‘ನನಗೆ ಆತನ ನಿಯತ್ತು ಇಷ್ಟವಾಯಿತು. ಯೂಟ್ಯೂಬ್ ವಿಡಿಯೋ​ಗಾಗಿ ಆತನ ವ್ಯವಹಾರದ ಬಗ್ಗೆ ಕೇಳಿದೆ. ಆತನಿಗೆ ನನ್ನ ಭಾಷೆ ತಿಳಿಯದಿದ್ದರೂ ನನಗೆ ಮೆಚ್ಚಿಗೆ ಆಗುವ ಥರ ಕಟಿಂಗ್​ ಮಾಡಿದ. ನಿಯತ್ತಾಗೇ ನಿತ್ಯ ತಾನೆಷ್ಟು ಹಣ ಪಡೆಯುತ್ತಾನೋ ಅಷ್ಟೇ ನನ್ನ ಬಳಿಯೂ ಪಡೆದ. ಆತ ಹೆಚ್ಚು ಹಣ ಕೇಳಿದಿದ್ದಲ್ಲಿ ನನಗೆ ಕೋಪ ಬರುತ್ತಿತ್ತು. ಆದ್ರೆ ಆತ ಹಾಗೇ ಮಾಡಲಿಲ್ಲ. ಹೀಗಾಗಿ ನಾನು ಆತನಿಗೆ ಹಣದ ಸಹಾಯ ಮಾಡಿದೆ’ ಎಂದು ಬಲ್ಡ್ರ ಹೇಳಿಕೊಂಡಿದ್ದಾರೆ.

Last Updated : Feb 13, 2019, 11:06 PM IST

ABOUT THE AUTHOR

...view details