ನವದೆಹಲಿ:ಇಂದಿನಿಂದ ಸಬ್ಸಿಡಿಯೇತರ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 62.50 ರೂ ಇಳಿಕೆ ಮಾಡಲಾಗಿದೆ.
ಖುಷಿ ವಿಷಯ! ಇಂದಿನಿಂದ ಸಬ್ಸಿಡಿಯೇತರ ಎಲ್ಪಿಜಿ ಬೆಲೆ ಇಳಿಕೆ
ಅಂತಾರಾಷ್ಟ್ರೀಯ ಬೆಲೆ ಆಧರಿಸಿ, ಭಾರತದಲ್ಲಿಯೂ ಬೆಲೆ ಇಳಿಕೆಯಾಗಿದ್ದು, 2 ತಿಂಗಳಲ್ಲಿ 163 ರೂ. ಕಡಿತವಾಗಿದೆ ಎಂದು ಭಾರತೀಯ ತೈಲ ಕಾರ್ಪೊರೇಷನ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
Non-subsidised LPG
ಕಳೆದ ತಿಂಗಳಷ್ಟೇ ಸಬ್ಸಿಡಿಯೇತರ ಎಲ್ಪಿಜಿ ಬೆಲೆಯಲ್ಲಿ 100.50 ರೂ ಕಡಿತ ಮಾಡಲಾಗಿತ್ತು. ಅಂತಾರಾಷ್ಟ್ರೀಯ ಬೆಲೆ ಆಧರಿಸಿ, ಭಾರತದಲ್ಲಿಯೂ ಬೆಲೆ ಇಳಿಕೆಯಾಗಿದ್ದು, 2 ತಿಂಗಳಲ್ಲಿ 163 ರೂ ಕಡಿತವಾಗಿದೆ ಎಂದು ಭಾರತೀಯ ತೈಲ ಕಾರ್ಪೊರೇಷನ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ 62.50 ರೂ., ಮುಂಬೈ ಹಾಗೂ ಚೆನ್ನೈನಲ್ಲಿ 62 ರೂ. ಕಡಿತವಾಗಿದೆ. ದೆಹಲಿಯಲ್ಲಿ 574.50 ರೂ, ಕೋಲ್ಕತ್ತಾದಲ್ಲಿ 601 ರೂ, ಮುಂಬೈನಲ್ಲಿ 546 ರೂ ಹಾಗೂ ಚೆನ್ನೈನಲ್ಲಿ 590.50ರೂಗಳಿಗೆ ಸಬ್ಸಿಡಿಯೇತರ ಎಲ್ಪಿಜಿ ಮಾರಾಟವಾಗುತ್ತಿದೆ.