ಕರ್ನಾಟಕ

karnataka

ETV Bharat / bharat

ಗಾಂಧಿ ಕುಟುಂಬದ ಹೊರತಾದ ವ್ಯಕ್ತಿ ಪಕ್ಷ ಮುನ್ನಡೆಸಬಹುದು: ಮಣಿಶಂಕರ್ ಅಯ್ಯರ್ ಅಭಿಮತ - ಕಾಂಗ್ರೆಸ್

ಗಾಂಧಿ ಕುಟುಂಬದ ಹೊರತಾದ ವ್ಯಕ್ತಿ ಎಐಸಿಸಿ ಅಧ್ಯಕ್ಷರಾಗಬಹುದು, ಆದರೆ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿರಬೇಕು ಎಂದು ಮಣಿಶಂಕರ್ ಅಯ್ಯರ್ ಸಲಹೆ ನೀಡಿದ್ದಾರೆ.

ಮಣಿಶಂಕರ್ ಅಯ್ಯರ್

By

Published : Jun 23, 2019, 7:43 PM IST

ನವದೆಹಲಿ: ರಾಹುಲ್​ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವ ವಿಚಾರ ಸಾಕಷ್ಟು ಗೊಂದಲದಲ್ಲಿರುವಾಗಲೇ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಿದ್ದಾರೆ.

ಗಾಂಧಿ ಕುಟುಂಬದ ಹೊರತಾದ ವ್ಯಕ್ತಿ ಎಐಸಿಸಿ ಅಧ್ಯಕ್ಷರಾಗಬಹುದು, ಆದರೆ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿರಬೇಕು ಎಂದು ಅಯ್ಯರ್ ಸಲಹೆ ಕೊಟ್ಟಿದ್ದಾರೆ.

ರಾಹುಲ್ ಗಾಂಧಿಯೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದರೆ ಪಕ್ಷಕ್ಕೆ ಒಳಿತಾಗಲಿದೆ. ಆದರೆ ರಾಹುಲ್ ಅವರ ನಿರ್ಧಾರವನ್ನೂ ಗೌರವಿಸುವ ಅಗತ್ಯವಿದೆ ಎಂದು ಅಯ್ಯರ್ ಇದೇ ವೇಳೆ ತಿಳಿಸಿದ್ದಾರೆ.

ಗಾಂಧಿ ಕುಟುಂಬದ ವ್ಯಕ್ತಿಗಳು ಅಧ್ಯಕ್ಷ ಸ್ಥಾನದಲ್ಲಿ ಇಲ್ಲದಿದ್ದರೂ ಪಕ್ಷ ಉತ್ತಮವಾಗಿಯೇ ಮುನ್ನಡೆಯಲಿದೆ. ಆದರೆ ಬಿಕ್ಕಟ್ಟಿನ ಸಂದರ್ಭದಲ್ಲಿ ಗಾಂಧಿ ಕುಟುಂಬದ ನೆರವು ಅಗತ್ಯವಿದೆ ಎನ್ನುವುದು ಮಣಿಶಂಕರ್ ಅಯ್ಯರ್ ಅಂಬೋಣ.

ABOUT THE AUTHOR

...view details