ಕರ್ನಾಟಕ

karnataka

ETV Bharat / bharat

ಹೆಲ್ಮೆಟ್ ಧರಿಸಿದ್ರೆ ಮಾತ್ರ ಪೆಟ್ರೋಲ್ .. ಕೊಲ್ಕತ್ತಾದಲ್ಲಿ ವಿನೂತನ ನಿಯಮ ಜಾರಿ - ಕೊಲ್ಕತ್ತಾ ಪೊಲೀಸ್ ಆಯುಕ್ತ ಅನುಜ್ ಶರ್ಮಾ

ಬೈಕ್ ಸವಾರರು ಹೆಲ್ಮೆಟ್ ಧರಿಸಿದರೆ ಮಾತ್ರ ಬಂಕ್​​ಗಳಲ್ಲಿ ಪೆಟ್ರೋಲ್ ನೀಡಲಾಗುತ್ತದೆ ಅಂತಾ ಕೊಲ್ಕತ್ತಾ ಪೊಲೀಸ್ ಆಯುಕ್ತ ಅನುಜ್ ಶರ್ಮಾ ಹೇಳಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದು, ಡಿಸೆಂಬರ್ 8 ರಿಂದ 2021ರ ಫೆಬ್ರವರಿ 2 ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ.

Dec 8
ಕೊಲ್ಕತ್ತಾ

By

Published : Dec 5, 2020, 4:30 PM IST

ಕೊಲ್ಕತ್ತಾ (ಪಶ್ಚಿಮ ಬಂಗಾಳ): ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 8 ರಿಂದ ಹೆಲ್ಮೆಟ್ ಧರಿಸದ ಯಾವುದೇ ದ್ವಿಚಕ್ರ ವಾಹನ ಸವಾರನಿಗೆ ಪೆಟ್ರೋಲ್ ನೀಡಲಾಗುವುದಿಲ್ಲ ಅಂತಾ ಪೊಲೀಸ್ ಆಯುಕ್ತ ಅನುಜ್ ಶರ್ಮಾ ಹೇಳಿದ್ದಾರೆ.

ಹಿಂಬದಿ ಸವಾರರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇಲ್ಲವಾದಲ್ಲಿ ಅಂಥ ಬೈಕ್​ಗಳಿಗೆ ಪೆಟ್ರೋಲ್ ಹಾಕಲ್ಲ. ಈ ಆದೇಶವು ಡಿಸೆಂಬರ್ 8 ರಿಂದ 2021ರ ಫೆಬ್ರವರಿ 2 ರವರೆಗೆ ಅನ್ವಯವಾಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಮಮತಾ ಬ್ಯಾನರ್ಜಿ, ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳಿ. ಹೆಲ್ಮೆಟ್​ ಖರೀದಿಸಲು ಸಾಧ್ಯವಾಗದವರಿಗೆ ರಾಜ್ಯಸರ್ಕಾರವೇ ವಿತರಿಸುತ್ತದೆ. ಸ್ಥಳೀಯ ಪೊಲೀಸ್ ಠಾಣೆಗೆ ಆಗಮಿಸಿ ಹೆಸರು, ವಿಳಾಸ ನೊಂದಾಯಿಸಿ ಹೆಲ್ಮೆಟ್ ಪಡೆಯಿರಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.

ಜತೆಗೆ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲರೂ ಮಾಸ್ಕ್ ಧರಿಸಿ, ಇತರೆ ಸರ್ಕಾರಗಳು ವಿಧಿಸುವಂತೆ ನಾವು ದಂಡ ವಿಧಿಸಲ್ಲ. ಬದಲಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಮಾಸ್ಕ್ ಧರಿಸಿ ಎಂದರು.

ABOUT THE AUTHOR

...view details