ಪಾಲ್ಘರ್ (ಮಹಾರಾಷ್ಟ್ರ):ತನ್ನ ಐದು ದಿನಗಳ ನವಜಾತ ಶಿಶುವನ್ನು ಎತ್ತಿಕೊಂಡು ಬಾಣಂತಿಯೊಬ್ಬಳು 7 ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಿದ ಘಟನೆ ಬೆಳಕಿಗೆ ಬಂದಿದೆ. ಯಾವುದೇ ಸಾರಿಗೆ ವ್ಯವಸ್ಥೆ ಸಿಗದ ಕಾರಣ ಪತಿ-ಪತ್ನಿ ಪುಟ್ಟ ಮಗುವಿನೊಂದಿಗೆ ನಡೆದುಕೊಂಡು ಹೋಗಿದ್ದಾರೆ.
ತಮ್ಸಾಯಿ ಗ್ರಾಮದ ರಶೀದ್ ಖತುನ್ ಎಂಬ ಮಹಿಳೆಗೆ ಭಾನುವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಕೆಯ ಪತಿ ಸಾರಿಗೆ ವ್ಯವಸ್ಥೆ ಮಾಡಿ, ಆಕೆಯನ್ನು ಮನೋರ್ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಆಕೆಗೆ ರಕ್ತದ ಅವಶ್ಯಕತೆ ಇದ್ದಿದ್ದರಿಂದ, ಆಸ್ಪತ್ರೆಯಲ್ಲಿ O- ರಕ್ತವಿಲ್ಲದ ಕಾರಣ ಬಾಣಂತಿಯನ್ನು ಆಂಬ್ಯುಲೆನ್ಸ್ ಮೂಲಕ ಥಾಣೆ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿಯೂ ರಕ್ತದ ವ್ಯವಸ್ಥೆಯಾಗದ ಕಾರಣ ದಂಪತಿ ಪಾಲ್ಘರ್‌ಗೆ ಮರಳಲು ನಿರ್ಧರಿಸಿದರು.