ಕರ್ನಾಟಕ

karnataka

ETV Bharat / bharat

ನಿಜಾಮುದ್ದೀನ್ ಮರ್ಕಜ್ ಪ್ರಕರಣ: ತಲಾ 7,000 ರೂ. ದಂಡ ತೆತ್ತು ಮಲೇಷ್ಯಾಗೆ ತೆರಳುವಂತೆ ದೆಹಲಿ ಹೈಕೋರ್ಟ್ ಆದೇಶ - ದೆಹಲಿಯಲ್ಲಿ ಕೋವಿಡ್ ಲಾಕ್​ಡೌನ್

ಸೌಮ್ಯ ಆರೋಪಗಳ ಚೌಕಾಸಿ ಮನವಿ ಅಡಿ ವಿಚಾರಣೆ ನಡೆಸಿ ಎಂದು ಮಲೇಷ್ಯಾದವರ ಮನವಿ ಪುರಸ್ಕರಿಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಿದ್ಧಾರ್ಥ್ ಮಲಿಕ್ ಅವರು ಈ ಆದೇಶವನ್ನು ನೀಡಿದ್ದಾರೆ ಎಂದು ಮರ್ಕಜ್​ ಪರ ವಕೀಲರು ತಿಳಿಸಿದ್ದಾರೆ.

Court
ಕೋರ್ಟ್

By

Published : Jul 9, 2020, 10:25 PM IST

ನವದೆಹಲಿ: ಕೋವಿಡ್​​​-19ನ ಲಾಕ್​ಡೌನ್​ ಅವಧಿಯಲ್ಲಿ ನಿಜಾಮುದ್ದೀನ್ ಮರ್ಕಜ್​ನ ಧಾರ್ಮಿಕ ಸಮಾವೇಶದಲ್ಲಿ ಮಲೇಷ್ಯಾದ 60 ನಾಗರಿಕರು ಪಾಲ್ಗೊಂಡು ವಿವಿಧ ಕಾನೂನು ಉಲ್ಲಂಘಿಸಿದ ಪ್ರಕರಣದ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಇಂದು ನಡೆಸಿತು.

60 ಮಲೇಷಿಯನ್ನರಿಗೆ ಸೌಮ್ಯ ಆರೋಪದ ಚೌಕಾಸಿ ಮನವಿ ಹಿನ್ನೆಲೆ ತಲಾ 7,000 ರೂ. ದಂಡವನ್ನು ಪಾವತಿಸಿ ಮುಕ್ತವಾಗಿ ತವರಿಗೆ ತೆರಳುವಂತೆ ನ್ಯಾಯಾಲಯ ಆದೇಶಿಸಿದೆ.

ಸೌಮ್ಯ ಆರೋಪಗಳ ಚೌಕಾಸಿ ಮನವಿ ಅಡಿ ವಿಚಾರಣೆ ನಡೆಸಿ ಎಂದು ಮಲೇಷ್ಯಾದವರ ಮನವಿ ಪುರಸ್ಕರಿಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಿದ್ಧಾರ್ಥ್ ಮಲಿಕ್ ಅವರು ಈ ಆದೇಶ ನೀಡಿದ್ದಾರೆ ಎಂದು ಮರ್ಕಜ್​ ಪರ ವಕೀಲರು ತಿಳಿಸಿದ್ದಾರೆ.

ಪ್ರಕರಣದ ದೂರುದಾರರಾದ ಲಜಪತ್ ನಗರದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ಲಜಪತ್ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರು ಮತ್ತು ನಿಜಾಮುದ್ದೀನ್ ಇನ್ಸ್‌ಪೆಕ್ಟರ್ ನ್ಯಾಯಾಲಯದ ಮನವಿಗೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದ್ದಾರೆ. ಮುಕ್ತವಾಗಿ ತೆರಳಲು ಅವಕಾಶ ನೀಡಲಾಗಿದೆ ಎಂದು ವಕೀಲ ಎಸ್.ಹರಿಹರನ್ ಹೇಳಿದ್ದಾರೆ.

ಚೌಕಾಸಿ ಮನವಿ ಅಡಿಯಲ್ಲಿ ಅಪರಾಧಿಯು ಕಡಿಮೆ ಶಿಕ್ಷೆಗಾಗಿ ಪ್ರಾರ್ಥಿಸಿ ತನ್ನ ಮೇಲಿನ ಆರೋಪದ ತಪ್ಪೊಪ್ಪಿಕೊಳ್ಳುತ್ತಾನೆ. ಕ್ರಿಮಿನಲ್ ಪ್ರೊಸೀಜರ್ ಆಫ್ ಕೋಡ್ ಅಡಿ ಗರಿಷ್ಠ ಏಳು ವರ್ಷ ಜೈಲು ಶಿಕ್ಷೆ ಇರುತ್ತದೆ. ಅಲ್ಲಿ ಅಪರಾಧಗಳು ಸಮಾಜದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಮೇಲೆ ಪರಿಣಾಮ ಬೀರುವುದಿಲ್ಲ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಅಥವಾ ಗಂಡಿನ ವಿರುದ್ಧ ಅಪರಾಧಗಳು ನಡೆಯದಿದ್ದಾಗ ಚೌಕಾಸಿ ಮನವಿಗೆ ಅವಕಾಶವಿಲ್ಲ.

ABOUT THE AUTHOR

...view details