ನವದೆಹಲಿ:ಹಸಿರು ನ್ಯಾಯಮಂಡಳಿ ಇಂದು ಮಧ್ಯರಾತ್ರಿಯಿಂದ ನವೆಂಬರ್ 30 ರವರೆಗೆ ಎಲ್ಲ ರೀತಿಯ ಪಟಾಕಿಗಳ ಮಾರಾಟ ಮತ್ತು ಸುಡುವುದರ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸಂಪೂರ್ಣ ನಿಷೇಧ ಹೇರಿ ಮಹತ್ವದ ಆದೇಶ ಹೊರಡಿಸಿದೆ.
ಪಟಾಕಿಗಳ ಮಾರಾಟಕ್ಕಾಗಿ ನೀಡಲಾದ ಎಲ್ಲ ಪರವಾನಗಿಗಳನ್ನು ದೆಹಲಿ ಪೊಲೀಸರು ಭಾನುವಾರ ಅಮಾನತುಗೊಳಿಸಿದ್ದಾರೆ ಮತ್ತು ನಿರ್ದೇಶನಗಳನ್ನು ಪಾಲಿಸದ ಜನರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ದೆಹಲಿ ಎನ್ಸಿಆರ್ ಸೇರಿದಂತೆ ದೇಶಾದ್ಯಂತ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ದೇಶಾದ್ಯಂತ ಪಟಾಕಿ ಮಾರಾಟ ಮತ್ತು ಬಳಕೆಗೆ ಸಂಪೂರ್ಣ ನಿಷೇಧ ಹೇರಿ ಆದೇಶಿಸಿದೆ. ಕರ್ನಾಟಕ ಸರ್ಕಾರ ಈಗಾಗಲೇ ಹಸಿರು ಪಟಾಕಿ ಬಿಟ್ಟು ಇನ್ನಿತರ ಪಟಾಕಿಗಳನ್ನ ಹಾರಿಸುವುದನ್ನ ಮತ್ತು ಮಾರಾಟ ಮಾಡುವುದನ್ನ ನಿಷೇಧಿಸಿ ಆದೇಶ ಹೊರಡಿಸಿತ್ತು.
ಇದೀಗ ಹಸಿರು ನ್ಯಾಯಮಂಡಳಿ ಕೂಡಾ ಪಟಾಕಿ ಸುಡುವುದು ಮತ್ತು ಮಾರಾಟವನ್ನ ದೇಶಾದ್ಯಂತ ನಿಷೇಧಿಸಿ ಆದೇಶ ಹೊರಡಿಸಿದೆ.