ಕರ್ನಾಟಕ

karnataka

ETV Bharat / bharat

ಕೊರೊನಾ ಪ್ರಭಾವ ತಗ್ಗಿಸಲು ಬೆಂಗಳೂರಲ್ಲಿ ನಡೆದ ಸಂಶೋಧನೆಗಳೇನು? - ಬೆಂಗಳೂರಿನಲ್ಲಿ ಕೊರೊನಾ

ಒಂದೆಡೆ ಕೊರೊನಾ ಮಹಾಮಾರಿ ಜನರನ್ನು ಭೀತಿಗೊಳಪಡಿಸುತ್ತಿದೆ. ಇನ್ನೊಂದೆಡೆ ಕೊರೊನಾ ಭೀತಿಯಿಂದ ಹೊರಬರಲು ತಂತ್ರಜ್ಞಾನ ಬಳಸಿ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ.

new inventions
ಹೊಸ ಅನ್ವೇಷಣೆಗಳು

By

Published : May 11, 2020, 3:10 PM IST

Updated : May 11, 2020, 3:23 PM IST

ಬೆಂಗಳೂರು: ಕೊರೊನಾ ಭೀತಿಯಿಂದ ಪಾರಾಗಲು ಹಲವಾರು ಸಂಶೋಧನೆಗಳು ದೇಶಾದ್ಯಂತ ನಡೆಯುತ್ತಿವೆ. ನಗರದಲ್ಲೂ ಕೂಡಾ ಇಂಥಹ ಸಂಶೋಧನೆಗಳಿಗೇನೂ ಕಡಿಮೆಯಿಲ್ಲ. ಅಂತಹ ಕೆಲವೊಂದು ಸಂಶೋಧನೆಗಳು ಇಲ್ಲಿವೆ.

ಅನ್​ಟಚ್​ ಬ್ಯಾಂಡ್​

ನಗರದ ಬಿಹೆಚ್​​ಟಿ ಟೆಕ್ನಾಲಜೀಸ್ ಕಂಪನಿಯೊಂದು ಕೊರೊನಾ ಭೀತಿಯಿಂದ ಪಾರಾಗಲು ಕೈಗೆ ಧರಿಸುವ ಬ್ಯಾಂಡ್ ಅನ್ನು ಅಭಿವೃದ್ಧಿಪಡಿಸಿದೆ. ಒಬ್ಬ ವ್ಯಕ್ತಿ ಒಂದು ಗಂಟೆಗೆ 16ರಿಂದ 25 ಬಾರಿ ಮುಖ ಮುಟ್ಟಿಕೊಳ್ಳುತ್ತಾನೆ. ಇದನ್ನು ತಪ್ಪಿಸಲು ಬ್ಯಾಂಡ್ ಅಲರ್ಟ್ ಮಾಡಲಿದೆ. ಶ್ರೀಶೈಕ್ ಪತ್ತಾರ್ಣ ರವಿಕುಮಾರ್ ಹಾಗೂ ಇಫ್ತಿಕಾರ್​​​​ ಖಾನ್ ಜತೆಯಾಗಿ ಈ ಬ್ರಾಂಡ್ ಅಭಿವೃದ್ಧಿಪಡಿಸಿದ್ದಾರೆ.

ಸಂಸ್ಥೆಯ ರವಿಕುಮಾರ್ ಮಾತನಾಡಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೈಗಳಿಂದ ಮುಖವನ್ನು ಮುಟ್ಟದೇ ಇದ್ದರೆ ಕೊರೊನಾ ತಡೆಯಬಹುದು. ಈ ಅನ್ ಟಚ್ ಬ್ಯಾಂಡ್ ಬಳಸುವುದರಿಂದ ಮುಖ ಮುಟ್ಟಿಕೊಳ್ಳದಂತೆ ಎಚ್ಚರಿಸಲಿದೆ. ಶಬ್ದ ಹಾಗೂ ವೈಬ್ರೇಟ್ ಆಗುವ ಮೂಲಕ ಮುಖ ಮುಟ್ಟದಂತೆ ಎಚ್ಚರಿಕೆ ನೀಡುತ್ತದೆ.

ಹೊಸ ಅನ್ವೇಷಣೆಗಳು

ಅಷ್ಟೆ ಅಲ್ಲದೆ ಈ ಅನ್​ಟಚ್ ಬ್ಯಾಂಡ್​​ನಲ್ಲಿ ಸೆನ್ಸಾರ್ ಇರುವುದರಿಂದ ದೇಹದ ಉಷ್ಣತೆ ಹೆಚ್ಚಾದರೆ ಅಲರ್ಟ್ ಮಾಡಲಿದೆ. ಅಲ್ಲದೆ ಸಾಮಾಜಿಕ ಅಂತರ ಕಾಪಾಡುವಂತೆಯೂ ಈ ಅನ್​ಟಚ್ ಬ್ಯಾಂಡ್ ಅಲರ್ಟ್ ಮಾಡಲಿದೆ. ಈ ಬ್ಯಾಂಡನ್ನು ಕ್ವಾರಂಟೈನ್ ಸ್ಥಳಗಳಲ್ಲಿ ಆಸ್ಪತ್ರೆಗಳಲ್ಲಿ ಹೆಚ್ಚಾಗಿ ಬಳಸಬಹುದು. ಕೊರೊನಾ ಬಾರದಂತೆ ತಡೆಯಬಹುದು ಎಂದು ರವಿಕುಮಾರ್​ ಭರವಸೆ ವ್ಯಕ್ತಪಡಿಸಿದ್ದಾರೆ.

ಕೋವಿಡ್​ ತಪಾಸಣೆಗೆ ರೋಬೋ
ಆರೋಗ್ಯ ಕಾರ್ಯಕರ್ತರ ರಕ್ಷಣೆ ಹಾಗೂ ತಪಾಸಣೆ ಚುರುಕುಗೊಳಿಸಲು ಬನ್ನೇರುಘಟ್ಟದ ಫೋರ್ಟೀಸ್ ಆಸ್ಪತ್ರೆಯಲ್ಲಿ 'ಮಿತ್ರ' ಎಂಬ ರೋಬೋಟ್ ಅನ್ನು ಪರಿಚಯಿಸಲಾಗಿದೆ. ಕೋವಿಡ್ ಲಕ್ಷಣಗಳಿದ್ದರೆ ಈ ರೋಬೋಟ್ ಮಾಹಿತಿ ನೀಡಲಿದೆ. ಆಸ್ಪತ್ರೆಯ ಪ್ರವೇಶದ್ವಾರದಲ್ಲೇ ಈ ರೋಬೋ ಇದ್ದು, ವ್ಯಕ್ತಿಗಳ ದೇಹದ ಉಷ್ಣಾಂಶ ಪರಿಶೀಲಿಸುತ್ತದೆ. ಸಾಮಾನ್ಯ ಸ್ಥಿತಿಯಲ್ಲಿದ್ದರೆ ಒಳಹೋಗುವ ಪಾಸ್ ನೀಡುತ್ತದೆ.
ಹತ್ತೇ ನಿಮಿಷಕ್ಕೆ ನಲ್ವತ್ತು ಮಾಸ್ಕ್ ಸ್ವಚ್ಚ
ನಗರದಲ್ಲಿ ಖಾಸಗಿ ಕಂಪೆನಿಯೊಂದು ಮಾಸ್ಕ್ ಸ್ವಚ್ಚಗೊಳಿಸುವ ಓವನ್ ಎಂಬ ಯಂತ್ರ ಕಂಡುಹಿಡಿದಿದೆ. ಲಾಗ್ 9 ಮೆಟೀರಿಯಲ್ ಸೈಂಟಿಫಿಕ್ ಪ್ರೈವೆಟ್​​ ಕಂಪನಿ ಈ ಯಂತ್ರ ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆಮಾಡಿದೆ. ಹತ್ತಕ್ಕೂ ಹೆಚ್ಚು ಜನ ಕೆಲಸ ಮಾಡುವ ಸಂಸ್ಥೆಗಳಲ್ಲಿ ಓವನ್ ಸಹಕಾರಿಯಾಗಲಿದೆ. ಮಾಸ್ಕ್ ಅಷ್ಟೇ ಅಲ್ಲದೆ ನೋಟು, ಬ್ರೆಡ್, ಹಣ್ಣುಗಳನ್ನೂ ಓವನ್​ನಲ್ಲಿ ತಪಾಸಣೆಗೆ ಒಳಪಡಿಸಬಹುದು. ಈಗಾಗಲೇ ಈ ಯಂತ್ರ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಬಳಕೆಯಲ್ಲಿದೆ.

ಆಕ್ಸಿಜನ್ ಬಬಲ್​​ ಹೆಲ್ಮೆಟ್
ಇಷ್ಟೇ ಅಲ್ಲದೆ ಮಂಗಳೂರಿನ ಮಂಗಳಾ ಆಸ್ಪತ್ರೆಯ ತಂಡ ಆಕ್ಸಿಜನ್ ಬಬ್ಬಲ್ ಹೆಲ್ಮೆಟ್ ತಯಾರಿಸಿದೆ. ವೆಂಟಿಲೇಟರ್ ಅಳವಡಿಸಿ ಕೃತಕ ಉಸಿರಾಟ ನೀಡುವಾಗ ಈ ಹೆಲ್ಮೆಟ್ ಬಳಕೆಯಾಗಲಿದೆ. ಕೊರೊನಾ ರೋಗಿಗೆ ಆರೋಗ್ಯ ಸ್ಥಿತಿ ಗಂಭೀರವಾದಾಗ, ಶ್ವಾಸನಾಳಕ್ಕೆ ಟ್ಯೂಬ್ ಹಾಕಿ ವೆಂಟಿಲೇಟರ್ ಅಳವಡಿಸಬೇಕಾಗುತ್ತದೆ. ಆದರೆ ಈ ರೀತಿ ಮಾಡಿದಾಗ ಮರಣ ಪ್ರಮಾಣ ಹೆಚ್ಚಾಗಿದೆ. ಇಂಥಾ ಸಂದರ್ಭದಲ್ಲಿ ಆಕ್ಸಿಜನ್ ಬಬ್ಬಲ್ ಹೆಲ್ಮೆಟ್ ಸಹಕಾರಿಯಾಗಿದೆ. ಇದರಲ್ಲಿ ರೋಗಿ ಸುಲಭವಾಗಿ ಉಸಿರಾಡಬಹುದು. ಇದರಿಂದ ಸೋಂಕು ಹರಡವುದನ್ನೂ ತಪ್ಪಿಸಬಹುದು.

Last Updated : May 11, 2020, 3:23 PM IST

ABOUT THE AUTHOR

...view details