ತಿರುವನಂತಪುರಂ (ಕೇರಳ): ಕೊರೊನಾ ತಡೆಗಟ್ಟುವ ಹಿನ್ನೆಲೆ ಲಾಕ್ಡೌನ್ ಜಾರಿಯದ ಪರಿಣಾಮ ಆನ್ಲೈನ್ ತರಗತಿಗಳನ್ನು ನಡೆಸುತ್ತಿದೆ. ಈ ತರಗತಿಗಳಲ್ಲಿ ಪಾಠ ಮಾಡಲು ಮತ್ತು ಕೇಳಲು ಇಂಟರ್ನೆಟ್ ಸೌಲಭ್ಯ ಅತಿ ಮುಖ್ಯ. ಆದರೆ, ಭಾರತದ ಕೆಲ ಹಳ್ಳಿಗಳಲ್ಲಿ ಇಂದಿಗೂ ಸರಿಯಾದ ನೆಟ್‍ವರ್ಕ್ ವ್ಯವಸ್ಥೆಯಿಲ್ಲ. ಹೀಗಾಗಿ ಹಲವಾರು ವಿದ್ಯಾರ್ಥಿಗಳು ಪಾಠ ಕೇಳಲು ಕಷ್ಟ ಪಡುವಂತಾಗಿದೆ. ಕೇರಳದ ಪದವಿ ವಿದ್ಯಾರ್ಥಿನಿಯೊಬ್ಬಳು ನೆಟ್‍ವರ್ಕ್ ಸಮಸ್ಯೆಯಿಂದಾಗಿ ಪಾಠ ಕೇಳಲು ಮನೆಯ ಮಾಳಿಗೆ ಹತ್ತಿ ಕುಳಿತಿದ್ದಾಳೆ. ಕುಟ್ಟಿಪುರಂ ಕೆಎಂಸಿಟಿ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿನಿ ನಮಿತಾ, ಮೊಬೈಲ್ ನೆಟ್‍ವರ್ಕ್ ಇಲ್ಲವೆಂದು ಮನೆಯ ಮಹಡಿ ಏರಿದ್ದಾಳೆ.
ನೆಟ್‍ವರ್ಕ್ ಸಮಸ್ಯೆ: ಪಾಠ ಕೇಳಲು ವಿದ್ಯಾರ್ಥಿನಿ ಮಾಡಿದ್ದೇನು... ನೀವೇ ನೋಡಿ!
ಕೇರಳದ ಪದವಿ ವಿದ್ಯಾರ್ಥಿನಿಯೊಬ್ಬಳು ನೆಟ್‍ವರ್ಕ್ ಸಮಸ್ಯೆಯಿಂದಾಗಿ ಪಾಠ ಕೇಳಲು ಮನೆಯ ಮಾಳಿಗೆ ಹತ್ತಿ ಕುಳಿತಿದ್ದಾಳೆ. ಕುಟ್ಟಿಪುರಂ ಕೆಎಂಸಿಟಿ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿನಿ ನಮಿತಾ, ಮೊಬೈಲ್ ನೆಟ್‍ವರ್ಕ್ ಇಲ್ಲ ಎಂದು ಮನೆಯ ಮಹಡಿ ಏರಿದ್ದಾಳೆ.
ಕೊಟ್ಟಕಲ್ ಸಮೀಪದ ಅರೀಕ್ಕಲ್ ನಿವಾಸಿ ನಮಿತಾ ಬಿಎ ಐದನೇ ಸೆಮಿಸ್ಟರ್ ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಶಾಲಾ - ಕಾಲೇಜುಗಳನ್ನು ಬಂದ್ ಮಾಡಿದ್ದು, ಆನ್ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮಿತಾ ತನ್ನ ಹಂಚಿನ ಮನೆಯ ಮೇಲೇರಿ, ಸುಮಾರು 4 ಗಂಟೆಗಳ ಕಾಲ ಮೊಬೈಲ್ನಲ್ಲಿ ಆನ್ಲೈನ್ ತರಗತಿಗಳಿಗೆ ಹಾಜರಾಗಿದ್ದಾಳೆ.
ನನ್ನ ಮನೆಯ ಸುತ್ತಮುತ್ತ ಮೊಬೈಲ್ ನೆಟ್ವರ್ಕ್ಗಾಗಿ ಸುತ್ತಾಡಿದ್ದಾಳೆ. ಆದರೆ ಎಲ್ಲಿಯೂ ನೆಟ್‍ವರ್ಕ್ ಸಿಗಲಿಲ್ಲ. ಕೊನೆಗೆ ತನ್ನ ಹಂಚಿನ ಮನೆಯ ಮೇಲೇರಿದಾಗ ಅಲ್ಲಿ ನೆಟ್‍ವರ್ಕ್ ದೊರೆತಿದೆ. ಆದ್ದರಿಂದ ಅಲ್ಲಿಯೇ ಕುಳಿತು ಆನ್ಲೈನ್ ತರಗತಿಗಳಿಗೆ ಹಾಜರಾದೆ. ಸೋಮವಾರ ಹಾಗೂ ಮಂಗಳವಾರ ಮಳೆ ಬಂದ ಕಾರಣ ಛತ್ರಿ ಹಿಡಿದುಕೊಂಡೆ ಪಾಠ ಕೇಳಿದೆ. ಆದರೆ ಬುಧವಾರ ಮಳೆಯಿಲ್ಲದ ಕಾರಣ ಅನಾಯಾಸವಾಗಿ ತರಗತಿಗೆ ಹಾಜರಾಗಿದ್ದೇನೆ. ನನ್ನಂತೆ ಹಲವು ವಿದ್ಯಾರ್ಥಿಗಳು ಕಷ್ಟ ಅನುಭವಿಸುತ್ತಿದ್ದಾರೆ. ಹೀಗೆ ಹಲವರು ಬೇರೆ ಬೇರೆ ವಿಧಾನಗಳ ಮೂಲಕ ನೆಟ್‍ವರ್ಕ್ ಪಡೆದುಕೊಂಡು ಪಠ ಕಲಿಯುತ್ತಿದ್ದಾರೆ ಎಂದು ನಮಿತಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
TAGGED:
ಕೇರಳದ ಪದವಿ ವಿದ್ಯಾರ್ಥಿನಿ