ಬಿಜಾಪುರ (ಛತ್ತಿಸ್ಗಢ): ಮಾವೋವಾದಿ ನಾಯಕ ಮೋಡಿಯಂ ವಿಜ್ಜಾನನ್ನು ತಮ್ಮದೇ ಸಮಿತಿಯ ಕಿರಿಯ ನಕ್ಸಲರು ಶುಕ್ರವಾರ ಹತ್ಯೆಗೈದಿದ್ದಾರೆ ಎಂದು ಬಸ್ತರ್ನ ಐಜಿಪಿ ಪಿ.ಸುಂದರ್ರಾಜ್ ತಿಳಿಸಿದ್ದಾರೆ.
ತಮ್ಮ ಕಿರಿಯರ ತಂಡದಿಂದಲೇ ಹತ್ಯೆಯಾದ ನಕ್ಸಲ್ ನಾಯಕ ವಿಜ್ಜಾ - ನಕ್ಸಲ್ ನಾಯಕ ವಿಜ್ಜಾ
ಛತ್ತಿಸ್ಗಢದಲ್ಲಿ ನಕ್ಸಲರ ಅಟ್ಟಹಾಸ ಹೆಚ್ಚಾಗಿದ್ದು, ಕಿರಿಯ ನಕ್ಸಲರೇ ಹಿರಿಯ ನಕ್ಸಲ್ ವಿಜ್ಜಾ ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.
ನಕ್ಸಲ್ ಹತ್ಯೆ
ಬಿಜಾಪುರ ಜಿಲ್ಲೆಯ ಪಶ್ಚಿಮ ಬಸ್ತರ್ ವಿಭಾಗದಲ್ಲಿ ನಡೆಯುತ್ತಿದ್ದ ನಾಗರಿಕರ ಹತ್ಯೆಗಳ ಹಿಂದೆ ವಿಜ್ಜಾ ಕೈವಾಡವಿತ್ತು. ಹಾಗಾಗಿ, ಇವನ ಬಗ್ಗೆ ಮಾಹಿತಿ ನೀಡಿದವರಿಗೆ 8 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಈ ಹಿಂದೆ ಘೋಷಿಸಲಾಗಿತ್ತು. ಆದರೆ, ಇದೀಗ ತಮ್ಮವರಿಂದಲೇ ವಿಜ್ಜಾ ಹತ್ಯೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ರಾಜ್ಯದಲ್ಲಿ ಈ ಬೆಳವಣಿಗೆ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸುಂದರ್ರಾಜ್ ಹೇಳಿದ್ದಾರೆ.