ಜಿನೀವಾ (ಸ್ವಿಟ್ಜರ್ಲೆಂಡ್): ಮುಂದಿನ ಒಂದು ದಶಕದಲ್ಲಿ 10.1 ಟ್ರಿಲಿಯನ್ ಡಾಲರ್ ವ್ಯವಹಾರದಷ್ಟು ಮೊತ್ತದ 39.5 ಕೋಟಿ ಹೊಸ ಉದ್ಯೋಗಗಳನ್ನು ಜಗತ್ತಿನಲ್ಲಿ ಸೃಷ್ಟಿಸಲು ಉದ್ಯಮಿಗಳಿಗೆ ಅವಕಾಶ ತೆರೆದುಕೊಂಡಿದೆ ಎಂದು ವಿಶ್ವ ಆರ್ಥಿಕ ವೇದಿಕೆ (World Economic Forum -WEF) ಹೇಳಿದೆ.
2030ರ ವೇಳೆಗೆ ಪರಿಸರ ಸ್ನೇಹಿ ಉಪಾಯಗಳ ಮೂಲಕ 39.5 ಕೋಟಿ ಉದ್ಯೋಗಗಳ ಸೃಷ್ಟಿಗೆ ಅವಕಾಶವಿದೆ ಎಂದು ಡಬ್ಲ್ಯೂಇಎಫ್ ತನ್ನ 'ಪರಿಸರದ ಭವಿಷ್ಯ ಹಾಗೂ ವ್ಯಾಪಾರ' ವರದಿಯಲ್ಲಿ ಹೇಳಿದೆ.
ಪರಿಸರ ಸ್ನೇಹಿ ಉಪಾಯಗಳು ಅಂದರೆ ಉದ್ಯಮಗಳನ್ನು ಮತ್ತಷ್ಟು ಪರಿಸರ ಸ್ನೇಹಿಯನ್ನಾಗಿ ಮಾಡುವುದು, ಇರುವ ಪರಿಸರವನ್ನು ಸಮೃದ್ಧಗೊಳಿಸುವುದು ಮುಂತಾದ ಯೋಜನೆಗಳಿಂದ ಹೊಸ ಉದ್ಯೋಗಗಳು ಲಭ್ಯವಾಗಬಹುದು ಎನ್ನಲಾಗಿದೆ.
"ಜೈವಿಕ ಸಮತೋಲನವನ್ನು ಕಾಪಾಡಿಕೊಂಡು ಮತ್ತೆ ಆರ್ಥಿಕ ಸ್ಥಿತಿಯನ್ನು ಹಳಿಗೆ ತರಲು ವಿಶ್ವದ ದೇಶಗಳು ಪ್ರಯತ್ನಿಸಿದಲ್ಲಿ ಕೋಟ್ಯಂತರ ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ಕೋವಿಡ್ ಬಿಕ್ಕಟ್ಟಿನ ನಂತರ ಹಳಿ ತಪ್ಪಿರುವ ಅರ್ಥವ್ಯವಸ್ಥೆಯನ್ನು ಮತ್ತೆ ಸರಿಪಡಿಸುವ ಕೂಗು ಜೋರಾಗುತ್ತಿದೆ. ಇಂಥ ಸಮಯದಲ್ಲಿ ನಮ್ಮ ಆಹಾರ ಪೂರೈಕೆ ಸರಪಳಿಯನ್ನು ಸುಸೂತ್ರವಾಗಿಟ್ಟು, ಲಭ್ಯವಿರುವ ಮೂಲಭೂತ ಸೌಕರ್ಯಗಳ ಸಹಾಯದಿಂದ ಪರಿಸರ ಸ್ನೇಹಿ ಇಂಧನ ಮೂಲಗಳನ್ನು ಬಳಸಿಕೊಳ್ಳುವತ್ತ ಹೆಜ್ಜೆ ಇಡಬೇಕಾಗಿದೆ." ಎಂದು ಡಬ್ಲ್ಯೂಇಎಫ್ ನ ನೇಚರ್ ಆ್ಯಕ್ಷನ್ ಅಜೆಂಡಾ ವಿಭಾಗದ ಮುಖ್ಯಸ್ಥೆ ಆಕಾಂಕ್ಷಾ ಖತ್ರಿ ಹೇಳಿದ್ದಾರೆ.
ಆಹಾರ, ಭೂಮಿ ಮತ್ತು ಸಮುದ್ರಗಳ ಬಳಕೆ