ಹೈದರಾಬಾದ್: ಇಲ್ಲೊಬ್ಬ ಮಹಿಳೆ ತನ್ನ ಹೆತ್ತ ಮಗುವನ್ನು ಚಲಿಸುತ್ತಿರುವ ಬಸ್ ಕೆಳಗೆ ತಳ್ಳಿದ್ದಾಳೆ. ಅದಾದ ಬಳಿಕ ರಸ್ತೆ ಮೇಲೆ ಬಿಸಾಡಿದ್ದಾಳೆ. ಈ ಘಟನೆ ಕುಕ್ಕಟಪಲ್ಲಿಯ ಭಾಗ್ಯನಗರದಲ್ಲಿ ನಡೆದಿದೆ.
ಹೆತ್ತ ಮಗುವನ್ನೇ ಬಸ್ ಕೆಳಗೆ ತಳ್ಳಿ ಸಾಯಿಸಲು ವಿಫಲ ಯತ್ನ... ಮತ್ತೆ ರಸ್ತೆ ಮೇಲೆ ಬಿಸಾಡಿದ ತಾಯಿ! - ಹೈದರಾಬಾದ್ ಮಗುವನ್ನು ಬಿಸಾಡಿದ ಸುದ್ದಿ
ತಾಯಿ ಎಂಬ ಪದಕ್ಕೆ ಇಲ್ಲೊಬ್ಬಳು ಕಳಂಕ ಹಚ್ಚಿದ್ದಾಳೆ. ಮಹಿಳೆಯೊಬ್ಬಳು ಹೆತ್ತ ಮಗುವನ್ನು ಬಸ್ ಕೆಳಗೆ ತಳ್ಳಿ, ರಸ್ತೆ ಮೇಲೆ ಬಿಸಾಡಿ ರಾಕ್ಷಸ ರೀತಿ ವರ್ತಿಸಿರುವ ಘಟನೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.
ರಸ್ತೆ ಮೇಲೆ ಬಿಸಾಡಿ
ತಾಯಿಯೊಬ್ಬಳು ಹೆತ್ತ ಮಗುವನ್ನು ಚಲಿಸುತ್ತಿರುವ ಬಸ್ ಕೆಳಗೆ ತಳ್ಳಿದ್ದಾಳೆ. ಬಸ್ ಚಾಲಕನ ಸಮಯಪ್ರಜ್ಞೆಯಿಂದ ಮಗು ಬದುಕಿದೆ. ಆದ್ರೂ ಮಹಿಳೆ ಸುಮ್ಮನಿರದೇ ಆ ಮಗುವನ್ನು ರಸ್ತೆ ಮೇಲೆ ಎತ್ತಿ ಬಿಸಾಡಿದ್ದಾಳೆ. ಆ ಮಹಿಳೆಯ ದುರ್ವತನೆ ನೋಡಿದ ಸುತ್ತಮುತ್ತಲಿನ ಜನ ಮಗುವನ್ನು ಕಾಪಾಡಿದ್ದು, ಮಹಿಳೆಯನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಇನ್ನು ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ತಿಳಿಯಬೇಕಾಗಿದೆ.
Last Updated : Aug 27, 2019, 7:59 PM IST