ಹೈದರಾಬಾದ್:ಕೂಕಟ್ಪಲ್ಲಿಯ ಬಾಲಾಜಿನಗರ್ನ ಗಂಡ-ಹೆಂಡ್ತಿ ಫಂಕ್ಷನ್ ಹೋಗುವ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ. ಇದರಿಂದ ಮನಸ್ತಾಪಗೊಂಡ ಮಹಿಳೆ ತನ್ನ ಎರಡು ವರ್ಷದ ಮಗಳ ಜೊತೆ ಬಿಲ್ಡಿಂಗ್ ಮೇಲಿಂದ ಜಿಗಿದು ಪ್ರಾಣ ಬಿಟ್ಟಿದ್ದಾಳೆ.
ಕೇವಲ ಆ ವಿಷಯಕ್ಕಾಗಿ ಮಗಳ ಜೊತೆ ಬಿಲ್ಡಿಂಗ್ ಮೇಲಿಂದ ಹಾರಿದ ತಾಯಿ! - ಹಾರಿದ ತಾಯಿ
ಗಂಡ-ಹೆಂಡ್ತಿ ಜಗಳ ನಿರಂತರ ಇದ್ದೇ ಇರುತ್ತವೆ. ಆದ್ರೆ ಇಲ್ಲೊಂದು ಸಣ್ಣ ವಿಚಾರಕ್ಕೆ ಮಹಿಳೆ ತನ್ನ ಎರಡು ವರ್ಷದ ಮಗಳ ಜೊತೆ ಬಿಲ್ಡಿಂಗ್ ಮೇಲಿಂದ ಹಾರಿರುವ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ.
ಮಗಳ ಜೊತೆ ಬಿಲ್ಡಿಂಗ್ ಮೇಲಿಂದ ಹಾರಿದ ತಾಯಿ
ಇನ್ನು ಮಗುವಿಗೆ ತೀವ್ರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಫಂಕ್ಷನ್ಗೆ ತೆರಳುವ ವಿಚಾರಕ್ಕೆ ಇಬ್ಬರ ಮಧ್ಯೆ ನಡೆದ ಕಲಹವೇ ಆತ್ಮಹತ್ಯೆಗೆ ಕಾರಣವೆಂದು ಸಂಬಂಧಿಕರು ಭಾವಿಸುತ್ತಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.