ಕರ್ನಾಟಕ

karnataka

ಕೋವಿಡ್​ ಬಿಕ್ಕಟ್ಟು ಎದುರಿಸಲು ಮೋದಿ- ಪುಟಿನ್​ ಚರ್ಚೆ: ಜಂಟಿ ಸಹಭಾಗಿತ್ವದ ಪ್ರತಿಜ್ಞೆ

By

Published : Jul 3, 2020, 5:36 AM IST

ಕೋವಿಡ್‌ ನಿಯಂತ್ರಿಸಿದ ಬಳಿಕ ಜಗತ್ತಿನಲ್ಲಿ ಎದುರಾಗುವ ಸವಾಲುಗಳನ್ನು ಜಂಟಿಯಾಗಿ ಎದುರಿಸುವ ನಿಟ್ಟಿನಲ್ಲಿ ಉಭಯ ನಾಯಕರು ಚರ್ಚಿಸಿದರು ಎಂದು ಪ್ರಧಾನಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Modi, Putin
ಮೋದಿ- ಪುಟಿನ್

ನವದೆಹಲಿ: ವಿಶ್ವವನ್ನು ವ್ಯಾಪಿಸಿರುವ ಕೋವಿಡ್​ 19 ವೈರಸ್​ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದರು.

ಕೋವಿಡ್‌ ನಿಯಂತ್ರಿಸಿದ ಬಳಿಕ ಜಗತ್ತಿನಲ್ಲಿ ಎದುರಾಗುವ ಸವಾಲುಗಳನ್ನು ಜಂಟಿಯಾಗಿ ಎದುರಿಸುವ ನಿಟ್ಟಿನಲ್ಲಿ ಉಭಯ ನಾಯಕರು ಚರ್ಚಿಸಿದರು ಎಂದು ಪ್ರಧಾನಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಧ್ಯಕ್ಷ ಪುಟಿನ್‌ ಮತ್ತು ನಾನು ನಿರಂತರ ಸಮಾಲೋಚನೆ ನಡೆಸಲು ನಿರ್ಧರಿಸಿದ್ದೇವೆ. ಈ ವರ್ಷದ ಅಂತ್ಯಕ್ಕೆ ನಡೆಯಲಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್‌ ಅವರು ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಮೋದಿ ಟ್ವಿಟ್ಟರ್​ನಲ್ಲಿ ತಿಳಿಸಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ರೋಗದ ನೆಗೆಟಿವ್​ ಪರಿಣಾಮಗಳನ್ನು ಪರಿಹರಿಸಲು ಉಭಯ ದೇಶಗಳು ಕೈಗೊಂಡ ಪರಿಣಾಮಕಾರಿ ಕ್ರಮಗಳ ಕುರಿತು ಚರ್ಚಿಸಿದ್ದಾರೆ. ಕೋವಿಡ್ ನಂತರದ ಪ್ರಪಂಚದ ಸವಾಲುಗಳನ್ನು ಭಾರತ-ರಷ್ಯಾ ಜಂಟಿಯಾಗಿ ಪರಿಹರಿಸಲು ಬದ್ಧವಾಗಿವೆ ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿದೆ.

ಫೋನ್ ಕರೆಗಾಗಿ ಪುಟಿನ್ ಅವರು ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. ಎಲ್ಲಾ ಕ್ಷೇತ್ರಗಳಲ್ಲೂ ಉಭಯ ದೇಶಗಳ ನಡುವಿನ ವಿಶೇಷ ಮತ್ತು ಸವಲತ್ತು ಪಡೆದ ಕಾರ್ಯತಂತ್ರದ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದರು.

ABOUT THE AUTHOR

...view details