ಗುವಾಹಟಿ: ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ, ಚೀನಾದಿಂದ ಪಿಪಿಇ ಕಿಟ್‌ಗಳು ಸೇರಿದಂತೆ ವೈದ್ಯಕೀಯ ಸರಕುಗಳು ವಾಯು ಮಾರ್ಗದ ಮೂಲಕ ಗುವಾಹಟಿಗೆ ಬಂದು ತಲುಪಿವೆ.
"ಬ್ಲೂ ಡಾರ್ಟ್ ಏರ್ ಕಾರ್ಗೋ ಚೀನಾದ ಗುವಾಂಗ್ನಿಂದ 50,000 ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್‌ಗಳು ಸೇರಿದಂತೆ ವೈದ್ಯಕೀಯ ವಸ್ತುಗಳನ್ನು ತಂದು ವಿತರಿಸಿದೆ" ಎಂದು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.