ಶ್ರೀನಗರ:ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್ 370 ರದ್ಧುಗೊಂಡಿದ್ದು, ಅಲ್ಲಿನ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರಲು ಆರಂಭಿಸಿವೆ. ಇದೀಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ಯೋಧರ ವಿರುದ್ಧ ಅಲ್ಲಿನ ಜನರು ಸಿಡಿದೆದ್ದಿದ್ದಾರೆ.
ಪಾಕ್ ಆರ್ಮಿ ವಿರುದ್ಧ ಭುಗಿಲೆದ್ದ ಆಕ್ರೋಶ... ಕಾಶ್ಮೀರಿಗಳಂತೆ ನಮಗೂ ಸ್ವಾತಂತ್ರ್ಯ ನೀಡಿ ಎಂದ POK!
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜನರು ಪಾಕಿಸ್ತಾನದ ಸೇನೆ ಎದುರು ಭುಗಿಲೆದಿದ್ದು, ತಮಗೂ ಕಾಶ್ಮೀರಿಗಳಂತೆ ಸ್ವಾತಂತ್ರ್ಯ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಭಾರತದ ವಿರುದ್ಧ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ವಿವಿಧ ಗ್ರಾಮದ ಜನರನ್ನು ಬಳಕೆ ಮಾಡಿಕೊಂಡು ಅವರ ಮನೆಗಳಿಂದ ಬಲವಂತವಾಗಿ ಬೇರೆಡೆ ಶಿಫ್ಟ್ ಮಾಡಲಾಗುತ್ತಿದೆ. ಪ್ರಮುಖವಾಗಿ ಲ್ಯಾಮ್ ಹಾಗೂ ಚಾರ್ಹೋಯಿ ಗ್ರಾಮದಲ್ಲಿನ ಜನರನ್ನು ಭಾರತದ ಸೇನೆಯ ವಿರುದ್ಧ ಮಾನವ ಗುರಾಣಿಗಳಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ. ಜತೆಗೆ ಅವರನ್ನ ಭಾರತೀಯರ ವಿರುದ್ಧ ದಾಳಿ ನಡೆಸಲು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅಮಾಯಕರು ತಮ್ಮ ಜೀವನ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಬೇಸತ್ತಿರುವ ಪಾಕ್ ಆಕ್ರಮಿತ ಕಾಶ್ಮೀರಿ ಜನರು ಅಲ್ಲಿನ ಸೇನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಜಮ್ಮು-ಕಾಶ್ಮೀರದಲ್ಲಿನ ಜನರಿಗೆ ನೀಡಿರುವ ಸ್ವಾತಂತ್ರ್ಯದಂತೆ ತಮಗೂ ಸ್ವತಂತ್ರ್ಯ ನೀಡಿ ಎಂದು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಕಳೆದ ಕೆಲ ದಿನಗಳಿಂದ ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕ್ ಸೇನೆ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದ್ದು, ಅದಕ್ಕೆ ಭಾರತೀಯ ಯೋಧರು ಪ್ರತಿರೋಧ ನೀಡುತ್ತಿದ್ದಾರೆ. ಪ್ರಮುಖವಾಗಿ ರಾಜೌರಿ, ಪೂಂಚ್ ಪ್ರದೇಶಗಳಲ್ಲಿ ಪಾಕ್ ಸೇನೆ ಹೆಚ್ಚಿನ ರೀತಿಯಲ್ಲಿ ಗುಂಡಿನ ದಾಳಿ ನಡೆಸುತ್ತಿದೆ.