ಭುವನೇಶ್ವರ (ಒಡಿಶಾ): 100 ವರ್ಷದ ವೃದ್ಧೆಗೆ ಪಿಂಚಣಿ ನಿರಾಕರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಒಡಿಶಾ ಸರ್ಕಾರ ಮಾಡಿದ ಮನವಿಯ ಆಧಾರದ ಮೇಲೆ ಉಟ್ಕಲ್ ಗ್ರಾಮೀಣ ಬ್ಯಾಂಕಿನ ಬರಗಾಂವ್ ಶಾಖೆಯ ವ್ಯವಸ್ಥಾಪಕರನ್ನು ಇಂದು ಅಮಾನತುಗೊಳಿಸಿದೆ.
ಪಿಂಚಣಿ ಮೊತ್ತವನ್ನು ಪಡೆಯಲು 100 ವರ್ಷದ ಮಹಿಳೆ ಲಾಬೆ ಬ್ಯಾಗ್ ಅವರ ದೈಹಿಕ ಪರಿಶೀಲನೆ ಮಾಡಲು ಕೇಳಿದ್ದಕ್ಕಾಗಿ ಬರಗಾಂವ್ ಶಾಖಾ ವ್ಯವಸ್ಥಾಪಕ ಅಜಿತ್ ಕುಮಾರ್ ಪ್ರಧಾನ್ ಅವರನ್ನು ಅಮಾನತುಗೊಳಿಸಲಾಗಿದೆ. ಶಾಖಾ ವ್ಯವಸ್ಥಾಪಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಹೇಗಿದೆ ನೋಡಿ ಬದುಕಿನ ಅನಿವಾರ್ಯತೆ: ಕರುಣೆ ಇಲ್ಲದ ಬ್ಯಾಂಕ್ ಸಿಬ್ಬಂದಿ
ಇದಕ್ಕೂ ಮುನ್ನ ಸೋಮವಾರ ಮಹಿಳೆ ತನ್ನ 100 ವರ್ಷದ ತಾಯಿಯನ್ನು ಒಡಿಶಾದ ನುವಾಪಾ ಜಿಲ್ಲೆಯ ಬ್ಯಾಂಕ್‌ಗೆ ಕರೆದುಕೊಂಡು ಹೋಗಿದ್ದು, ಖಾತೆದಾರರ ದೈಹಿಕ ಪರಿಶೀಲನೆಗೆ ಬ್ಯಾಂಕ್ ಒತ್ತಾಯಿಸಿದ ಹಿನ್ನೆಲೆಯಲ್ಲಿ ಪಿಂಚಣಿ ಹಿಂಪಡೆಯಲಾಗಿತ್ತು.
ಮೂಲಗಳ ಪ್ರಕಾರ, ವೃದ್ಧೆ ತನ್ನ ಮಗಳು ಗುಂಜಾ ಡೀ (70) ರನ್ನು ತನ್ನ ಪಿಂಚಣಿ ಖಾತೆಯಿಂದ 1,500 ರೂ. ಹಣ ತರಲು ಹೇಳಿದ್ದರು. ಆದ್ರೆ ಬ್ಯಾಂಕ್ ಅಧಿಕಾರಿ ಪಿಂಚಣಿ ಹಣವನ್ನು ಬಿಡುಗಡೆ ಮಾಡಲು ನಿರಾಕರಿಸಿದ್ದರು. ಅಲ್ಲದೆ ಬ್ಯಾಂಕ್ ಆವರಣದಲ್ಲಿ ಖಾತೆದಾರರ ದೈಹಿಕ ಪರಿಶೀಲನೆಗೆ ಒತ್ತಾಯಿಸಿದ್ದರು.
ಈ ಘಟನೆ ವಿಡಿಯೋ ವೈರಲ್ ಆಗಿತ್ತು. ಆ ನಂತರ ಖರಿಯಾರ್‌ನ ಸ್ಥಳೀಯ ಶಾಸಕ ಅಧಿರಾಜ್ ಪಾಣಿಗ್ರಾಹಿ ಅವರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಉಟ್ಕಲ್ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಭಾನುವಾರ ಸ್ಥಳೀಯ ಶಾಸಕ ಪಾಣಿಗ್ರಾಹಿ ಅವರೊಂದಿಗೆ ಬಾರ್‌ಗಾಂವ್ ತಲುಪಿದ್ದು, ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.