ಅಜಂಘಡ್(ಯುಪಿ): ಮನೆಗೆ ನುಗ್ಗಿರುವ 38 ವರ್ಷದ ವ್ಯಕ್ತಿಯೊಬ್ಬ ದಂಪತಿ ಕೊಲೆಗೈದು ನಂತರ ಮಹಿಳೆಯ ಶವದ ಜೊತೆ ಸಂಭೋಗ ನಡೆಸಿ ಅಮಾನವೀಯತೆ ಮೆರೆದ ಘಟನೆ ಉತ್ತರಪ್ರದೇಶದಅಜಂಘಡ್‌ನಲ್ಲಿನಡೆದಿದೆ.
ಮನೆಯ ಕೊಠಡಿಯಲ್ಲಿ ದಂಪತಿ ತಮ್ಮ ಮೂವರು ಮಕ್ಕಳೊಂದಿಗೆ ವಿಶ್ರಾಂತಿಯಲ್ಲಿದ್ದ ವೇಳೆ ಏಕಾಏಕಿ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿ ಅವರ ಮೇಲೆ ಹಲ್ಲೆ ಮಾಡಿ ಕೊಂದಿದ್ದಾನೆ. ಈ ವೇಳೆ ಆತ ಮಹಿಳೆ ಶವದ ಜೊತೆಗೂ ಸಂಭೋಗ ನಡೆಸಿದ್ದು, 10 ವರ್ಷದ ಮಗಳ ಮೇಲೂ ದುಷ್ಕೃತ್ಯ ಎಸಗಿದ್ದಾನೆ. ಆರೋಪಿ ನಾಸಿರುದ್ದೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ:
ನವೆಂಬರ್ 24ರಂದು ಮುಬಾರಕ್‍ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರೋಪಿ ನಾಸಿರುದ್ಧೀನ್, ಕಲ್ಲಿಂದ ಜಜ್ಜಿ, ಚಾಕುವಿನಿಂದ ಇರಿದು ಮೊದಲು ಗಂಡನ ಕೊಲೆಗೈದ ಬಳಿಕ 10 ವರ್ಷದ ಮಗಳು ಹಾಗೂ ಮಹಿಳೆಯನ್ನು ಹತ್ಯೆಗೈದು ಮೃತದೇಹದ ಮೇಲೂ ವಿಕೃತಿ ಮೆರೆದಿದ್ದಾನೆ. ಈ ವೇಳೆ ಮತ್ತಿಬ್ಬರು ಮಕ್ಕಳನ್ನು ಕೊಲೆಗೈಯ್ಯಲು ಯುತ್ನಿಸಿ ಸ್ಥಳದಿಂದ ಪರಾರಿಯಾಗಿದ್ದ.
ಈ ವಿಕೃತ ಕಾಮಿಯನ್ನು ಅರೆಸ್ಟ್ ಮಾಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರೋಪಿ ಬೇರೆ ರಾಜ್ಯಗಳಲ್ಲೂ ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ತಿಳಿದು ಬಂದಿದೆ.