ಚಿತ್ತೂರು:ಗಂಡಾನೆ ನಡೆಸಿರುವ ಲೈಂಗಿಕ ದಾಳಿಯಿಂದ ಹೆಣ್ಣಾನೆಯೊಂದು ಮೃತಪಟ್ಟಿರುವ ಘಟನೆ ಚಿತ್ತೂರು ಜಿಲ್ಲೆಯ ಪಲಮನೆರು ತಾಲೂಕಿನ ಮಂಡಿಪೇಟ ಕೋಟೂರು ಅರಣ್ಯ ವಲಯದಲ್ಲಿ ನಡೆದಿದೆ.
ಗಂಡಾನೆಯ ’ಹೇಳಬಾರದ’ ಆ ದಾಳಿಯಿಂದ ನರಳಿ - ನರಳಿ ಮೃತಪಟ್ಟ ಹೆಣ್ಣಾನೆ! - ಮೃತಪಟ್ಟ ಹೆಣ್ಣಾನೆ
ಗಂಡಾನೆ ನಡೆಸಿದ ಲೈಂಗಿಕ ದಾಳಿಯಿಂದ ಹೆಣ್ಣಾನೆಯೊಂದು ನರಳಿ, ನರಳಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಗಂಡಾನೆ ಲೈಂಗಿಕ ದಾಳಿ
ಇನ್ನು ಈ ಹೆಣ್ಣಾನೆ ಎರಡು ದಿನಗಳ ಹಿಂದೆ ಮೃತಪಟ್ಟಿದ್ದು, ಮೊದಲು ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ತಿಳಿದಿದ್ದರು. ಸೋಮವಾರ ರಾತ್ರಿ ಮರಣೋತ್ತರ ಪರೀಕ್ಷೆಯಲ್ಲಿ ಈ ಹೆಣ್ಣಾನೆ ಲೈಂಗಿಕ ದಾಳಿಯಿಂದ ಮೃತಪಟ್ಟಿದೆ ಎಂಬುದು ತಿಳಿದಿದೆ.
ಗಂಡಾನೆ ಲೈಂಗಿಕ ದಾಳಿ ನಡೆಸಿರುವುದರಿಂದ ಹೆಣ್ಣಾನೆ ಮೃತಪಟ್ಟಿದೆ. ಮೃತ ಹೆಣ್ಣಾನೆ ಜೊತೆ ಇನ್ನೊಂದು ಮರಿ ಆನೆಯಿತ್ತು. ಆದ್ರೆ ಆ ಮರಿ ಆನೆ ನಾಪತ್ತೆಯಾಗಿದ್ದು, ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.