ಮುಂಬೈ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ರದ್ದುಗೊಂಡಿದ್ದು, ಇನ್ಮುಂದೆ ಹೊರಗಿನವರು ಸಹ ಕಣಿವೆ ನಾಡಿನಲ್ಲಿ ಜಮೀನು ಖರೀದಿ ಮಾಡಬಹುದಾಗಿದೆ.
ಆರ್ಟಿಕಲ್ 370 ರದ್ದು.. ಕಾಶ್ಮೀರದಲ್ಲಿ ಹೋಟೆಲ್ ಓಪನ್ ಮಾಡಲು ಮಹಾ ಸರ್ಕಾರ ನಿರ್ಧಾರ! - State tourism minister
ಜಮ್ಮು-ಕಾಶ್ಮೀರಕ್ಕಾಗಿ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್ 370 ರದ್ದು ಮಾಡಲಾಗಿದ್ದು, ಇದೀಗ ಕಾಶ್ಮೀರದಲ್ಲಿ ಹೋಟೆಲ್ ಓಪನ್ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ ಮಾಡಿದೆ.
ಇದೀಗ ಇದರ ಪ್ರಯೋಜನ ಪಡೆದುಕೊಳ್ಳಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರ ಜಮ್ಮು-ಕಾಶ್ಮೀರ ಹಾಗೂ ಲಡಾಕ್ನಲ್ಲಿ ರೆಸಾರ್ಟ್ ಓಪನ್ ಮಾಡಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯ ಪ್ರವಾಸೋದ್ಯಮ ಸಚಿವ ಜಯಕುಮಾರ್ ರಾವಲ್ ಮಾಹಿತಿ ನೀಡಿದ್ದಾರೆ. ಈಗಾಗಲೇ ರಾಜ್ಯ ಸಚಿವ ಸಂಪುಟದಲ್ಲಿ ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಎರಡು ಕಡೆ ಭೂಮಿ ಖರೀದಿ ಮಾಡಿ, ರೆಸಾರ್ಟ್ ಓಪನ್ ಮಾಡಲಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದು, ಪ್ರಮುಖವಾಗಿ ಮಹಾರಾಷ್ಟ್ರದಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೆ ಇದರ ಪ್ರಯೋಜನ ನೀಡಲು ಮುಂದಾಗಿದೆ. ಜತೆಗೆ ಕೇಂದ್ರದ ನಿರ್ದೇಶನಕ್ಕಾಗಿ ನಾವು ಕಾಯುತ್ತಿರುವುದಾಗಿ ತಿಳಿಸಿದ್ದಾರೆ.