ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ನಿರ್ಣಾಯಕ ಸಭೆಯಲ್ಲಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆಯನ್ನು ಸಿಎಂ ಎಂದು ಘೋಷಣೆ ಮಾಡಲಾಗಿದೆ.
ಮೂರು ಪಕ್ಷದ ನಾಯಕರು ಒಮ್ಮತದಿಂದ ಉದ್ಧವ್ ಠಾಕ್ರೆಯನ್ನು ಸಿಎಂ ಎಂದು ಸೂಚಿಸಿದ್ದೇವೆ ಎಂದು ಶರದ್ ಪವಾರ್ ಮೀಟಿಂಗ್ ಬಳಿಕ ತಿಳಿಸಿದ್ದಾರೆ.

ಇಂದಿನ ಮಾತುಕತೆ ಅಪೂರ್ಣವಾಗಿದ್ದು ನಾಳೆಯೂ ಮುಂದುವರೆಯಲಿದೆ ಎಂದು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಸ್ಪಷ್ಟನೆ ನೀಡಿದೆ.
ಸರ್ಕಾರ ರಚನೆ ಸಂಬಂಧ ಕಾಂಗ್ರೆಸ್-ಎನ್ಸಿಪಿ ಹಾಗೂ ಶಿವಸೇನೆ ನಡೆಸಿದ ಸಭೆಯಲ್ಲಿ ಸಿಎಂ ಪಟ್ಟದ ಕುರಿತಾದ ಗೊಂದಲ ಬಗೆಹರಿದಿದೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ನಿವಾಸದಲ್ಲಿ ಮಹತ್ವದ ಸಭೆ ನಡೆದಿತ್ತು.
ಇವೆಲ್ಲದರ ನಡುವೆ ಮುಂಬೈ ಮೂಲದ ಬಿಜೆಪಿ ಕಾರ್ಯಕರ್ತ ಸುರೇಂದ್ರ ಬಹದ್ದೂರ್ ಸಿಂಗ್, ಶಿವಸೇನೆ-ಕಾಂಗ್ರೆಸ್-ಎನ್ಸಿಪಿ ನಡುವೆ ಅಪವಿತ್ರ ಮೈತ್ರಿ ನಡೆದಿದ್ದು ಇದು ಜನಾದೇಶದ ವಿರುದ್ಧ ಎಂದು ಆರೋಪಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.