ಕರ್ನಾಟಕ

karnataka

ETV Bharat / bharat

ಮಧ್ಯಪ್ರದೇಶ ಸಿಎಂ ಅಳಿಯ ರಾತುಲ್​ ಪುರಿ 6 ದಿನಗಳ ಕಾಲ ಇಡಿ ಕಸ್ಟಡಿಗೆ - ಉದ್ಯಮಿ

ಮಧ್ಯಪ್ರದೇಶ ಸಿಎಂ ಕಮಲನಾಥ್​ ಅವರ ಅಳಿಯ ರಾತುಲ್​ ಪುರಿಯನ್ನು 354 ಕೋಟಿ ಬ್ಯಾಂಕ್​ ಲೋನ್​ ವಂಚನೆಗೆ ಸಂಬಂಧಿಸಿದಂತೆ ಮನಿ ಲ್ಯಾಂಡರಿಂಗ್​ ತಡೆ ಕಾಯ್ದೆ (PMLA)ಯಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದು, 6 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.

ಕಮಲನಾಥ್​ ಅವರ ಅಳಿಯ ರಾತುಲ್​ ಪುರಿ

By

Published : Aug 21, 2019, 4:25 AM IST

ನವದೆಹಲಿ:ಉದ್ಯಮಿ ಹಾಗೂ ಮಧ್ಯಪ್ರದೇಶ ಸಿಎಂ ಕಮಲನಾಥ್​ ಅವರ ಅಳಿಯನೂ ಆಗಿರುವ ರಾತುಲ್​ ಪುರಿಯನ್ನು ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದು, 6 ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದಿದ್ದಾರೆ.

354 ಕೋಟಿ ಬ್ಯಾಂಕ್​ ಲೋನ್​ ವಂಚನೆಗೆ ಸಂಬಂಧಿಸಿದಂತೆ ಮನಿ ಲ್ಯಾಂಡರಿಂಗ್​ ತಡೆ ಕಾಯ್ದೆ (PMLA)ಯಡಿ ರಾತುಲ್​ ಪುರಿ ಬಂಧನವಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಂಕ್​ ಲೋನ್​ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾತುಲ್​ ಪುರಿ ನಿವಾಸ ಹಾಗೂ ಸಂಬಂಧಿಕರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ. ಜತೆಗೆ ಆಗಸ್ಟ್18ರಂದು ಸಿಬಿಐ ಕ್ರಿಮಿನಲ್​ ಕೇಸ್​ ಕೂಡ ದಾಖಲಿಸಿದೆ.

ಪುರಿ ಅವರನ್ನು ವಿಚಾರಣೆ ನಡೆಸಿದ ಬಳಿಕ ಇಡಿ ಅಧಿಕಾರಿಗಳು ಬಂಧಿಸಿ ತಮ್ಮ ವಶಕ್ಕೆ ಪಡೆದಿದ್ದು, ಆಗಸ್ಟ್​ 26ರರೊಳಗೆ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. 3,660 ಕೋಟಿ ಮೊತ್ತದ ಆಗಸ್ಟಾ ವೆಸ್ಟ್​ಲ್ಯಾಂಡ್​ ವಿವಿಐಪಿ ಹೆಲಿಕಾಪ್ಟರ್​ ಖರೀದಿ ಹಗರಣದಲ್ಲೂ ರಾತುಲ್​ ಪುರಿ ಹೆಸರು ಕೇಳಿ ಬಂದಿತ್ತು.

ABOUT THE AUTHOR

...view details