ಕರ್ನಾಟಕ

karnataka

ETV Bharat / bharat

ಲಾಕ್​ಡೌನ್​ನಿಂದ ಮರಣದ ಪ್ರಮಾಣ ಇಳಿಕೆಯಾಯ್ತೇ? ಇಲ್ಲಿದೆ ಹರಿಯಾಣ ಚಿತಾಗಾರವೊಂದರ ವರದಿ..

ಕೊರೊನಾ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಲಾಕ್‌ಡೌನ್​ ಪರಿಣಾಮದಿಂದ ಜನರು ತತ್ತರಿಸಿ ಹೋಗಿದ್ದಾರೆ. ಸೋಂಕಿನ ಹೊರತಾದ ಮರಣದ ಪ್ರಮಾಣದ ಕಡಿಮೆಯಾಗಿದೆ ಎಂದು ವರದಿಗಳು ಹೇಳುತ್ತಿವೆ.

corona
ಕೊರೊನಾ

By

Published : Apr 9, 2020, 3:01 PM IST

ಕರ್ನಾಲ್​(ಹರಿಯಾಣ):ಒಂದೆಡೆ ಕೊರೊನಾ ಸಾಕಷ್ಟು ಜೀವಗಳನ್ನು ಬಲಿತೆಗೆದುಕೊಳ್ಳುತ್ತಿದ್ರೆ, ಹರಿಯಾಣದ ಕರ್ನಾಲ್​ ಜಿಲ್ಲೆಯಲ್ಲಿ ಮರಣದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಕರ್ನಾಲ್​ ಜಿಲ್ಲೆಯಲ್ಲಿ ಚಿತಾಗಾರಗಳಿಗೆ ಬರುವ ಮೃತದೇಹಗಳ ಸಂಖ್ಯೆ ಲಾಕ್​ಡೌನ್​ಗೆ ಮೊದಲು ದಿನಕ್ಕೆ 12ರ ಆಸುಪಾಸಿನಲ್ಲಿತ್ತು, ಈಗ 6ಕ್ಕೆ ಇಳಿಕೆಯಾಗಿದೆ. ಚಿತಾಗಾರಗಳ ಮಾಹಿತಿಯಂತೆ ಲಾಕ್​ಡೌನ್​ಗೂ ಮುನ್ನ ಅಂದರೆ ಮಾರ್ಚ್​ 22ಕ್ಕೂ ಮೊದಲು 212 ಮೃತದೇಹಗಳನ್ನು ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಈಗ ಅದರ ಸಂಖ್ಯೆ ಇಳಿಮುಖವಾಗಿದೆ. ಲಾಕ್​ಡೌನ್​ ಆರಂಭದಿಂದ ಏಪ್ರಿಲ್​ 6ರವರೆಗೆ ಕೇವಲ 106 ಮೃತದೇಹಗಳು ಚಿತಾಗಾರಕ್ಕೆ ಬಂದಿವೆ.

ಮರಣದ ಪ್ರಮಾಣ ಕಡಿಮೆಯಾಯ್ತು.. ಜನರು ಹೇಳೋದೇನು?:ಕರ್ನಾಲ್​ನ ಶ್ರೀರಾಮ ಕೃಷ್ಣ ಸಂಕೀರ್ತನ್​ ಮಂಡಲ್​ನ ಉಪಾಧ್ಯಕ್ಷ ''ಲಾಕ್​ಡೌನ್​ನ ನಂತರದಲ್ಲಿ ಚಿತಾಗಾರಕ್ಕೆ ಬರುವ ಮೃತದೇಹಗಳ ಸಂಖ್ಯೆ ಕಡಿಮೆಯಾಗಿದೆ. ಅಪಘಾತಗಳು, ಮಾಲಿನ್ಯ ಕಡಿಮೆ ಇರೋದ್ರಿಂದ ಸಾವಿನ ಸಂಖ್ಯೆ ಕಡಿಮೆಯಾದ ಕಾರಣದಿಂದ ಸಾವಿನ ಸಂಖ್ಯೆ ಕಡಿಮೆಯಾಗಿದೆ'' ಎನ್ನುತ್ತಾರೆ.

ಮರಣ ಪ್ರಮಾಣ ಕಡಿಮೆಯಾಗಿದ್ದಕ್ಕೆ ಪೊಲೀಸರು ಹೀಗಂತಾರೆ :ಕರ್ನಾಲ್​ ಐಜಿ ಭಾರ್ತಿ ಅರೋರಾ ''ಜನರು ಲಾಕ್​ಡೌನ್​ನಿಂದಾಗಿ ಮನೆಯಿಂದ ಹೊರೆಗೆ ಬರುತ್ತಿಲ್ಲ. ಇದರಿಂದಾಗಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಅಪಘಾತಗಳೂ ಸಂಭವಿಸಿಲ್ಲ, ಗ್ಯಾಂಗ್​ವಾರ್​ಗಳೂ ವರದಿಯಾಗುತ್ತಿಲ್ಲ. ಇದರಿಂದಾಗಿ ಮರಣದ ಪ್ರಮಾಣ ಕಡಿಮೆಯಾಗಿರೋ ಸಾಧ್ಯತೆಯಿದೆ'' ಎಂದಿದ್ದಾರೆ. ಹರಿಯಾಣದ ಸಿರ್ಸಾ ಜಿಲ್ಲೆಯಲ್ಲಿ ಅಂತ್ಯಕ್ರಿಯೆಯ ನಂತರ ಗಂಗೆಯಲ್ಲಿ ಚಿತಾಭಸ್ಮ ವಿಸರ್ಜನೆಗೆ ಕೂಡಾ ನಿರ್ಬಂಧ ಹೇರಲಾಗಿದೆ. ಗಂಗಾ ಅಥವಾ ಯಮುನಾ ನದಿಯಲ್ಲಿ ಚಿತಾಭಸ್ಮ ವಿಸರ್ಜನೆಗಾಗಿ 80ಕ್ಕೂ ಹೆಚ್ಚು ಮಂದಿ ಕಾಯುತ್ತಿದ್ದಾರೆ.

ಸಿರ್ಸಾದ ಶಿವಪುರದಲ್ಲಿ ಅಂತ್ಯ ಸಂಸ್ಕಾರ ನಡೆಸಿಕೊಡುವ ಆಚಾರ್ಯ ಭಗೀರಥ್'' ಲಾಕ್​ಡೌನ್​ಗೆ ಮೊದಲು ಇಲ್ಲಿ ದಿನಕ್ಕೆ ಐದರಿಂದ ಏಳು ಮೃತದೇಹಗಳ ಚಿತಾಭಸ್ಮವನ್ನು ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತಿತ್ತು. ಈಗ ದಿನಕ್ಕೆ ಒಂದರಿಂದ ಎರಡು ಚಿತಾಭಸ್ಮಗಳು ಮಾತ್ರವೇ ಇಲ್ಲಿಗೆ ಬರ್ತವೆ'' ಎಂದ್ದಿದಾರೆ. ಚಂಡಿಗಢ್‌ದಲ್ಲಿ ಬೇರೊಂದು ಸಮಸ್ಯೆ ಎದುರಾಗಿದ್ದು, ಲಾಕ್​ಡೌನ್​ನಿಂದಾಗಿ ಚಿತೆಗಳಿಗೆ ಕಟ್ಟಿಗೆ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details