ಪುರೋಲ್:ದಕ್ಷಿಣ ಭಾರತದ 2 ರಾಜ್ಯಗಳು ನೀರಿನಲ್ಲಿ ಮುಳಗಿ ಹೋಗಿ, ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅತ್ತ ಮಹಾರಾಷ್ಟ್ರ, ಉತ್ತರಾಖಂಡ್ ಸೇರಿ ಉತ್ತರ ಭಾರತದ ಹಲವು ರಾಜ್ಯಗಳು ಪ್ರವಾಹದ ಪ್ರಕೋಪಕ್ಕೆ ಬಲಿಯಾಗಿವೆ.
ಮಳೆ ಮಳೆ ಮಳೆ...ಪ್ರವಾಹಕ್ಕೆ ಎದೆಯೊಡ್ಡಿ ನದಿ ದಾಟಿದ್ದು ಸ್ಥಳೀಯರು.. ಹೇಗಿತ್ತು ನೋಡಿ ವಿಡಿಯೋ..! - ಭೂಕುಸಿತ
ನದಿ ದಾಟಲು ಜನ ಸೇತುವೆಗಳಿಲ್ಲದೇ ಹರ ಸಾಹಸ ಪಡುತ್ತಿದ್ದಾರೆ. ಇಲ್ಲಿನ ಸ್ಥಳೀಯರು ಹಗ್ಗದ ಸಹಾಯದಿಂದ ಜೀವ ಕೈಯಲ್ಲಿ ಹಿಡಿದು ನದಿ ದಾಟುವ ದೃಶ್ಯ ಎದೆ ನಡುಗಿಸುವಂತಿದೆ. ಆ ವಿಡಿಯೋ ಈಗ ವೈರಲ್ ಆಗಿದೆ.
ಉತ್ತರ ಕಾಶಿಯ ಪುರಾಲ ಸಹ ಭಾರಿ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಸಂಕಷ್ಟಕ್ಕೀಡಾಗಿದೆ. ನದಿಗಳು ತಮ್ಮ ರೌದ್ರಾವತಾರ ತೋರುತ್ತಿವೆ. ನದಿ ದಾಟಲು ಜನ ಸೇತುವೆಗಳಿಲ್ಲದೇ ಹರ ಸಾಹಸ ಪಡುತ್ತಿದ್ದಾರೆ. ಇಲ್ಲಿನ ಸ್ಥಳೀಯರು ಎನ್ಡಿಆರ್ಎಫ್ ಟೀಂ ಸಹಾಯದೊಂದಿಗೆ ಹಗ್ಗದ ಮೂಲಕ ಜೀವ ಕೈಯಲ್ಲಿ ಹಿಡಿದು ನದಿ ದಾಟುವ ದೃಶ್ಯ ಎದೆ ನಡುಗಿಸುವಂತಿದೆ. ಆ ವಿಡಿಯೋ ಈಗ ವೈರಲ್ ಆಗಿದೆ.
ಪುರೋಲಿ ಗ್ರಾಮದಲ್ಲಿ ನಾಲ್ಕು ಹಳ್ಳಿಗಳು ಕಳೆದ ನಾಲ್ಕುದಿನಗಳಿಂದ ನಾಗರಿಕ ಸಮಾಜದಿಂದ ಸಂಪರ್ಕ ಕಳೆದುಕೊಂಡಿದ್ದು, ಭಾರಿ ಭೂಕುಸಿತ ಹಾಗೂ ಸತತ ಆರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕಂಗೆಟ್ಟಿದ್ದಾರೆ.