ಕರ್ನಾಟಕ

karnataka

ETV Bharat / bharat

ಕವಿತೆಗಳಲ್ಲಿ ಆಘಾತ, ದುಃಖ, ಸಾವು, ಶಮನ ಪರಿಶೋಧಿಸುವ ಲೂಯಿಸ್​​ಗೆ 'ನೊಬೆಲ್' ಪ್ರಶಸ್ತಿ ಬರಿ ಪದಕವಷ್ಟೆ! - ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ

ಆರು ದಶಕಗಳ ವೃತ್ತಿಜೀವನದಲ್ಲಿ ಲೂಯಿಸ್ ಗ್ಲಿಕ್​​​ ಅವರು ತಮ್ಮ ಕವಿತೆಗಳಲ್ಲಿ ಆಘಾತ, ಸಾವು ಮತ್ತು ಶಮನದ ಪರಿಶೋಧನೆ ನಡೆಸಿದ್ದಾರೆ. ಅಚ್ಚರಿ, ಬಯಕೆ ಮತ್ತು ನೈಸರ್ಗಿಕ ಪ್ರಕಾಶಮಾನ ಮಹತ್ವದ ಅಂಶಗಳನ್ನು ಮನೋಜ್ಞವಾಗಿ ಕೇಂದ್ರೀಕರಿಸಿದ್ದಾರೆ. ಈ ವಿಶಾಲ ವಿಷಯಗಳನ್ನು ಅನ್ವೇಷಿಸುವಲ್ಲಿ ಅವರ ಕಾವ್ಯವು ದುಃಖ ಮತ್ತು ಪ್ರತ್ಯೇಕತೆಯ ಸ್ಪಷ್ಟ ಮುಖಭಾವಕ್ಕೆ ಹೆಸರುವಾಸಿಯಾಗಿದೆ. ಅವಳ ಕವಿತೆಗಳಲ್ಲಿ ಆತ್ಮಚರಿತ್ರೆ ಮತ್ತು ಶಾಸ್ತ್ರೀಯ ಪುರಾಣಗಳ ನಡುವಿನ ಕಾವ್ಯಾತ್ಮಕ ವ್ಯಕ್ತಿತ್ವ ಮತ್ತು ಸಂಬಂಧದ ಬಗ್ಗೆ ವಿದ್ವಾಂಸರು ಬಣ್ಣಿಸಿದ್ದಾರೆ.

ouise
ಲೂಯಿಸ್

By

Published : Oct 8, 2020, 8:13 PM IST

"ಅವಳದ್ದು ಸ್ಪಷ್ಟವಾದ ಕಾವ್ಯಾತ್ಮಕ ಧ್ವನಿ

ಕಠಿಣ ಸೌಂದರ್ಯದಿಂದ ವೈಯಕ್ತಿಕ

ಅಸ್ತಿತ್ವವನ್ನೂ ಸಾರ್ವತ್ರಿಕಗೊಳಿಸುವವಳು..."

...ನೊಬೆಲ್​ ಪ್ರಶಸ್ತಿಯ ಜವಾಬ್ದಾರಿ ನೋಡಿಕೊಳ್ಳುವ ಸ್ವೀಡಿಷ್ ಅಕಾಡೆಮಿ ಅಮೆರಿಕದ ಮಹಿಳಾ ಕವಯತ್ರಿ ಲೂಯಿಸ್ ಗ್ಲಿಕ್​​ ಅವರ ಕಾವ್ಯದ ಒಳನೋಟವನ್ನು ಮೇಲಿನಂತೆ ಬಣ್ಣಿಸಿ, 2020ನೇ ಸಾಲಿನ ಪ್ರತಿಷ್ಠಿತ ಸಾಹಿತ್ಯ ನೊಬೆಲ್​ ಪ್ರಶಸ್ತಿ ಘೋಷಿತು.

1968ರಲ್ಲಿ 'ಫಸ್ಟ್‌ಬಾರ್ನ್‌' ಕವನ ಸಂಕಲನದ ಮೂಲಕ ಸಾಹಿತ್ಯ ಜಗತ್ತಿಗೆ ಪ್ರವೇಶಿಸಿದ್ದ ಲೂಯಿಸ್​, ಪ್ರಶಸ್ತಿ ರೇಸ್​ನಲ್ಲಿ ಫ್ರೆಂಚ್ ಗ್ವಾಡೆಲೋಪಿಯನ್ ಲೇಖಕ ಮೇರಿಸ್ ಕಾಂಡೆ, ಕೆನಡಾದ ಕಾದಂಬರಿಕಾರ ಮಾರ್ಗರೇಟ್ ಅಟ್ವುಡ್, ರಷ್ಯಾದ ಕಾದಂಬರಿಕಾರ ಲ್ಯುಡ್ಮಿಲಾ ಉಲಿಟ್​ಸ್ಕಾಯಾ ಮತ್ತು ಜಪಾನಿನ ಬರಹಗಾರ ಹರುಕಿ ಮುರಕಾಮಿ ಅವರಂತಹ ದಿಗ್ಗಜ ಸಾಹಿತ್ಯಗಳನ್ನು ಹಿಂದಿಕ್ಕಿದರು.

ನ್ಯೂಯಾರ್ಕ್​ನಲ್ಲಿ 1943ರ ಏಪ್ರಿಲ್​ 22ರಂದು ಜನಿಸಿದ ಲೂಯಿಸ್​, ಲಾಂಗ್ ಐಲ್ಯಾಂಡ್​​ನಲ್ಲಿ ಬೆಳೆದು ಈಗ ಮೆಸಾಚೂಸೆಟ್​ನ ಕೇಂಬ್ರಿಡ್ಜ್​ನಲ್ಲಿ ವಾಸಿಸುತ್ತಿದ್ದಾರೆ. ಪ್ರೌಢಶಾಲೆಯಲ್ಲಿ ಇದ್ದಾಗಲೇ ಅನೋರೆಕ್ಸಿಯಾ ನರ್ವೋಸಾದಿಂದ (ಹಸಿವಿನ ಕಾಯಿಲೆ) ಬಳಲುತ್ತಿದ್ದರು. ಆ ನಂತರ ತಮ್ಮ ಅನಾರೋಗ್ಯವನ್ನು ಮೆಟ್ಟಿ ನಿಂತರು. ಸಾರಾ ಲಾರೆನ್ಸ್ ಕಾಲೇಜು ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದ ಅವರು ಪದವಿ ಶಿಕ್ಷಣ ಪೂರ್ಣಗೊಳಿಸಿಲ್ಲ.

ಬರವಣಿಗೆಯ ಹೊರತಾಗಿ ಕನೆಕ್ಟಿಕಟ್‌ನ ನ್ಯೂ ಹೆವನ್‌ನ ಯೇಲ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಕಲಿಸುವುದು ಅವಳ ದೈನಂದಿನ ಕೆಲಸದ ಭಾಗವಾಗಿದೆ. ಗ್ಲಿಕ್​​​​ ಈ ಹಿಂದೆ 1993ರಲ್ಲಿ "ದಿ ವೈಲ್ಡ್ ಐರಿಸ್" ಮತ್ತು 2014ರಲ್ಲಿ ರಾಷ್ಟ್ರೀಯ ಪುಸ್ತಕ ಪ್ರಶಸ್ತಕಕ್ಕೆ ಪುಲಿಟ್ಜೆರ್ ಪ್ರಶಸ್ತಿ ಪಡೆದಿದ್ದಾರೆ. ಗ್ಲುಕ್​​ 12 ಕವನ ಸಂಕಲನಗಳು ಮತ್ತು ಕಾವ್ಯದ ಬಗೆಗಿನ ಪ್ರಬಂಧಗಳ ಪುಸ್ತಕಗಳನ್ನು "ಪ್ರೂಫ್ಸ್ ಆ್ಯಂಡ್ ಥಿಯರೀಸ್" ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಆರು ದಶಕಗಳ ವೃತ್ತಿಜೀವನದಲ್ಲಿ ಗ್ಲಿಕ್​​​ ಅವರು ತಮ್ಮ ಕವಿತೆಗಳಲ್ಲಿ ಆಘಾತ, ಸಾವು ಮತ್ತು ಶಮನದ ಪರಿಶೋಧನೆ ನಡೆಸಿದ್ದಾರೆ. ಅಚ್ಚರಿ, ಬಯಕೆ ಮತ್ತು ನೈಸರ್ಗಿಕ ಪ್ರಕಾಶಮಾನ ಮಹತ್ವದ ಅಂಶಗಳನ್ನು ಮನೋಜ್ಞವಾಗಿ ಕೇಂದ್ರೀಕರಿಸಿದ್ದಾರೆ. ಈ ವಿಶಾಲ ವಿಷಯಗಳನ್ನು ಅನ್ವೇಷಿಸುವಲ್ಲಿ ಅವರ ಕಾವ್ಯವು ದುಃಖ ಮತ್ತು ಪ್ರತ್ಯೇಕತೆಯ ಸ್ಪಷ್ಟ ಮುಖಭಾವಕ್ಕೆ ಹೆಸರುವಾಸಿಯಾಗಿದೆ. ಅವಳ ಕವಿತೆಗಳಲ್ಲಿ ಆತ್ಮಚರಿತ್ರೆ ಮತ್ತು ಶಾಸ್ತ್ರೀಯ ಪುರಾಣಗಳ ನಡುವಿನ ಕಾವ್ಯಾತ್ಮಕ ವ್ಯಕ್ತಿತ್ವ ಮತ್ತು ಸಂಬಂಧದ ಬಗ್ಗೆ ವಿದ್ವಾಂಸರು ಬಣ್ಣಿಸಿದ್ದಾರೆ.

ಅಕಾಡೆಮಿ ಅವಳನ್ನು ಹೆಸರನ್ನು ಸೂಚಿಸಿದಾಗ, ಅವಳು ಸಾರ್ವತ್ರಿಕತೆಯನ್ನು ಹುಡುಕುತ್ತಾಳೆ. ಇದರಲ್ಲಿ ಅವಳು ಪುರಾಣ ಮತ್ತು ಶಾಸ್ತ್ರೀಯ ಲಕ್ಷಣಗಳಿಂದ ಸ್ಫೂರ್ತಿ ಪಡೆಯುತ್ತಾಳೆ. ಅವಳ ಹೆಚ್ಚಿನ ಕೃತಿಗಳು ಇಂದಿನ ವಸ್ತುಸ್ಥಿತಿಗೆ ಪ್ರಸ್ತುತವಾಗಿವೆ. 2006ರ 'ಅವೆರ್ನೊ' ಸಂಗ್ರಹವು 'ವಿದ್ವತ ಪೂರ್ಣ ಸಂಗ್ರಹವಾಗಿದೆ. ಇದು ಪರ್ಸೆಫೋನ್ (ದೇವತೆ) ನರಕಕ್ಕೆ ಇಳಿಯುವ ಪುರಾಣದ ದೂರದೃಷ್ಟಿಯ ವ್ಯಾಖ್ಯಾನವಾಗಿದೆ. ಇದು ಸಾವಿನ ದೇವರು ಹೇಡಸ್​ನ ಸೆರೆಯಲ್ಲಿ' ಎಂದು ಪ್ರಶಂಸಿಸಿದೆ.

ಗ್ಲಿಕ್​ ಅವರು 2003ರಲ್ಲಿ ಅಮೆರಿಕ ಕವಿ ಪ್ರಶಸ್ತಿ ವಿಜೇತರಾಗಿ ನೇಮಕಗೊಂಡು, 2016ರಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮರಿಂದ ರಾಷ್ಟ್ರೀಯ ಮಾನವಿಕ ಪದಕ ಸ್ವೀಕರಿಸಲು ಶ್ವೇತಭವನಕ್ಕೆ ಭೇಟಿ ನೀಡಿದ್ದು ಅವರ ಪ್ರತಿಭೆಗೆ ದೊರೆತ ಮನ್ನಣೆ.

ಗ್ಲಿಕ್​​​ ಅವರು ಸಾಹಿತ್ಯ ನೊಬೆಲ್ ಪ್ರಶಸ್ತಿ ಪಡೆದ 16ನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1909ರಲ್ಲಿ ಸೆಲ್ಮಾ ಲಾಗರ್ಲೋಫ್, 1938ರಲ್ಲಿ ಪರ್ಲ್ ಎಸ್ ಬಕ್, 1991ರಲ್ಲಿ ನಾಡಿನ್ ಗೋರ್ಡಿಮರ್, 1993ರಲ್ಲಿ ಟೋನಿ ಮಾರಿಸನ್, 2007ರಲ್ಲಿ ಡೋರಿಸ್ ಲೆಸ್ಸಿಂಗ್ ಮತ್ತು 2013ರಲ್ಲಿ ಆಲಿಸ್ ಮುನ್ರೋ ಸೇರಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಹಗರಣ, ವಿವಾದ ಮತ್ತು ಸಾಕಷ್ಟು ಅಪರಿಚಿತ ಹೆಸರುಗಳನ್ನು ಪ್ರಸ್ತಾಪಿಸಿ ಟೀಕೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದ ಸ್ವೀಡಿಷ್ ಅಕಾಡೆಮಿ ಗುರುವಾರ ಲೂಯಿಸ್ ಗ್ಲಿಕ್​​​​ ಅವರಿಗೆ 2020ರ ನೊಬೆಲ್ ಸಾಹಿತ್ಯ ಪ್ರಶಸ್ತಿ ಪುರಸ್ಕಾರ ಘೋಷಿಸಿ ತಾನು ಕಿರೀಟ ಮುಡಿಗೇರಿಸಿಕೊಂಡಿದೆ. ಈ ವರ್ಷ ಜಾಗತಿಕ ಅನುಭವದ ಬಗ್ಗೆ ಬರೆದ ಕೆಲವು ಅತ್ಯುತ್ತಮ ಬರಹಗಾರರು ಮತ್ತು ಕಾದಂಬರಿಕಾರರ ನಡುವಿನ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಿತು. ಇವರೆಲ್ಲರಿಗಿಂತ ಒಂದು ಅಂಗುಲದಷ್ಟು ಮುಂದೆ ಇದ್ದ ಗ್ಲಿಕ್​, 2020ರ ಪ್ರಶಸ್ತಿಗೆ ಭಾಜನರಾದರು.

ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣದಿಂದಾಗಿ 2018ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್‌ ಪ್ರಶಸ್ತಿಯನ್ನು ಘೋಷಿಸಲಿಲ್ಲ. ಆ ವರ್ಷದ ಪ್ರಶಸ್ತಿಯನ್ನು 2019ರಲ್ಲಿ ಪೋಲೆಂಡ್‌ನ ಬರಹಗಾರ್ತಿ ಓಲ್ಗಾ ಟೊಕಾರ್‌ಝುಕ್‌ (2018) ಹಾಗೂ ಆಸ್ಟ್ರೇಲಿಯಾದ ನಾಟಕಕಾರ ಪೀಟರ್‌ ಹಂಡ್ಕೆ (2019) ಅವರಿಗೆ ನೀಡಲಾಯಿತು. ಪೀಟರ್‌ ಹಂಡ್ಕೆ ಅವರು ಜರ್ಮನ್‌ ಭಾಷೆಯಲ್ಲಿ ಬರೆಯುವ ಲೇಖಕ. ತಮ್ಮ ಕಡು ಟೀಕೆಗಳಿಂದ ಅವರು ಬಹಳಷ್ಟು ವಿರೋಧಗಳನ್ನು ಕಟ್ಟಿಕೊಂಡವರು. 929ರಲ್ಲಿ ನೊಬೆಲ್‌ ಸಾಹಿತ್ಯ ಪ್ರಶಸ್ತಿ ಪಡೆದಿದ್ದ ಜರ್ಮನ್‌ನ ಥಾಮಸ್‌ ಮನ್‌ ಒಬ್ಬ ಕೆಟ್ಟ ಬರಹಗಾರ ಎಂಬ ಹೇಳಿಕೆ ನೀಡಿದ್ದರು. ನೊಬೆಲ್‌ ಪ್ರಶಸ್ತಿಯನ್ನೇ ಸ್ಥಗಿತಗೊಳಿಸಬೇಕು ಎಂದು ಕೂಡ ಹೇಳಿದ್ದರು. ಹಂಡ್ಕೆ ಅಂತವರಿಗೆ ಪ್ರಶಸ್ತಿ ನೀಡಿ, ಅಕಾಡೆಮಿಯು ಸ್ವಲ್ಪ ಇರಿಸು-ಮುರಿಸಿಗೆ ಒಳಗಾಗಿತ್ತು. ಈ ಬಾರಿ ಅಂತಹ ಪ್ರಮಾದ ಎಸಗಲಿಲ್ಲ.

ABOUT THE AUTHOR

...view details