ಹೈದರಾಬಾದ್: ಲಾಕ್ಡೌನ್ನಿಂದಾಗಿ ಎಲ್ಲರೂ ಮನೆಯಲ್ಲೇ ಲಾಕ್ ಆಗಿರುವ ಸಮಯದಲ್ಲಿ ಭಾರತದ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ (HRD) ಹಲವಾರು ಆನ್‌ಲೈನ್ ಕೋರ್ಸ್‌ಗಳನ್ನು ಪ್ರಾರಂಭಿಸಿದೆ.
ಪರಿಸರವನ್ನು ಪ್ರೀತಿಸುವ ಮತ್ತು ಪರಿಸರದ ರಕ್ಷಣೆಗೆ ಕೆಲಸ ಮಾಡಲು ಉತ್ಸುಕರಾಗಿರುವ ಜನರಿಗೆ ಸಚಿವಾಲಯವು eGyanKosh ಅನ್ನು ಪರಿಚಯಿಸಿದೆ.
eGyanKosh ಪವನಶಕ್ತಿ, ಸೌರ ಶಕ್ತಿ, ತ್ಯಾಜ್ಯ ನಿರ್ವಹಣೆ, ವೈಲ್ಡ್ ಲೈಫ್ ಸೇರಿದಂತೆ ಇತರ ಹೆಚ್ಚಿನ ವಿಷಯಗಳ ಬಗ್ಗೆ ಶಿಕ್ಷಣ ನೀಡುತ್ತದೆ. ಇದರ ಆನ್‌ಲೈನ್ ಲಿಂಕ್ ಇಲ್ಲಿದೆ...
http://egyankosh.ac.in/handle/123456789/60099
ಪದವಿ ಮತ್ತು ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಷಯಗಳನ್ನು ಒಳಗೊಂಡ ವರ್ಚುವಲ್ ಲ್ಯಾಬ್‌ಗಳಿಗೆ ಮನೆಯಲ್ಲಿದ್ದೇ ಪ್ರವೇಶ ಪಡೆಯಬಹುದು. ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್, ಫಿಸಿಕಲ್ ಸೈನ್ಸಸ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಸೇರಿದಂತೆ ಇತರ ಕೆಲ ವಿಷಯಗಳು ಈ ಕೋರ್ಸ್ನಲ್ಲಿ ಇರಲಿವೆ. ವೆಬ್ ಸಂಪನ್ಮೂಲಗಳು, ವಿಡಿಯೋ- ಉಪನ್ಯಾಸ, ಅನಿಮೇಟೆಡ್ ಪ್ರದರ್ಶನಗಳಿಗೆ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುತ್ತದೆ. ಸ್ವಯಂ ಮೌಲ್ಯಮಾಪನ ಪ್ರಕ್ರಿಯೆಯನ್ನು ಕೂಡಾ ಅನುಸರಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ, http://www.vlab.co.in/ ಲಿಂಕ್ ಅನ್ನು ಕ್ಲಿಕ್ ಮಾಡಿ.
ಇನ್ನೊಂದೆಡೆ ಈಗಾಗಲೇ ಆರಂಭಿಸಿರುವ ಫಿಟ್ ಇಂಡಿಯಾ ಯೂಟ್ಯೂಬ್ ಚಾನೆಲ್‌ನಲ್ಲಿ ಹೆಚ್‌ಆರ್‌ಡಿ ಸಚಿವಾಲಯವು ಲೈವ್ ಫಿಟ್‌ನೆಸ್ ತರಗತಿಗಳನ್ನು ಪ್ರಾರಂಭಿಸಿದೆ.