ಕರ್ನಾಟಕ

karnataka

20 ಭಾರತೀಯ ಮೀನುಗಾರರ ರಿಲೀಸ್​ ಮಾಡಿದ ಪಾಕ್...​ ಅಟ್ಟಾರಿ-ವಾಘಾ ಗಡಿ ಮೂಲಕ ತಾಯ್ನಾಡಿಗೆ!

By

Published : Jan 6, 2020, 10:16 PM IST

ಪಾಕಿಸ್ತಾನದಿಂದ ಬಂಧನವಾಗಿದ್ದ 20 ಮೀನುಗಾರರನ್ನ ಇದೀಗ ಪಾಕ್​ ಭಾರತ ಸರ್ಕಾರಕ್ಕೆ ಹಸ್ತಾಂತರ ಮಾಡಿದೆ.

Pak Rangers handover 20 Indian fishermen
20 ಭಾರತೀಯ ಮೀನುಗಾರರ ರಿಲೀಸ್​ ಮಾಡಿದ ಪಾಕ್

ಇಸ್ಲಮಾಬಾದ್​:ಕಳೆದ ವರ್ಷ ನವೆಂಬರ್​ನಲ್ಲಿ ಪಾಕ್​ ಸಾಗರ ಭದ್ರತಾ ಸಂಸ್ಥೆಯಿಂದ ಬಂಧನಕ್ಕೊಳಗಾಗಿದ್ದ 20 ಭಾರತೀಯ ಮೀನುಗಾರರನ್ನು ಇಂದು ಪಾಕ್​ ಸರ್ಕಾರ ಭಾರತಕ್ಕೆ ಹಸ್ತಾಂತರ ಮಾಡಿದೆ.

20 ಭಾರತೀಯ ಮೀನುಗಾರರ ರಿಲೀಸ್​ ಮಾಡಿದ ಪಾಕ್

ಎಲ್ಲ ಮೀನುಗಾರರು ಅಟ್ಟಾರಿ-ವಾಘಾ ಗಡಿ ಮೂಲಕ ತಾಯ್ನಾಡಿಗೆ ಆಗಮಿಸಿದ್ದಾರೆ. ಪಾಕ್​​ ಸಮುದ್ರ ಸರಹದ್ದಿನಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ್ದ ಆರೋಪದ ಮೇಲೆ ಈ ಮೀನುಗಾರರು ಬಂಧನಕ್ಕೊಳಗಾಗಿದ್ದರು. ಇದಾದ ಬಳಿಕ ಇವರನ್ನ ಲಾಹೋರ್​ನ ಮರ್ಲಿರ್​ ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿ ಇರಿಸಿತ್ತು. ಇಂದು ಸಂಜೆ 6 ಗಂಟೆಗೆ ಈ ಮೀನುಗಾರರನ್ನ ಭಾರತೀಯ ಯೋಧರಗೆ ಹಸ್ತಾಂತರ ಮಾಡಲಾಗಿದೆ.

ಇನ್ನು 189 ಭಾರತೀಯ ಮೀನುಗಾರರು ಪಾಕ್​ ವಶದಲ್ಲಿದ್ದು, ಅವರ ಬಿಡುಗಡೆಗಾಗಿ ಉಭಯ ದೇಶಗಳ ನಡುವೆ ಮಾತುಕತೆ ನಡೆದಿದೆ.

ABOUT THE AUTHOR

...view details