ಕರ್ನಾಟಕ

karnataka

ETV Bharat / bharat

ಪೊಲೀಸ್​ ವ್ಯವಸ್ಥೆ ಬಗ್ಗೆ ಮುಖಂಡನ ಹಗುರ ಮಾತು​: ಸ್ಥಳದಲ್ಲೇ ಮಹಿಳಾ ಸರ್ಕಲ್​ ಇನ್ಸ್​ಪೆಕ್ಟರ್ ತಿರುಗೇಟು - ಇನ್ಸ್​ಪೆಕ್ಟರ್​ ಮಂಗದೇವಿ

ಕಾರ್ಯಕ್ರಮವೊಂದರಲ್ಲಿ ಪೊಲೀಸ್​ ವ್ಯವಸ್ಥೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ ಸ್ಥಳದಲ್ಲೇ ಉಪಸ್ಥಿತರಿದ್ದ ಮಹಿಳಾ ಸರ್ಕಲ್​ ಇನ್ಸ್​ ಪೆಕ್ಟರ್​ ತಿರುಗೇಟು ನೀಡಿದ ಘಟನೆ ನಡೆಯಿತು.

comments on police system
comments on police system

By

Published : Jan 7, 2021, 7:43 PM IST

ಪೂರ್ವ ಗೋದಾವರಿ (ಆಂಧ್ರಪ್ರದೇಶ):ಪೊಲೀಸ್​ ವ್ಯವಸ್ಥೆ ಬಗ್ಗೆ ಆಡಳಿತ ಪಕ್ಷ ವೈಎಸ್​ಆರ್​ಸಿಪಿ ಕಾಂಗ್ರೆಸ್​ ಮುಖಂಡನೋರ್ವ ಕೆಟ್ಟದಾಗಿ ಕಾಮೆಂಟ್​ ಮಾಡ್ತಿದ್ದಂತೆ ಸ್ಥಳದಲ್ಲಿ ಉಪಸ್ಥಿತರಿದ್ದ ಮಹಿಳಾ ಸರ್ಕಲ್​ ಇನ್ಸ್​ಪೆಕ್ಟರ್​ ತಕ್ಕ ಪ್ರತ್ಯುತ್ತರ ಕೊಟ್ಟರು. ಈ ಘಟನೆ ಪೂರ್ವ ಗೋದಾವರಿಯ ಕಪಿಲೇಶ್ವರ ಮಂಡಲದ ತಥಪುಡಿಯಲ್ಲಿ ನಡೆದಿದೆ.

ಮಹಿಳಾ ಸರ್ಕಲ್​ ಇನ್ಸ್​ಪೆಕ್ಟರ್ ತಿರುಗೇಟು​

ಓದಿ: 3ನೇ ಹಂತದ ಕ್ಲಿನಿಕಲ್​ ಪ್ರಯೋಗಕ್ಕಾಗಿ 25,800 ಸ್ವಯಂ ಸೇವಕರ ನೇಮಕ: ಭಾರತ್​ ಬಯೋಟೆಕ್​

ಕಾಪು ಚಳವಳಿ ಸಮಯದಲ್ಲಿ ಕೇವಲ ಒಂದು ಸಮಾಜದ ಗುಂಪಿನ ಮೇಲೆ ಪ್ರಕರಣ ದಾಖಲಾಗಿವೆ ಎಂದು ಉಲ್ಲೇಖಿಸಿ ಪೊಲೀಸ್​ ವ್ಯವಸ್ಥೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ತಕ್ಷಣವೇ ಮಂದಪೇಟ ಗ್ರಾಮೀಣ ಪೊಲೀಸ್​ ಇಲಾಖೆ ಸರ್ಕಲ್​ ಇನ್ಸ್​ಪೆಕ್ಟರ್​ ಮಂಗದೇವಿ ರಾಜಕೀಯ ಮುಖಂಡರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ ಅದರಲ್ಲಿ ಕೆಟ್ಟದಾಗಿ ನಡೆದುಕೊಂಡಿರುವ ಅಧಿಕಾರಿಗಳನ್ನು ಮಾತ್ರ ಟೀಕಿಸಿ ಎಂದು ತಿಳಿಸಿದ್ದಾರೆ.

ABOUT THE AUTHOR

...view details