ಕರ್ನಾಟಕ

karnataka

ETV Bharat / bharat

ಭಾರತ - ಚೀನಾ ಸಂಘರ್ಷ: ಹಿಮಾಚಲ ಪ್ರದೇಶದ ಜಿಲ್ಲೆಗಳಲ್ಲಿ ಹೈ ಅಲರ್ಟ್​​​​​​ - ಭಾರತ ಚೀನಾ ಸಂಬಂಧ

ಲೈನ್​ ಆಫ್​ ಆಕ್ಚುವಲ್​ ಕಂಟ್ರೋಲ್​ನಲ್ಲಿ ಭಾರತ ಚೀನಾ ಸಮಸ್ಯೆ ಬಿಗಡಾಯಿಸಿದೆ. ಈ ಹಿನ್ನೆಲೆಯಲ್ಲಿ ಎಲ್​ಎಸಿ ಬಳಿಯಿರುವ ಹಿಮಾಚಲ ಪ್ರದೇಶ ರಾಜ್ಯದ ಜಿಲ್ಲೆಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ.

Himachal Pradesh high alert
ಹಿಮಾಚಲ ಪ್ರದೇಶದಲ್ಲಿ ಹೈಅಲರ್ಟ್​​

By

Published : Jun 17, 2020, 9:13 AM IST

ಶಿಮ್ಲಾ(ಹಿಮಾಚಲ ಪ್ರದೇಶ): ಪೂರ್ವ ಲಡಾಖ್​ನ ಗಾಲ್ವನ್​ ಕಣಿವೆಯಲ್ಲಿ ಭಾರತ - ಚೀನಾ ಸಂಘರ್ಷ ತಾರಕಕ್ಕೆ ಏರಿರುವ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಅಲ್ಲಿನ ಸರ್ಕಾರ ಹೈ ಅಲರ್ಟ್​ ಘೋಷಣೆ ಮಾಡಿದೆ.

ಹಿಮಾಚಲ ಪ್ರದೇಶದ ಲೈನ್​ ಆಫ್​ ಆಕ್ಚುವಲ್​ ಕಂಟ್ರೋಲ್​ ಬಳಿಯಿರುವ ಪ್ರದೇಶಗಳಾದ ಕಿನ್ನೌರ್​​, ಲಾಹೌಲ್​ - ಸ್ಪಿತಿ ಜಿಲ್ಲೆಗಳಲ್ಲಿ ಜನರ ಸುರಕ್ಷತೆ ದೃಷ್ಟಿಯಿಂದ ಹೈ - ಅಲರ್ಟ್​ ಘೋಷಣೆ ಮಾಡಲಾಗಿದೆ. ಈ ಸಂಬಂಧ ಎಲ್ಲ ಇಂಟೆಲಿಜೆನ್ಸ್​ ಏಜೆನ್ಸಿಗಳನ್ನು ಅಲರ್ಟ್​ ಮಾಡಲಾಗಿದೆ ಎಂದು ಹಿಮಾಚಲ ಪ್ರದೇಶ ರಾಜ್ಯದ ಪೊಲೀಸ್ ವಕ್ತಾರ ಕುಶಾಲ್​ ಶರ್ಮ ಅಭಿಪ್ರಾಯಪಟ್ಟಿದ್ದಾರೆ.

ಚೀನಾ ಮತ್ತು ಭಾರತದ ಸಂಘರ್ಷದಿಂದ ಗಡಿಗೆ ಸಮೀಪದಲ್ಲಿರುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಂಟೆಲಿಜೆನ್ಸ್​ನಿಂದ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಕುಶಾಲ್​ ಶರ್ಮ ಸ್ಪಷ್ಟಪಡಿಸಿದ್ದಾರೆ.

ಲೈನ್​ ಆಫ್​ ಕಂಟ್ರೋಲ್​​ಗೆ ಅಂಟಿಕೊಂಡಂತೆ ಕಿನ್ನೌರ್​ ಜಿಲ್ಲೆಯಲ್ಲಿ ಸುಮಾರು 14 ಗ್ರಾಮಗಳಿದ್ದು, ಸ್ಥಳೀಯರಿಗೆ ಗಡಿಭಾಗಗಳಿಗೆ ತೆರಳದಂತೆ ಸೂಚನೆ ನೀಡಲಾಗಿದೆ. ಈ ಗ್ರಾಮಗಳಲ್ಲಿ ಸೇನಾ ವಾಹನಗಳು ಕೆಲವೊಂದು ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಈಟಿವಿ ಭಾರತಕ್ಕೆ ಉನ್ನತ ಮೂಲಗಳು ಮಾಹಿತಿ ನೀಡಿವೆ.

ABOUT THE AUTHOR

...view details