ಕರ್ನಾಟಕ

karnataka

ETV Bharat / bharat

ಉಪಚುನಾವಣೆ ಮುಂದೂಡುವಂತೆ ಮತ್ತೆ ಸುಪ್ರೀಂ ಕದ ತಟ್ಟಿದ ಅನರ್ಹ ಶಾಸಕರು... ಕೋರ್ಟ್​ ಹೇಳಿದ್ದೇನು?

ಅನರ್ಹರ ಶಾಸಕರ ಪರವಾಗಿ ವಕೀಲ ಮುಕುಲ್ ರೋಹ್ಟಗಿ ಅವರು ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅವರು ಒಳಗೊಂಡ ಇಬ್ಬರು ನ್ಯಾಯಮೂರ್ತಿಗಳ ಪೀಠದ ಮುಂದೆ ಉಪಚುನಾವಣೆ ಮುಂದೂಡುವ ವಿಷಯ ಪ್ರಸ್ತಾಪಿಸಿದ್ದಾರೆ. ಮೊದಲು ಈ ಬಗ್ಗೆ ಅರ್ಜಿಯನ್ನು ಸಲ್ಲಿಸಿ, ನಂತರ ಏನು ಮಾಡಬೇಕೆ ಎಂಬುದುನ್ನು ಪರಿಶೀಲಿಸಿ ತಿಳಿಸಲಾಗುವುದು ಎಂದು ನ್ಯಾಯಪೀಠ ರೋಹ್ಟಗಿ ಅವರಿಗೆ ಸೂಚಿಸಿತು.

ಸುಪ್ರೀಂಕೋರ್ಟ್​

By

Published : Nov 8, 2019, 1:34 PM IST

Updated : Nov 8, 2019, 2:40 PM IST

ನವದೆಹಲಿ: ಡಿಸೆಂಬರ್ 5ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭಾ ಉಪಚುನಾವಣೆ ದಿನಾಂಕ ಮುಂದೂಡುವಂತೆ ರಾಜ್ಯದ ಕಾಂಗ್ರೆಸ್ - ಜೆಡಿಎಸ್​ನ ಅನರ್ಹ ಶಾಸಕರು ಶುಕ್ರವಾರ ಸುಪ್ರೀಂ ಕೋರ್ಟ್​ಗೆ ಮನವಿ ಮಾಡಿದ್ದಾರೆ.

ಅನರ್ಹರ ಶಾಸಕರ ಪರವಾಗಿ ವಕೀಲ ಮುಕುಲ್ ರೋಹ್ಟಗಿ ಅವರು ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅವರು ಒಳಗೊಂಡ ಇಬ್ಬರು ನ್ಯಾಯಮೂರ್ತಿಗಳ ಪೀಠದ ಮುಂದೆ ಈ ವಿಷಯ ಪ್ರಸ್ತಾಪಿಸಿದ್ದಾರೆ. ಮೊದಲು ಈ ಬಗ್ಗೆ ಅರ್ಜಿಯನ್ನು ಸಲ್ಲಿಸಿ, ನಂತರ ಏನು ಮಾಡಬೇಕು ಎಂಬುದುನ್ನು ಪರಿಶೀಲಿಸಿ ತಿಳಿಸಲಾಗುವುದು ಎಂದು ನ್ಯಾಯಪೀಠ ರೋಹಟ್ಗಿ ಅವರಿಗೆ ಸೂಚಿಸಿತ್ತು.

ಅನರ್ಹತೆಯಿಂದ ತೆರವಾದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನವೆಂಬರ್ 11ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಅವರ ಅನರ್ಹತೆ ವಿರುದ್ಧದ ತೀರ್ಪು ಇನ್ನೂ ನ್ಯಾಯಾಲಯದಿಂದ ಬಾಕಿ ಉಳಿದಿದೆ ಎಂದು ರೋಹ್ಟಗಿ ಹೇಳಿದರು.

ಕಳೆದ ಜುಲೈನಲ್ಲಿ 17 ಶಾಸಕರು ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದು, ಸರ್ಕಾರದ ಬಹುಮತ ಸಾಬೀತುಪಡಿಸುವ ದಿನ ದೂರು ಉಳಿದರು. ಹೀಗಾಗಿ, ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರು. ಇದನ್ನು ಪ್ರಶ್ನಿಸಿ ಅನರ್ಹ ಶಾಸಕರು ನ್ಯಾಯಾಲಯದ ಮೊರೆ ಹೋದರು.

Last Updated : Nov 8, 2019, 2:40 PM IST

ABOUT THE AUTHOR

...view details