ಕರ್ನಾಟಕ

karnataka

By

Published : Mar 25, 2020, 8:36 PM IST

ETV Bharat / bharat

ಕೇರಳದಲ್ಲಿ ಮತ್ತೆ 9 ಮಂದಿಗೆ ಕೋವಿಡ್‌: ದೇಶದಲ್ಲಿ ಸೋಂಕಿತರ ಸಂಖ್ಯೆ 606ಕ್ಕೆ ಏರಿಕೆ, 43 ಮಂದಿ ಡಿಸ್ಚಾರ್ಜ್​​!

ಕೊರೊನಾ ಮಹಾಮಾರಿ ಇದೀಗ ವೇಗವಾಗಿ ಹಬ್ಬಲು ಶುರುವಾಗಿದ್ದು, ಇಂದು ಒಂದೇ ದಿನ ದೇಶಾದ್ಯಂತ 50ಕ್ಕೂ ಹೆಚ್ಚು ಹೊಸ ಪ್ರಕರಣಗಳು ಕಂಡು ಬಂದಿವೆ. ಕರ್ನಾಟಕದಲ್ಲಿ 10 ಹೊಸ ಕೇಸ್​ ಕಂಡು ಬಂದಿದ್ದು, ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ ಬೆಳಕಿಗೆ ಬಂಂದಿವೆ.

Kerala reports 9 more positive coronavirus cases
Kerala reports 9 more positive coronavirus cases

ತಿರುವನಂತಪುರಂ:ನೆರೆಯ ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಲಾಕ್‌ಡೌನ್‌ ಆಗಿದ್ರೂ ಕೋವಿಡ್‌ ಹರಡುವಿಕೆ ಮುಂದುವರಿದ ಪರಿಣಾಮ ಕೇರಳದಲ್ಲಿಂದು ಮತ್ತೆ 9 ಹೊಸ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಸಿಎಂ ಪಿಣರಾಯಿ ವಿಜಯನ್‌, ದುಬೈನಿಂದ ಬಂದಿದ್ದ ನಾಲ್ವರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿದೆ ಅಂತ ಮಾಹಿತಿ ನೀಡಿದ್ದಾರೆ.

ಜೊತೆಗೆ ಯುಕೆ, ಫ್ರಾನ್ಸ್‌ನಿಂದ ಬಂದಿದ್ದ ತಲಾ ಒಬ್ಬರಿಗೆ ಕೊರೊನಾ ವೈರಸ್‌ ಇರುವುದು ದೃಢಪಟ್ಟಿದೆ ಅಂತ ಹೇಳಿದ್ದಾರೆ. ಕೇರಳದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ ಇಂದು ಸಂಜೆ ವೇಳೆಗೆ 118ಕ್ಕೆ ಏರಿಕೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 606ರ ಗಡಿ ದಾಟಿದ್ದು, ಅದರಲ್ಲಿ 43 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ದೇಶದಲ್ಲಿ ಡೆಡ್ಲಿ ವೈರಸ್​ ಪ್ರಕರಣದಲ್ಲಿ ಏರಿಕೆ ಕಂಡು ಬರುತ್ತಿದ್ದಂತೆ ಮುಂದಿನ 21 ದಿನಗಳ ಕಾಲ ದೇಶವನ್ನೇ ಲಾಕ್​ಡೌನ್​ ಮಾಡಿ ಮೋದಿ ಆದೇಶ ಹೊರಹಾಕಿದ್ದಾರೆ. ಇದರ ಮಧ್ಯೆ ಕೂಡ ಹೊಸ ಹೊಸ ಪ್ರಕರಣ ಬೆಳಕಿಗೆ ಬರುತ್ತಿರುವುದು ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳ ತಲೆ ಕೆಡಿಸಿದೆ.

ABOUT THE AUTHOR

...view details