ಕರ್ನಾಟಕ

karnataka

ETV Bharat / bharat

ಕೇರಳ ವಲಸಿಗರನ್ನ ಮರಳಿ ತವರಿಗೆ ತರುವಲ್ಲಿ ಸರ್ಕಾರ ವಿಫಲ:  ಬಿಜೆಪಿ ಆರೋಪ

ವಿಜಯನ್ ಮೊದಲು ತವರಿಗೆ ಮರಳಲು ಬಯಸುವ ಎಲ್ಲರನ್ನೂ ಸ್ವಾಗತಿಸಿದರು. ನಂತರ ಕೋವಿಡ್ ನೆಗೆಟಿವ್​ ಪ್ರಮಾಣ ಪತ್ರವನ್ನು ಹೊಂದಿರುವವರಿಗೆ ಮಾತ್ರ ಮರಳಲು ಅವಕಾಶ ನೀಡಲಾಗುವುದು ಎಂದು ಹೇಳುವ ಮೂಲಕ ತಮ್ಮ ನಿಲುವನ್ನು ಬದಲಾಯಿಸಿಕೊಂಡರು ಎಂದು ಬಿಜೆಪಿ ಆರೋಪಿಸಿದೆ.

ವಿಜಯನ್ ವಿಫಲ ಬಿಜೆಪಿ ಆರೋಪ
ವಿಜಯನ್ ವಿಫಲ ಬಿಜೆಪಿ ಆರೋಪ

By

Published : Jun 26, 2020, 9:36 AM IST

ತಿರುವನಂತಪುರಂ: ಕೇರಳ ವಲಸೆಗಾರರನ್ನು ಮರಳಿ ತವರಿಗೆ ತರುವ ವಿಷಯದಲ್ಲಿ, ವಿಜಯನ್ ತಮ್ಮ ನಿಲುವನ್ನು ಹಲವು ಬಾರಿ ಬದಲಾಯಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದ್ದಾರೆ.

ವಿಜಯನ್ ವಿಫಲ ಬಿಜೆಪಿ ಆರೋಪ

"ಕೇರಳ ವಲಸೆಗಾರರ ಮೇಲೆ, ಸಿಎಂ ಪಿಣರಾಯಿ ವಿಜಯನ್ ಯಾವುದೇ ಒಂದು ಕಠಿಣ ನಿಲುವನ್ನು ತೆಗೆದುಕೊಳ್ಳುತ್ತಿಲ್ಲ. ಒಂದು ಭಾರಿ ಒಂದು ವಿಷಯವನ್ನು ಹೇಳಿದರೆ, ಆ ನಿಲುವಿಗೆ ದೃಢವಾಗಿ ನಿಲ್ಲದೇ ಪದೇ ಪದೆ ತಮ್ಮ ನಿಲುವು ಬದಲಾಯಿಸುತ್ತಿದ್ದಾರೆ. ವಲಸಿಗರ ವಿಷಯದಲ್ಲಿ ಅವರು ಒಂದೇ ನಿಲುವನ್ನ ತೆಗೆದುಕೊಂಡಿಲ್ಲ. ಕೇಂದ್ರ ಸಚಿವರು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ವಲಸೆಗಾರರಿಗಾಗಿ ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ತಗ್ಗಿಸಲು ವಿಜಯನ್ ಬಯಸುತ್ತಿದ್ದಾರೆ "ಎಂದು ಸುರೇಂದ್ರನ್ ಹೇಳಿದರು.

ವಿಜಯನ್ ಮೊದಲು ತವರಿಗೆ ವಾಪಸ್​​ ಆಗಲು ಬಯಸುವ ಎಲ್ಲರನ್ನು ಸ್ವಾಗತಿಸಿದರು, ನಂತರ ಕೋವಿಡ್ ನೆಗೆಟಿವ್​ ಪ್ರಮಾಣಪತ್ರವನ್ನು ಹೊಂದಿರುವವರಿಗೆ ಮಾತ್ರ ಮರಳಲು ಅವಕಾಶ ನೀಡಲಾಗುವುದು ಎಂದು ಹೇಳುವ ಮೂಲಕ ತಮ್ಮ ನಿಲುವು ಬದಲಾಯಿಸಿಕೊಂಡರು ಎಂದು ಬಿಜೆಪಿ ಕೇರಳ ಘಟಕ ಆಕ್ರೋಶ ವ್ಯಕ್ತಪಡಿಸಿದೆ.

ABOUT THE AUTHOR

...view details