ಕರ್ನಾಟಕ

karnataka

ETV Bharat / bharat

ರಾಜ್ಯದ 17 ಜಿಲ್ಲೆಗಳಿಗೆ 'ಜಲ' ಕಂಟಕ... ಮೋದಿ ಸರ್ಕಾರ 'ರಾಷ್ಟ್ರೀಯ ವಿಪತ್ತು' ಘೋಷಿಸುತ್ತಿಲ್ಲವೇಕೆ?

ರಾಷ್ಟ್ರೀಯ ವಿಪತ್ತು ಎನ್ನುವ ಘೋಷಣೆ ನಮ್ಮ ನಡುವೆ ಇತ್ತೀಚೆಗೆ ಚಾಲ್ತಿಗೆ ಬರುತ್ತಿದೆ. ರಾಷ್ಟ್ರೀಯ ವಿಕೋಪ ಎಂಬುದಕ್ಕೆ ಯಾವುದೇ ಕಾನೂನಿನ ವ್ಯಾಖ್ಯಾನವಿಲ್ಲ. ಕೇಂದ್ರ ಸರ್ಕಾರವು ಸಿಬ್ಬಂದಿ ಮತ್ತು ಅಲ್ಪ ಹಣಕಾಸು ನೆರವಿನ ಮೂಲಕ ಪ್ರವಾಹ ಸಂತ್ರಸ್ತರಿಗೆ ನೆರವಾಗುತ್ತದೆ. ಭಾರತದ ವಿಪತ್ತು ನಿರ್ವಹಣಾ ಯೋಜನೆ 2005ರ ವಿಕೋಪ ನಿರ್ವಹಣೆ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ಆದಾಗ್ಯೂ, ಯಾವುದೇ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಈ ಕಾಯ್ದೆಯಡಿ ಅವಕಾಶವಿಲ್ಲ. ವಾಸ್ತವಿಕವಾಗಿ ಪ್ರಕೃತಿ ದುರಂತಗಳನ್ನು ರಾಷ್ಟ್ರೀಯ , ರಾಜ್ಯ ಮತ್ತು ಸ್ಥಳೀಯ ಮಟ್ಟದ ದುರಂತ ಎಂದು ಶ್ರೇಣಿಕರಿಸಲಾಗಿದೆ.

ರಾಷ್ಟ್ರೀಯ ವಿಪತ್ತು

By

Published : Aug 10, 2019, 5:42 PM IST

Updated : Aug 10, 2019, 6:42 PM IST

ನವದೆಹಲಿ:ಈ ಋತುವಿನ ಉತ್ತರಾರ್ಧದಲ್ಲಿ ಹವಾಮಾನ ಮುನ್ಸೂಚನೆ ಲೆಕ್ಕಚಾರಕ್ಕೂ ಮೀರಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಮಧ್ಯಪ್ರದೇಶ, ಉತ್ತರ ಖಂಡದಲ್ಲಿ ಪ್ರವಾಹ ಸೃಷ್ಟಿಸಿದೆ.

ಮಹಾರಾಷ್ಟ್ರದಲ್ಲಿ 2 ಲಕ್ಷ, ಕೇರಳದಲ್ಲಿ 14 ಜಿಲ್ಲೆ ಮಳೆಗೆ ತುತ್ತಾಗಿದ್ದರೆ, ಕರ್ನಾಟಕ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಮೈಸೂರು ಸೇರಿದಂತೆ 17 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ.

ವಾಯುಪಡೆಯ 2 ಹೆಲಿಕಾಫ್ಟರ್​ಗಳು ರಕ್ಷಣಾ ಕಾರ್ಯಚರಣೆಯಲ್ಲಿ ಭಾಗಿಯಾಗಿವೆ. ಎನ್​ಡಿಆರ್​ಎಫ್​, ಜೊತೆಗೆ ಭೂಸೇನೆ, ವಾಯುಪಡೆ, ನೌಕಾಪಡೆ ಮತ್ತು ಕರಾವಳಿ ಪಡೆಯ ತಂಡಗಳು ಕೈಜೋಡಿಸಿವೆ.

ಕುಂಭದ್ರೋಣ ಮಳೆಯಿಂದಾಗಿ ನೂರಾರು ಗ್ರಾಮಗಳು ಜಲಾವೃತವಾಗಿವೆ. ಕೆಲವು ಹಳ್ಳಿಗಳು ನಡುಗಡ್ಡೆಗಳಾಗಿ ಪರಿಣಮಿಸಿವೆ. ತಲೆಮಾರುಗಳಿಂದ ಬಾಳಿ ಬದುಕಿದ ಮನೆಗಳು ಕಣ್ಣೆದುರಿಗೇ ಧರೆಗುರುಳಿವೆ. ಸೂರು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಜಮೀನಿನಲ್ಲಿ ಬೆಳೆದಿದ್ದ ಪೈರು ಮಹಾ ಮಳೆಗೆ ನಾಶವಾಗಿದೆ. ಜನ - ಜಾನುವಾರಗುಳು ಆಹಾರವಿಲ್ಲದೇ ಪರದಾಡುತ್ತಿವೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ರಾಷ್ಟ್ರೀಯ ವಿಪತ್ತು ಘೋಷಿಸುಬೇಕೆಂದು ವಿರೋಧ ಪಕ್ಷಗಳು ಒತ್ತಡ ಹೇರುತ್ತಿವೆ.

ರಾಜ್ಯ ಸರ್ಕಾರ ಹೊರಡಿಸಿರುವ ಪ್ರವಾಹ ಪೀಡಿತ ಜಿಲ್ಲೆ ಮತ್ತು ತಾಲೂಕುಗಳು

ಏನಿದು ರಾಷ್ಟ್ರೀಯ ವಿಪತ್ತು?

ರಾಷ್ಟ್ರೀಯ ವಿಪತ್ತು ಎನ್ನುವ ಘೋಷಣೆ ನಮ್ಮ ನಡುವೆ ಇತ್ತೀಚೆಗೆ ಚಾಲ್ತಿಗೆ ಬರುತ್ತಿದೆ. ರಾಷ್ಟ್ರೀಯ ವಿಕೋಪ ಎಂಬುದಕ್ಕೆ ಯಾವುದೇ ಕಾನೂನಿನ ವ್ಯಾಖ್ಯಾನವಿಲ್ಲ. ಕೇಂದ್ರ ಸರ್ಕಾರವು ಸಿಬ್ಬಂದಿ ಮತ್ತು ಅಲ್ಪ ಹಣಕಾಸು ನೆರವಿನ ಮೂಲಕ ಪ್ರವಾಹ ಸಂತ್ರಸ್ತರಿಗೆ ನೆರವಾಗುತ್ತದೆ.

ಭಾರತದ ವಿಪತ್ತು ನಿರ್ವಹಣಾ ಯೋಜನೆಯೂ 2005ರ ವಿಕೋಪ ನಿರ್ವಹಣೆ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ಆದಾಗ್ಯೂ, ಯಾವುದೇ ದುರಂತವನ್ನು ರಾಷ್ಟ್ರೀಯ ವಿಪತ್ತುವೆಂದು ಘೋಷಿಸಲು ಈ ಕಾಯ್ದೆಯಡಿ ಅವಕಾಶವಿಲ್ಲ. ವಾಸ್ತವಿಕವಾಗಿ ಪ್ರಕೃತಿ ದುರಂತಗಳನ್ನು ರಾಷ್ಟ್ರೀಯ , ರಾಜ್ಯ ಮತ್ತು ಸ್ಥಳೀಯ ಮಟ್ಟದ ದುರಂತ ಎಂದು ಶ್ರೇಣಿಕರಿಸಲಾಗಿದೆ.

ಪ್ರಾಕೃತಿಕ ವಿಕೋಪ ನಿರ್ವಹಣೆ ರಾಜ್ಯಗಳ ಹೊಣೆಗಾರಿಕೆಯಾಗಿದೆ. ಯಾವುದೇ ನೈಸರ್ಗಿಕ ದುರಂತ ಸಂಭವಿಸಿದ ಸಂದರ್ಭದಲ್ಲಿ ಜನತೆಗೆ ನೆರವು ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿ ಆಗಿರುತ್ತದೆ. ಆದರೆ, ಪ್ರಾಕೃತಿಕ ವಿಕೋಪ ಸಂಭವಿಸಿದಾಗ ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಅಧಿಕಾರ ಕೇಂದ್ರಕ್ಕಿದೆ. ಈ ಬಗ್ಗೆ ಕೇಂದ್ರದ ನೆರವು ಕೋರಿ ರಾಜ್ಯ ಸರ್ಕಾರ ಮನವಿ ಸಲ್ಲಿಸಬೇಕು. ಈ ಬಳಿಕವಷ್ಟೇ ರಾಜ್ಯದ ಕೋರಿಕೆಯ ಮೇರೆಗೆ ಕೇಂದ್ರ ಸರ್ಕಾರ ಕಾರ್ಯಪ್ರವೃತವಾಗುತ್ತದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು 2016ರಲ್ಲಿ ಹೊರಡಿಸಿದ 'ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನಾ' ವರದಿ ಅನ್ವಯ, ಪ್ರಾಕೃತಿಕ ಅವಘಡಗಳನ್ನು ಶ್ರೇಣಿಕೃತವಾಗಿ ವಿಂಗಡಿಸಿದೆ. ಜಿಲ್ಲಾ ಮಟ್ಟದಲ್ಲಿ ನಿಭಾಯಿಸಲು ಸಾಧ್ಯವಾದರೇ ಅದು 1ನೇ ಮಟ್ಟದ್ದು. ರಾಜ್ಯ ಮಟ್ಟದಲ್ಲಿ ಸಂಪನ್ಮೂಲಗಳ ಕ್ರೋಡೀಕರಿಸಲು ಸಾಧ್ಯವಾದರೇ ಅದು 2ನೇ ಮಟ್ಟದ್ದು. ಒಂದು ವೇಳೆ ರಾಜ್ಯದ ಶಕ್ತಿಗೂ ಮಿರಿದಂತಹ ದುರಂತ ಸಂಭಸಿದರೇ ಅದು 3ನೇ ಮಟ್ಟದಾಗಿರುತ್ತದೆ. ಈ ಮೂರನೇ ಮಟ್ಟದ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಅಧಿಕಾರ ಕೇಂದ್ರಕ್ಕಿದೆ. ಅದಕ್ಕೆ ರಾಜ್ಯ ಸರ್ಕಾರದ ಮನವಿ ಮೇಲೆ ನಿಂತಿರುತ್ತದೆ.

Last Updated : Aug 10, 2019, 6:42 PM IST

ABOUT THE AUTHOR

...view details