ಕರ್ನಾಟಕ

karnataka

ETV Bharat / bharat

ದೇಶದ ಒಟ್ಟು ಸೋಂಕಿತರಲ್ಲಿ ತಬ್ಲಿಘಿ ಮೂಲದ್ದೇ ಸಿಂಹ ಪಾಲು: ನಿನ್ನೆಯಿಂದ 601 ಹೊಸ ಪ್ರಕರಣ ಪತ್ತೆ

ಇಲ್ಲಿಯವರೆಗೆ ದೇಶದ 17 ರಾಜ್ಯಗಳಲ್ಲಿ ತಬ್ಲಿಘಿ ಜಮಾತ್‌ಗೆ ಸಂಬಂಧಿಸಿದ ಪ್ರಕರಣಗಳು ಬೆಳಕಿಗೆ ಬಂದಿವೆ. ಒಟ್ಟು 1,023 ಪಾಸಿಟಿವ್​ ಪ್ರಕರಣಗಳು ಈ ಕಾರ್ಯಕ್ರಮಕ್ಕೆ ಸಂಬಂಧಿಸಿವೆ. ದೇಶದ ಒಟ್ಟು ಪ್ರಕರಣಗಳಲ್ಲಿ ಸುಮಾರು ಶೇ 30ರಷ್ಟು ಒಂದು ನಿರ್ದಿಷ್ಟ ಸ್ಥಳಕ್ಕೆ ಸಂಬಂಧಿಸಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ.

Lav Aggarwal
ಲಾವ್ ಅಗರ್ವಾಲ್

By

Published : Apr 4, 2020, 4:55 PM IST

ನವದೆಹಲಿ: ನಿನ್ನೆಯಿಂದ 601 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ದೇಶದಲ್ಲಿ ಈವರೆಗೆ 2,902 ಪಾಸಿಟಿವ್​ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ 12 ಜನ ಸೋಂಕಿನಿಂದ ಸಾವನ್ನಪ್ಪಿದ್ದು, ಈವರೆಗೆ ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ 68 ಕ್ಕೇರಿದೆ. ಇನ್ನೊಂದೆಡೆ ಒಟ್ಟು ಸೋಂಕಿತರಲ್ಲಿ 183 ಜನರು ಚೇತರಿಸಿಕೊಂಡಿದ್ದು, ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಸೋಂಕು ಬಾಧಿಸಿದ ವಯೋಮಾನದ ವಿವರ:

- ಒಟ್ಟು ಸೋಂಕಿತರಲ್ಲಿ ಶೇ. 9ರಷ್ಟು ಕೋವಿಡ್​-19 ರೋಗಿಗಳು 0-20 ವರ್ಷ ವಯಸ್ಸಿನವರು

- 42 ಶೇ. ರೋಗಿಗಳು 21-40 ವರ್ಷ ವಯಸ್ಸಿನವರು

- 33 ಶೇ. ಪ್ರಕರಣಗಳು 41 - 60 ವರ್ಷದೊಳಗಿನವರು

- 17 ಶೇ. ರೋಗಿಗಳು 60 ವರ್ಷ ದಾಟಿದವರು

ಇಲ್ಲಿಯವರೆಗೆ ದೇಶದ 17 ರಾಜ್ಯಗಳಲ್ಲಿ ತಬ್ಲಿಘಿ ಜಮಾತ್‌ಗೆ ಸಂಬಂಧಿಸಿದ ಪ್ರಕರಣಗಳನ್ನು ಬೆಳಕಿಗೆ ಬಂದಿದೆ. ಒಟ್ಟು 1,023 ಪಾಸಿಟಿವ್​ ಪ್ರಕರಣಗಳು ಈ ಘಟನೆಗೆ ಸಂಬಂಧಿಸಿವೆ. ದೇಶದ ಒಟ್ಟು ಪ್ರಕರಣಗಳಲ್ಲಿ, ಸುಮಾರು ಶೇ 30ರಷ್ಟು ಒಂದು ನಿರ್ದಿಷ್ಟ ಸ್ಥಳಕ್ಕೆ ಸಂಬಂಧಿಸಿದೆ ಎಂದು ಅಗರ್‌ವಾಲ್ ತಿಳಿಸಿದ್ದಾರೆ.

ಸುಮಾರು 22,000 ತಬ್ಲಿಘಿ ಜಮಾತ್ ಸದಸ್ಯರು ಮತ್ತು ಅವರ ಸಂಪರ್ಕಿಸಿದವರನ್ನು ನಮ್ಮೆಲ್ಲಾ ಭಗೀರಥ ಪ್ರಯತ್ನದ ಮೂಲಕ ಕ್ವಾರಂಟೈನ್​ನಲ್ಲಿಡಲಾಗಿದೆ ಎಂದು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ತಿಳಿಸಿದ್ದಾರೆ.

ABOUT THE AUTHOR

...view details