ಕರ್ನಾಟಕ

karnataka

ETV Bharat / bharat

ಸಂಬಳ ಕೊಡ್ದಿದ್ರೆ ವಿಮಾನ ಓಡ್ಸಲ್ಲ... ಜೆಟ್​ ಏರ್​ವೇಸ್​ಗೆ ಡೆಡ್​ಲೈನ್​ ಕೊಟ್ಟ ಪೈಲಟ್​ಗಳು - ಪೈಲಟ್

ಈ ತಿಂಗಳ ಸಂಬಳ ಸಿಗದೆ ಹೈರಾಣಾಗಿರುವ ಜೆಟ್​ ಏರ್​ವೇಸ್​ ಪೈಲಟ್​ಗಳು ಏಪ್ರಿಲ್​ 1ರೊಳಗೆ ಸಂಬಳ ಕೊಡದಿದ್ದರೆ ವಿಮಾನ ಚಾಲನೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

ಜೆಟ್​ ಏರ್​ವೇಸ್

By

Published : Mar 20, 2019, 11:45 AM IST

ನವದೆಹಲಿ: ಅಪಾರ ನಷ್ಟದಲ್ಲಿರುವ ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಎಂದು ಖ್ಯಾತಿ ಪಡೆದಿರುವ ಜೆಟ್​ ಏರ್​ವೇಸ್​ ತನ್ನ ಕಂಪನಿ ಬಳಿ ಈಗ ಉದ್ಯೋಗಿಗಳಿಗೆ ಸಂಬಳ ಕೊಡಲೂ ಕಾಸಿಲ್ಲ.

ಈ ತಿಂಗಳ ಸಂಬಳ ಸಿಗದೆ ಹೈರಾಣಾಗಿರುವ ಜೆಟ್​ ಏರ್​ವೇಸ್​ ಪೈಲಟ್​ಗಳು ಏಪ್ರಿಲ್​ 1ರೊಳಗೆ ಸಂಬಳ ಕೊಡದಿದ್ದರೆ ವಿಮಾನ ಚಾಲನೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

ಮೊದಲೇ ನಷ್ಟದಲ್ಲಿರುವ ಕಂಪನಿಯು ಉದ್ಯೋಗಿಗಳ ಈ ಪ್ರತಿಭಟನೆಯಿಂದಾಗಿ ಇನ್ನಷ್ಟು ಹೈರಾಣಾಗಿದ್ದು, ನಷ್ಟದ ಸುಳಿಯಿಂದ ತಪ್ಪಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.

ಜೆಟ್​ ಏರ್​ವೇಸ್​ನ ಷೇರುಗಳು ಮಂಗಳವಾರ ಶೇ.5ರಷ್ಟು ಕುಸಿದಿದ್ದು, ಕಂಪನಿಯಲ್ಲಿ ಶೇ. 24ರಷ್ಟು ಷೇರು ಹೊಂದಿರುವ ಸ್ಟೇಕ್​ ಹೋಲ್ಡರ್​ಇತಿಹಾದ್ ಸಂಸ್ಥೆಯು ಬಂಡವಾಳ ಹೂಡಲು ಹಿಂದೇಟುಹಾಕುತ್ತಿದೆ. ಕಂಪನಿಯ ಸಂಸ್ಥಾಪಕ ನರೇಶ್​ ಗೋಯಲ್​ ಅವರು ಸದ್ಯ ಮೂರನೇ ಒಂದು ಭಾಗದಷ್ಟು ವಿಮಾನಗಳ ಮೇಲೆ ತಮ್ಮ ಅಸ್ತಿತ್ವ ಕಳೆದುಕೊಮಡಿದ್ದು 119 ವಿಮಾನಗಳ ಪೈಕಿ 41 ವಿಮಾನಗಳು ಜೆಟ್​ ಏರ್​ವೇಸ್​ ಹಿಡಿತದಲ್ಲಿಲ್ಲ ಎಂದು ಹೇಳಲಾಗುತ್ತಿದೆ.

ಸಹೋದ್ಯೋಗಿಗಳ ಸಮಸ್ಯೆ, ವಿಮಾನದ ಕೊರತೆ ಎದುರಿಸುತ್ತಿರುವ ಜೆಟ್​ ಏರ್​ವೇಸ್​ ವಿಮಾನ ಹಾರಾಟ ನಿಧಾನವಾಗುತ್ತಿದೆ, ಸೇವೆ ಸರಿಯಿಲ್ಲ ಎಂಬ ದೂರುಗಳು ಪ್ರಯಾಣಿಕರಿಂದ ಕೇಳಿಬರುತ್ತಿದೆ.

ABOUT THE AUTHOR

...view details