ಕರ್ನಾಟಕ

karnataka

ETV Bharat / bharat

ಕಾಶ್ಮೀರದ ವಾಯುನೆಲೆ ಮೇಲೆ ಆತ್ಮಾಹುತಿ ದಾಳಿಗೆ ಜೈಶ್ ಪ್ಲಾನ್! ಹೈ ಅಲರ್ಟ್​ ಘೋಷಣೆ - high alert

ಜಮ್ಮು ಕಾಶ್ಮೀರದ ವ್ಯಾಪ್ತಿಯಲ್ಲಿನ ಶ್ರೀನಗರ, ಅವಂತಿಪೋರಾ, ಜಮ್ಮು, ಪಠಾಣ್​ಕೋಟ್, ಹಿಂಡನ್ ವಾಯುನೆಲೆಯಲ್ಲಿ ಉಗ್ರದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ.

ಕಾಶ್ಮೀರದ ವಾಯುನೆಲೆ ಮೇಲೆ ಆತ್ಮಾಹುತಿ ದಾಳಿಗೆ ಜೈಶ್ ಪ್ಲಾನ್

By

Published : Sep 25, 2019, 10:11 AM IST

Updated : Sep 25, 2019, 11:19 AM IST

ಶ್ರೀನಗರ:ಸುಮಾರು ಎಂಟರಿಂದ ಹತ್ತು ಜೈಶ್ ಉಗ್ರರು ಜಮ್ಮು ಕಾಶ್ಮೀರದ ವ್ಯಾಪ್ತಿಯಲ್ಲಿರುವ ವಾಯುನೆಲೆ ಮೇಲೆ ಆತ್ಮಾಹುತಿ ದಾಳಿ ನಡೆಸಲು ಸಜ್ಜಾಗಿದ್ದಾರೆ ಎನ್ನುವ ಮಾಹಿತಿಯನ್ನು ಸೇನೆಗೆ ಗುಪ್ತಚರ ಇಲಾಖೆ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.

ಜಮ್ಮು ಕಾಶ್ಮೀರದ ವ್ಯಾಪ್ತಿಯಲ್ಲಿನ ಶ್ರೀನಗರ, ಅವಂತಿಪೋರಾ, ಜಮ್ಮು, ಪಠಾಣ್​ಕೋಟ್, ಹಿಂಡನ್ ವಾಯುನೆಲೆಯಲ್ಲಿ ಉಗ್ರದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ.

ದಾಳಿಯ ಬಗ್ಗೆ ಕಳೆದ ಕೆಲವು ದಿನಗಳಿಂದ ಅನುಮಾನ ಇರುವ ಹಿನ್ನೆಲಯಲ್ಲಿ ಸೇನಾ ನೆಲೆಗಳಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ. ಆದರೆ ಸದ್ಯದ ಗುಪ್ತಚರ ಇಲಾಖೆಯ ಮಾಹಿತಿಯ ಬಳಿಕ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ದೇಶದ ಎಲ್ಲಾ ವಾಯು ನೆೆಲೆಗಳಿಗೆ 'ಆರೆಂಜ್ ಅಲರ್ಟ್':

ಭಯೋತ್ಪಾದಕರ ಸಂಭಾವ್ಯ ದಾಳಿಯ ಹಿನ್ನೆಲೆಯಲ್ಲಿ ದೇಶದಲ್ಲಿರುವ ಎಲ್ಲಾ ವಾಯುನೆಲೆಗಳಿಗೆ ಭಾರತೀಯ ವಾಯುಸೇನೆ ಆರೆಂಜ್ ಅಲರ್ಟ್‌ಘೋಷಣೆ ಮಾಡಿದೆ. ಈ ಮೂಲಕ ಭದ್ರತೆ ಹೆಚ್ಚಿಸಲು ಸೂಚಿಸಿದೆ.

Last Updated : Sep 25, 2019, 11:19 AM IST

ABOUT THE AUTHOR

...view details