ನವದೆಹಲಿ: ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ 'ದಿ ಇಂಡಿಯಾ ವೇ' ಪುಸ್ತಕದ ಮೊದಲ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ಪಡಿಸಿ ಟ್ವೀಟ್ ಮಾಡಿದ್ದಾರೆ.
"ನನ್ನ 'ದಿ ಇಂಡಿಯಾ ವೇ' ಪುಸ್ತಕದ ಮೊದಲ ಪ್ರತಿಯನ್ನು ಪಿಎಂ ನರೇಂದ್ರ ಮೋದಿ ಅವರಿಗೆ ಪ್ರಸ್ತುತಪಡಿಸಿ ನೀಡಲಾಗಿದೆ. ಅವರ ಸ್ಫೂರ್ತಿ ಮತ್ತು ಪ್ರೋತ್ಸಾಹಕ್ಕಾಗಿ ಅವರಿಗೆ ಧನ್ಯವಾದಗಳು" ಎಂದು ಡಾ ಜೈ ಶಂಕರ್ ಟ್ವೀಟ್ ಮಾಡಿದ್ದಾರೆ.
ಕಳೆದ ತಿಂಗಳು, ಜೈಶಂಕರ್ ಅವರು ಪುಸ್ತಕದ ಮುಖಪುಟದ ಚಿತ್ರವನ್ನು ಟ್ವೀಟ್ ಮಾಡಿ ಹೀಗೆ ಹೇಳಿದ್ದಾರೆ. "ಎರಡು ವರ್ಷಗಳ ಯೋಜನೆಯು ಅಂತಿಮವಾಗಿ ಮುಕ್ತಾಯಗೊಂಡಿತು. ಅದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಧನ್ಯವಾದಗಳು." ಎಂದಿದ್ದಾರೆ.
ಭಾರತ ಮತ್ತು ವಿಯೆಟ್ನಾಂ ನಡುವಿನ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವು ಭಾರತ - ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸಮೃದ್ಧಿ ಖಚಿತಪಡಿಸುತ್ತದೆ ಎಂದು ಮಂಗಳವಾರ ಸಚಿವರು ಟ್ವೀಟ್ ಮೂಲಕ ಹೇಳಿದ್ದಾರೆ.