ನವದೆಹಲಿ :ಕೃಷಿ ಮಸೂದೆ ವಿರೋಧಿಸಿ ರೈತರ ದೆಹಲಿ ಚಲೋಗೆ ದೇಶದಾದ್ಯಂತ ಬೆಂಬಲ ದೊರೆತಿದೆ. ದೇಶದ ನಾನಾ ಭಾಗಗಳಿಂದ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಆದರೆ, ಕಳೆದೆರಡು ದಿನಗಳಿಂದ ರೈತರ ಮೇಲೆ ಪೊಲೀಸರು ಜಲಫಿರಂಗಿ, ಅಶ್ರುವಾಯು ಪ್ರಯೋಗಿಸುತ್ತಿದ್ದು, ತೀವ್ರ ವಿರೋಧ ಕೇಳಿ ಬಂದಿದೆ. ಇದೀಗ ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪೊಲೀಸರ ಕೃತ್ಯಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.