ಕೊಚ್ಚಿ( ಕೇರಳ): ಇಲ್ಲಿನ ಎರ್ನಾಕುಲಂನಲ್ಲಿರುವ ಮುಲನ್ತೂರ್ಥಿ ಮಾರ್ಥೋಮನ್ ವಿವಾದಿತ ಚರ್ಚ್ಗೆ ಸಂಬಂಧಿಸಿದಂತೆ ಚರ್ಚ್ ಪ್ರದೇಶವನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಚರ್ಚ್ ಅಧಿಕಾರದ ಸಂಬಂಧ ಎರಡು ಗುಂಪುಗಳ ನಡುವೆ ದಶಕಗಳ ಹೋರಾಟ ನಡೆದಿತ್ತು.
ಇನ್ನೂ ಚರ್ಚ್ ಆಡಳಿತ ಬಿಟ್ಟುಕೊಡುವಂತೆ ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು. ಇದರಿಂದಾಗಿ ಜಾಕೋಬೈಟ್ ಗುಂಪುಗಳು ಪ್ರತಿಭಟನೆಗೆ ಮುಂದಾಗಿದ್ದವು.
ವಿವಾದಿತ ಚರ್ಚ್ ವಶಕ್ಕೆ ಪಡೆದ ಜಿಲ್ಲಾಡಳಿತ ಅಲ್ಲದೆ ಚರ್ಚ್ನೊಳಗೆ ಅಕ್ರಮವಾಗಿ ನುಸುಳಿದ್ದರು. ಇದೀಗ ಪೊಲೀಸರು ಚರ್ಚ್ ಗೇಟ್ ಮೂಲಕ ಒಳನುಗ್ಗಿ, ಚರ್ಚ್ನೊಳಗಿದ್ದ ಪ್ರತಿಭಟನಾಕಾರರು ಸೇರಿದಂತೆ ಜಾಕೋಬೈಟ್ ಚರ್ಚ್ನ ಟ್ರಸ್ಟಿ ಜೋಸೆಫ್ ಮಾರ್ ಗ್ರೆಗೊರಿಸ್ನನ್ನು ವಶಕ್ಕೆ ಪಡೆದಿದ್ದಾರೆ.
ತಡರಾತ್ರಿವರೆಗೂ ಪೊಲೀಸರು ಪ್ರತಿಭಟನಾಕಾರರನ್ನು ಸ್ಥಳದಿಂದ ಕರೆದೊಯ್ಯಲು ಹರಸಾಹಸ ಪಟ್ಟಿದ್ದಾರೆ. ಬಳಿಕ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಲವಂತವಾಗಿ ಚರ್ಚ್ನಿಂದ ಹೊರಕ್ಕೆ ಕಳುಹಿಸಲಾಗಿದೆ.
ಕೇಸ್ ಸಂಬಂಧ ಆಗಸ್ಟ್ 17ರ ಒಳಗಾಗಿ ಚರ್ಚ್ ಅನ್ನು ವಶಕ್ಕೆ ಪಡೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಕೋರ್ಟ್ ಆದೇಶ ನೀಡಿತ್ತು. ಈ ಆದೇಶದ ಹಿನ್ನೆಲೆ ಚರ್ಚ್ನೊಳಗಿದ್ದ ಹಲವರನ್ನು ವಶಕ್ಕೆ ಪಡೆದಿದೆ.
ಮಲಂಕಾರ ಗ್ರೂಪ್ ಅಡಿ ಬರುವ ಎಲ್ಲ ಚರ್ಚ್ನ ಆಡಳಿತವನ್ನು ಆರ್ಥೋಡಾಕ್ಸ್ ಗ್ರೂಪ್ಗೆ ನೀಡಬೇಕು ಎಂದು 2017ರ ಜುಲೈನಲ್ಲಿ ಕೋರ್ಟ್ ತೀರ್ಪು ನೀಡಿತ್ತು.
ಈಗಿರುವ 1,500 ವರ್ಷ ಹಳೆಯ ಮುಲನ್ತೂರ್ಥಿ ಮಾರ್ಥೋಮನ್ ಚರ್ಚ್ ಸಹ ಮಲಂಕಾರ್ ಗ್ರೂಪ್ನ ಆಡಳಿತದಡಿ ನಿಯಂತ್ರಣದಲ್ಲಿತ್ತು.