ರಾಯ್‌ಪುರ(ಛತ್ತೀಸ್‌ಗಡ): ಭಾರತದ ಸಂಪ್ರದಾಯಗಳು, ನಂಬಿಕೆಗಳು ಇತರ ಅಂಶಗಳೊಂದಿಗೆ ಬೆರೆತಿರುವುದರಿಂದ ದೇಶವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುವ ಜನರ ಸಂಕಲ್ಪ ಯಾವುದೇ ತೊಂದರೆಯಿಲ್ಲದೇ ಸಾಧ್ಯವಾಗುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.
ಎರಡು ದಿನಗಳ ಭೇಟಿಯಲ್ಲಿ ಶನಿವಾರ ಸಂಜೆ ನಗರಕ್ಕೆ ಆಗಮಿಸಿದ್ದ ಭಗವತ್, ಜಾಗೃತಿ ಮಂಡಲದಲ್ಲಿ ಛತ್ತೀಸ್‌ಗಡ ಮತ್ತು ಮಹಾಕೋಶಲ್ ಪ್ರದೇಶದ ಆರ್‌ಎಸ್‌ಎಸ್ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಆರ್‌ಎಸ್‌ಎಸ್‌ನ ಛತ್ತೀಸ್‌ಗಡದ ಪ್ರಾಂತ್ ಪ್ರಚಾರ್ ಪ್ರಮುಖ್ ಸುರೇಂದ್ರ ಕುಮಾರ್ ತಿಳಿಸಿದ್ದಾರೆ.