ನವದೆಹಲಿ:ಭಾರತ ಮತ್ತು ಚೀನಾ ನಡುವಿನ ಇತ್ತೀಚಿನ ಘರ್ಷಣೆ ಬದಲಿ ಆಮದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಆರ್ಥಿಕ ಒಡಂಬಡಿಕೆಗಳು ಸಾಮಾನ್ಯವಾಗಿ ಒಬ್ಬರು ಇನ್ನೊಂಬರ ವಿರುದ್ಧ ಸರಕು ಅಥವಾ ಸೇವೆಗಳನ್ನು ಖರೀದಿಸುವ ಅಥವಾ ಖರೀದಿಸದೆ ಇರುವ ತುಲನಾತ್ಮಕ ಪ್ರಯೋಜನವನ್ನು ಹೊಂದಿದೆ. ವ್ಯವಹಾರಗಳು ಮುಖ್ಯವಾಗಿ ಲಾಭ ಗಳಿಕೆಯ ಗರಿಷ್ಠ ಉದ್ದೇಶವನ್ನು ಹೊಂದಿರುತ್ತದೆ ಮತ್ತು ನಂತರ ಇನ್ನಿತರ ಅಂಶಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.
ಆದ್ದರಿಂದ ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದಂತೆ ನಮ್ಮ ಮನಸ್ಸಿಗೆ ಬರುವ ಪ್ರಮುಖ ಪ್ರಶ್ನೆಯೆಂದರೆ, ನಾವು ಚೀನಾದಿಂದ ಖರೀದಿಸುವುದನ್ನು ನಿಲ್ಲಿಸಬೇಕಾದರೆ, ನಾವು ಆ ಸರಕುಗಳನ್ನು ಹೇಗೆ ಪಡೆಯುವುದು ಮತ್ತು ಅದರ ತುಲನಾತ್ಮಕ ಪ್ರಯೋಜನಗಳು ಅಥವಾ ಅನಾನುಕೂಲತೆಗಳೇನು? ವಾಸ್ತವ ಏನೆಂದರೆ ಚೀನಾವು ಪ್ರಪಂಚದಲೇ ತನ್ನ ಹೆಚ್ಚಿನ ಉತ್ಪನ್ನಗಳನ್ನು ಕಡಿಮೆ ಉತ್ಪಾದನ ವೆಚ್ಚದಲ್ಲಿ ತಯಾರಿಸುತ್ತದೆ.
ಅಂದರೆ ಭಾರತವು ಚೀನೀ ಉತ್ಪನ್ನಗಳ ವ್ಯಸನದಿಂದ ಹೊರ ಬರಬೇಕಾದರೆ ಭಾರತವು ಕಡಿಮೆ ಉತ್ಪಾದನ ವೆಚ್ಚದಲ್ಲಿ ಉತ್ಪನ್ನಗಳನ್ನು ತಯಾರಿಸಬೇಕು. ಭಾರತವು ಕಡಿಮೆ ವೆಚ್ಚದ ಉತ್ಪಾದಕ ದೇಶವಾಗಲು ಹೇಗೆ ಸಾಧ್ಯ? ಸಾಮಾನ್ಯವಾಗಿ, ಉತ್ಪಾದನಾ ವೆಚ್ಚವು ಉತ್ಪಾದನೆಯ ವಿವಿಧ ಅಂಶಗಳನ್ನು ಆಧರಿಸಿದೆ (ಅಥವಾ ಉತ್ಪಾದಕತೆ) ಉತ್ಪಾದಿಸುವ ಪ್ರತಿ ಯೂನಿಟ್‌ನ ವೆಚ್ಚ, ಆರ್ಥಿಕತೆಯ ಪ್ರಮಾಣ, ಸಾರಿಗೆ ವೆಚ್ಚ, ಬಂಡವಾಳದ ವೆಚ್ಚ, ಸಾಂಸ್ಥಿಕ ದಕ್ಷತೆ ಮತ್ತು ಸರಕಾರದ ಕನಿಷ್ಠ ನೀತಿ ಬೆಂಬಲ ಸೇರಿದೆ.
ದುರದೃಷ್ಟವಶಾತ್, ಈ ಹೆಚ್ಚಿನ ನಿಯತಾಂಕಗಳಲ್ಲಿ ಭಾರತವು ಕಳಪೆ ಸ್ಥಾನದಲ್ಲಿದೆ. ಮೂಲಭೂತ ಮತ್ತು ರಚನಾತ್ಮಕ ವಿಷಯಗಳ ಮೇಲೆ ಕೇಂದ್ರೀಕರಿಸುವ ಬದಲು, ಕಾರ್ಮಿಕ ಕಾನೂನುಗಳು ಮತ್ತು ಭೂ ವೆಚ್ಚವನ್ನು ದೂಷಿಸುವುದು ಒಂದು ಫ್ಯಾಷನ್ ಆಗಿ ಮಾರ್ಪಟ್ಟಿದೆ.
ಇಲ್ಲಿಯವರೆಗಿನ ಆಮದು ಕತೆ
ವರ್ತಮಾನದಂತಹ ಬಿಕ್ಕಟ್ಟನ್ನು ತಡೆದುಕೊಳ್ಳುವ ದೇಶದ ಸಾಮರ್ಥ್ಯವು ರಫ್ತು ಮಾಡಿದ ಉತ್ಪನ್ನಗಳ ಮೇಲಿನ ಮೌಲ್ಯವರ್ಧನೆ ಮತ್ತು ಮೌಲ್ಯ ಸರಪಳಿಯನ್ನು ಏರಲು ನಿರಂತರ ಆವಿಷ್ಕಾರಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುತ್ತದೆ. ಕಚ್ಚಾ ವಸ್ತುಗಳು ಅಥವಾ ಅರೆ-ಸಿದ್ಧಪಡಿಸಿದ ವಸ್ತುಗಳನ್ನು ರಫ್ತು ಮಾಡುವ ಜತೆಗೆ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳುವ ದೇಶವನ್ನು ಈಗಿನ ಸ್ಥಿತಿಯಿಂದ ಬದಲಿಸುವುದು ಭಾರತಕ್ಕೆ ಸವಾಲಾಗಿದೆ.
ಹೆಚ್ಚಿನ ಮೌಲ್ಯದ ವಸ್ತುಗಳನ್ನು ಕಡಿಮೆ ದರದಲ್ಲಿ ರಫ್ತು ಮಾಡಲು ಇದು ಸಾಧ್ಯವಾಗುವುದಿಲ್ಲ ಏಕೆಂದರೆ ಹೆಚ್ಚಿನ ಸರಕುಗಳ ಉತ್ಪಾದನಾ ವೆಚ್ಚವು ತುಂಬಾ ಹೆಚ್ಚಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಕೆಲವು ಸ್ಪರ್ಧಾತ್ಮಕ ಅನುಕೂಲಗಳಿಂದಾಗಿ ಭಾರತವು ಸೇವೆಗಳ ರಫ್ತುದಾರ ದೇಶವಾಗಿದೆ. ಆದಾಗ್ಯೂ, ದೀರ್ಘಾವಧಿಯಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ಬಯಸಿದರೆ ಸೇವೆಗಳಲ್ಲಿನ ಸ್ಪರ್ಧಾತ್ಮಕ ಅನುಕೂಲಗಳನ್ನು ಸುಧಾರಿಸಬೇಕಾಗಿದೆ.
ಭಾರತ-ಚೀನಾ ವ್ಯಾಪಾರದ ವಿಷಯದಲ್ಲಿ ಇದು ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತದೆ. ಕಳೆದ 5 ವರ್ಷಗಳಲ್ಲಿ, ಚೀನಾದಿಂದ ಭಾರತದ ಅತಿ ಹೆಚ್ಚು ಉತ್ಪನ್ನಗಳನ್ನು ಆಮದು ಮಾಡಿಕೊಂಡಿದ್ದು, ಅಂದಾಜು 336 ಬಿಲಿಯನ್ ಯುಎಸ್ ಡಾಲರ್ಗಳಾಗಿವೆ (ವರ್ಷಕ್ಕೆ ಯುಎಸ್ $ 60 ರಿಂದ 74 ಬಿಲಿಯನ್ ವರೆಗೆ ಬದಲಾಗುತ್ತವೆ). ಇದು ದೇಶದ ಒಟ್ಟು ವಾರ್ಷಿಕ ಆಮದಿನ ಸುಮಾರು 12-14% ರಷ್ಟಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಭಾರತದಿಂದ ಚೀನಾದ ಆಮದು ಅದರ ಒಟ್ಟು ಆಮದುಗಳಲ್ಲಿ 1% ರಷ್ಟಿತ್ತು. 2019ರಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಆಮದಾಗಿರುವುದು ವಿದ್ಯುತ್ ಸಲಕರಣೆಗಳು (19.9 ಬಿಲಿಯನ್ ಯುಎಸ್ ಡಾಲರ್ ), ಯಂತ್ರೋಪಕರಣಗಳಿಗೆ ಸಂಬಂಧಿಸಿದ ಉತ್ಪನ್ನಗಳು (13.87 ಬಿಲಿಯನ್ ಯುಎಸ್ ಡಾಲರ್ ), ಸಾವಯವ ರಾಸಾಯನಿಕಗಳು ಹೆಚ್ಚಾಗಿ ಔಷಧ ಉದ್ಯಮದಲ್ಲಿ ಬಳಸಲಾಗುತ್ತದೆ (8.23 ಬಿಲಿಯನ್ ಯುಎಸ್ ಡಾಲರ್ ), ಪ್ಲಾಸ್ಟಿಕ್ ಸಲಕರಣೆಗಳು (2.82 ಬಿಲಿಯನ್ ಯುಎಸ್ ಡಾಲರ್ ), ರಸಗೊಬ್ಬರಗಳು (2.08 ಬಿಲಿಯನ್ ಯುಎಸ್ ಡಾಲರ್ ) ಮತ್ತು ಕಬ್ಬಿಣ ಮತ್ತು ಉಕ್ಕಿನ ಸಂಬಂಧಿತ ಉತ್ಪನ್ನಗಳು (1.69 ಬಿಲಿಯನ್ ಯುಎಸ್ ಡಾಲರ್ ), ಆಪ್ಟಿಕಲ್ ಸಂಬಂಧಿತ ಸಲಕರಣೆಗಳು (1.46 ಬಿಲಿಯನ್ ಯುಎಸ್ ಡಾಲರ್ ), ವಾಹನ ಸಂಬಂಧಿತ ಪರಿಕರಗಳು (1.28 ಬಿಲಿಯನ್ ಯುಎಸ್ ಡಾಲರ್ ) 2019ರಲ್ಲಿ ಚೀನಾಕ್ಕೆ ಭಾರತದಿಂದ ರಫ್ತಾಗಿರುವ ಪ್ರಮಾಣ 17.28 ಬಿಲಿಯನ್ ಯುಎಸ್ ಡಾಲರ್ ಅಥವಾ ಒಟ್ಟು ರಫ್ತಿನ ಸುಮಾರು 5%. ರಷ್ಟು ಎಂದು ಅಂದಾಜಿಲಾಗಿದೆ.
ಸಾವಯವ ರಾಸಾಯನಿಕಗಳು (3.11 ಬಿಲಿಯನ್ ಯುಎಸ್ ಡಾಲರ್ ), ಖನಿಜ ಸಂಬಂಧಿತ (2.14 ಬಿಲಿಯನ್ ಯುಎಸ್ ಡಾಲರ್ ), ಮೀನು ಉತ್ಪನ್ನಗಳು (1.37 ಬಿಲಿಯನ್ ಯುಎಸ್ ಡಾಲರ್ ), ಹತ್ತಿ (1.04 ಬಿಲಿಯನ್ ಯುಎಸ್ ಡಾಲರ್ ) ಮತ್ತು ಉಪ್ಪು ಉತ್ಪನ್ನಗಳು, ಕಾಫಿ ಸೇರಿದಂತೆ ಹಲವಾರು ಇತರ ಸರಕುಗಳು ಮತ್ತು ಅರೆ-ಸಿದ್ಧ ಸರಕುಗಳು ಇವುಗಳಲ್ಲಿ ಪ್ರಮುಖವಾದವು.
ಭಾರತ ಆಮದು ಮಾಡಿಕೊಳ್ಳುವುದು ಮೂಲಭೂತವಾಗಿ ಹೆಚ್ಚಿನ ಮೌಲ್ಯದ ಉತ್ಪನ್ನಗಳು ಅಥವಾ ಸುಲಭವಾದ ಪರ್ಯಾಯಗಳಿಲ್ಲದ ಸರಕುಗಳು ಮತ್ತು ಅರೆ-ಸಿದ್ಧಪಡಿಸಿದ ಸರಕುಗಳನ್ನು ರಫ್ತು ಮಾಡುವಾಗ ಪರ್ಯಾಯ ಮೂಲಗಳಾಗಿವೆ. ಹೀಗಾಗಿ, ನಮ್ಮ ಉತ್ಪನ್ನಗಳು ಸಾಕಷ್ಟು ಸ್ಪರ್ಧಾತ್ಮಕವಾಗಿರುತ್ತವೆ ಅಥವಾ ಮೌಲ್ಯವರ್ಧನೆ ಇಲ್ಲದಿರುವಲ್ಲಿ ಭಾರತಕ್ಕೆ ಸಮಸ್ಯೆ ಇದೆ.
ಹೆಚ್ಚಿನ ವೆಚ್ಚದ ಆರ್ಥಿಕತೆಗೆ ಒಂದು ಕಾರಣವೆಂದರೆ ನಮ್ಮ ರಫ್ತುಗಳಲ್ಲಿ ಹೆಚ್ಚಿನ ಮೌಲ್ಯವರ್ಧನೆ ಇಲ್ಲ. ನಮ್ಮ ಆರ್ಥಿಕ ಮಾದರಿಯು ರಫ್ತು ಚಾಲಿತಕ್ಕಿಂತ ಹೆಚ್ಚಾಗಿ ಆಂತರಿಕ ಬಳಕೆಯ ಆರ್ಥಿಕತೆಯನ್ನು ಒಳಗೊಂಡಿದೆ. ಹಾಗಾಗಿ ಪರಿಸ್ಥಿತಿ ಉತ್ತಮಗೊಳ್ಳುತ್ತಿಲ್ಲ. ಆದರೂ, ದೇಶಕ್ಕೆ ಹೆಚ್ಚಿನ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಸ್ರಾಪ ಬರುತ್ತಿರುವುದು ಆಶಾದಾಯಕ ಬೆಳವಣಿಗೆ ಆಗಿದೆ, ಇದಕ್ಕೆ ಕಾರಣ ವಾಲ್ಮಾರ್ಟ್ ಫ್ಲಿಪ್‌ಕಾರ್ಟ್ ಅನ್ನು ಖರೀದಿಸುವುದು, ಅಮೆಜಾನ್‌ನ ಹೂಡಿಕೆಗಳು ಅಥವಾ ರಿಲಯನ್ಸ್ ಜಿಯೋದಲ್ಲಿ ವಿದೇಶಿಯರು ಮಾಡಿದ ಹೂಡಿಕೆಗಳು ಇವು ಕಡಿಮೆ ಪ್ರಮಾಣದ್ದಾಗಿದ್ದರೂ ದೊಡ್ಡ ಮೌಲ್ಯದ ಹೂಡಿಕೆಗಳಾಗಿವೆ. ಸಮಸ್ಯಾತ್ಮಕವಾಗಿ ಈ ಹೂಡಿಕೆಗಳಲ್ಲಿ ಹೆಚ್ಚಿನವು ಜಾಗತಿಕ ವಲಯದಲ್ಲಿ ಸ್ಪರ್ಧಾತ್ಮಕ ರಫ್ತು ಲಾಭವನ್ನು ಸೃಷ್ಟಿಸುವ ಬದಲು ಭಾರತದ ಆಂತರಿಕ ಬಳಕೆ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿವೆ.
ಎರಡನೆಯದಾಗಿ, "ಮೇಕ್ ಇನ್ ಇಂಡಿಯಾ" ಅಡಿಯಲ್ಲಿ ಉತ್ಪಾದನಾ ವಲಯಕ್ಕೆ ಇತ್ತೀಚಿನ ವಿದೇಶಿ ನೇರ ಬಂಡವಾಳ ಹೂಡಿಕೆಯ ಬಹುಪಾಲು ಭಾಗವು ಕಡಿಮೆ ಮೌಲ್ಯದ ಸೇರ್ಪಡೆಯಾಗಿದೆ ಅಥವಾ ಸ್ಥಳೀಯ ಬಳಕೆಯು ಮಾರುಕಟ್ಟೆ ಉತ್ತೇಜನಕ್ಕೆ ಸಂಬಂಧಿಸಿದಾಗಿದೆ. ವಾಸ್ತವವಾಗಿ ಹೆಚ್ಚಿನ ವಿದೇಶಿ ನೇರ ಬಂಡವಾಳ ಹೂಡಿಕೆ ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಉತ್ಪನ್ನಗಳ ಉತ್ಪಾದನೆಯ ಬದಲು ಬಿಡಿಭಾಗ ಜೋಡಿಕೆ ಘಟಕಗಳಾಗಿವೆ. ಮೊಬೈಲ್ ಹ್ಯಾಂಡ್‌ಸೆಟ್‌ಗಳಲ್ಲಿ ಸಹ ಭಾರತದೊಳಗೆ ಮಾಡಲ್ಪಟ್ಟ ಮೌಲ್ಯವರ್ಧನೆಯು ಉತ್ಪನ್ನದ ಕೇವಲ 15% ಮಾತ್ರ ಆಗಿದೆ.