ಕರ್ನಾಟಕ

karnataka

ETV Bharat / bharat

ವಿಧ್ವಂಸಕ ಕೃತ್ಯಕ್ಕೆ ಉಗ್ರರ ಸಂಚು ವಿಫಲ: ಪಿಒಕೆ ಬಳಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ - Keran Sector of North Kashmir

ಪಾಕಿಸ್ತಾನ ಪಡೆ ಬೆಂಬಲಿತ ಭಯೋತ್ಪಾದಕರು ಪಾಕ್​​ ಆಕ್ರಮಿತ ಕಾಶ್ಮೀರದಿಂದ ಕಿಶನ್ ಗಂಗಾ ನದಿಯಲ್ಲಿ ಟ್ಯೂಬ್​ಗಳ ಮೂಲಕ ಶಸ್ತ್ರಾಸ್ತ್ರ-ಮದ್ದುಗುಂಡುಗಳನ್ನು ಸಾಗಿಸುತ್ತಿರುವುದನ್ನು ಭಾರತೀಯ ಸೇನೆಯ ಯೋಧರು ಪತ್ತೆ ಹಚ್ಚಿದ್ದಾರೆ.

banks of Kishen Ganga River
ಪಿಒಕೆ ಬಳಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

By

Published : Oct 10, 2020, 11:48 AM IST

Updated : Oct 10, 2020, 12:13 PM IST

ಜಮ್ಮು-ಕಾಶ್ಮೀರ: ಪಾಕ್​​ ಆಕ್ರಮಿತ ಕಾಶ್ಮೀರ ಸಮೀಪದ ಕಿಶನ್ ಗಂಗಾ ನದಿಯ ದಡದಲ್ಲಿ ಉಗ್ರರು ದಾಳಿಗೆ ಸಂಚು ರೂಪಿಸುತ್ತಿರುವುದನ್ನು ಪತ್ತೆ ಮಾಡಿರುವ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಬೃಹತ್​ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.

ಪಾಕಿಸ್ತಾನ ಪಡೆ ಬೆಂಬಲಿತ ಭಯೋತ್ಪಾದಕರು ಪಾಕ್​​ ಆಕ್ರಮಿತ ಕಾಶ್ಮೀರದಿಂದ ಕಿಶನ್ ಗಂಗಾ ನದಿಯಲ್ಲಿ ಟ್ಯೂಬ್​ಗಳ ಮೂಲಕ ಶಸ್ತ್ರಾಸ್ತ್ರ-ಮದ್ದುಗುಂಡುಗಳನ್ನು ಸಾಗಿಸುತ್ತಿರುವುದನ್ನು ಉತ್ತರ ಕಾಶ್ಮೀರದ ಕೇರನ್ ಸೆಕ್ಟರ್‌ನಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ಸೇನೆಯ ಯೋಧರು ನಿನ್ನೆ ಪತ್ತೆ ಹಚ್ಚಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಭಾರತೀಯ ಸೈನಿಕರು ಜಮ್ಮು-ಕಾಶ್ಮೀರ ಪೊಲೀಸರ ಜೊತೆ ಸ್ಥಳಕ್ಕೆ ತಲುಪಿದ್ದಾರೆ.

ಜಂಟಿ ಕಾರ್ಯಾಚರಣೆಯಲ್ಲಿ ನಾಲ್ಕು ಎಕೆ 47 ರೈಫಲ್​ಗಳು, 8 ಮ್ಯಾಗಜಿನ್​ಗಳು, 240 ಎಕೆ ರೈಫಲ್ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿದ್ದು, ಕಿಶನ್ ಗಂಗಾ ನದಿಯಲ್ಲಿ ಉಗ್ರರ ಚಲನ-ವಲನದ ದೃಶ್ಯವಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

Last Updated : Oct 10, 2020, 12:13 PM IST

ABOUT THE AUTHOR

...view details