ಮುಂಬೈ:ಹಲವು ದಶಕಗಳ ಬಳಿಕ ಮುಂಗಾರು ಈ ಬಾರಿ ದೇಶದ ಹಲವೆಡೆ ಕೈಕೊಟ್ಟಿದೆ. ಈ ನಡುವೆ ಹವಾಮಾನ ಇಲಾಖೆ ಕೊಂಚ ನೆಮ್ಮದಿಯ ಸುದ್ದಿಯನ್ನು ತಿಳಿಸಿದೆ.
ಜೂನ್ ಆರಂಭದಿಂದ ಜುಲೈ ಮಧ್ಯಭಾಗದವರೆಗೆ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿದ್ದು, ಮುಂದಿನ ಎರಡು ವಾರಗಳ ಕಾಲ ಉತ್ತಮ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಪ್ರಸ್ತುತ ಭಾರತದಲ್ಲಿ ಸರಾಸರಿ ಪ್ರಮಾಣಕ್ಕಿಂತ ಶೇ.17ರಷ್ಟು ಮಳೆ ಕಡಿಮೆಯಾಗಿದೆ. ಆದರೆ ಗುಜರಾತ್ನಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮಳೆ ಸುರಿದಿದೆ. ವಾಯು ಚಂಡಮಾರುತ ಇದಕ್ಕೆ ಪ್ರಮುಖ ಕಾರಣ ಎನ್ನಲಾಗ್ತಿದೆ.
ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಇನ್ನೂ ಸಮರ್ಪಕವಾಗಿ ಮಳೆ ಸುರಿದಿಲ್ಲ. ಬಿಹಾರ್, ಅಸ್ಸೋಂನಲ್ಲಿ ರಾಜ್ಯಗಳಲ್ಲಿ ಅತಿವೃಷ್ಟಿ ಉಂಟಾಗಿದೆ. ಮುಂಗಾರು ಹಿನ್ನೆಡೆ ದೇಶದ ಹಲವೆಡೆ ರೈತಾಪಿ ವರ್ಗಕ್ಕೆ ತೀವ್ರ ನಿರಾಸೆಯನ್ನು ಮೂಡಿಸಿದೆ.