ಕರ್ನಾಟಕ

karnataka

By

Published : Jul 10, 2020, 11:00 AM IST

ETV Bharat / bharat

ವಿಶೇಷ ಅಂಕಣ: ಭಾರತ-ನೇಪಾಳ ಸಂಬಂಧಗಳು ಮತ್ತು ಚೀನಾ!

ನೇಪಾಳದ ಜೊತೆಗೆ ಭಾರತ ಹೊಂದಿರುವ ಶತಮಾನಗಳ ಆತ್ಮೀಯ ಸಂಬಂಧವನ್ನು ಕಾಯ್ದುಕೊಳ್ಳಲು ಸರ್ಕಾರ ವಿಫಲವಾಗಿದೆ ಎಂದು ಭಾರತದ ವಿಪಕ್ಷಗಳೂ ಟೀಕಿಸುತ್ತಿವೆ. ಆದರೆ ಈ ಆರೋಪ ನಿರಾಧಾರ.

India-Nepal Relations and China
ಭಾರತ-ನೇಪಾಳ ಸಂಬಂಧಗಳು ಮತ್ತು ಚೀನಾ

ಹೈದರಾಬಾದ್:ನೇಪಾಳದ ಕಮ್ಯೂನಿಸ್ಟ್ ಪಕ್ಷದ ಸ್ಥಾಯಿ ಸಮಿತಿಯ ಸಭೆಯು ಜುಲೈ 8 ರಂದು ನಡೆಯಬೇಕಿತ್ತಾದರೂ ಅದನ್ನು ಮುಂದೂಡಲಾಗಿರುವುದರಿಂದ ಅಧಿಕಾರ ಉಳಿಸಿಕೊಳ್ಳಲು ಹೋರಾಡುತ್ತಿರುವ ಪ್ರಧಾನಿ ಖಡ್ಗ ಪ್ರಸಾದ್ ಶರ್ಮಾ ಒಲಿಗೆ ಇನ್ನೊಂದಷ್ಟು ದಿನ ಅವಕಾಶ ಸಿಕ್ಕಂತಾಗಿದೆ. ಚೀನಾದ ಕುಮ್ಮಕ್ಕಿನಿಂದಾಗಿ ಭಾರತ ಮತ್ತು ನೇಪಾಳದ ಮಧ್ಯೆ ಹೆಚ್ಚುತ್ತಿರುವ ಉದ್ವಿಗ್ನ ಸ್ಥಿತಿಯ ನಡುವೆಯೇ, ನೇಪಾಳದ ರಾಜಕಾರಣದಲ್ಲಿ ಚೀನಾ ವಿಪರೀತ ಮೂಗು ತೂರಿಸುತ್ತಿದೆ ಎಂದು ನೇಪಾಳದ ಜನರು ಮತ್ತು ನೇಪಾಳದ ರಾಜಕಾರಣಿಗಳು ಒಪ್ಪಿದ್ದಾರೆ.

ನೇಪಾಳದ ಜೊತೆಗೆ ಭಾರತ ಹೊಂದಿರುವ ಶತಮಾನಗಳ ಆತ್ಮೀಯ ಸಂಬಂಧವನ್ನು ಕಾಯ್ದುಕೊಳ್ಳಲು ಸರ್ಕಾರ ವಿಫಲವಾಗಿದೆ ಎಂದು ಭಾರತದ ವಿಪಕ್ಷಗಳೂ ಟೀಕಿಸುತ್ತಿವೆ. ಆದರೆ, ಈ ಆರೋಪ ನಿರಾಧಾರ ರಹಿತ. ಯಾವುದೇ ಎರಡು ದೇಶಗಳು, ಎರಡು ಕುಟುಂಬ ಸದಸ್ಯರಂತೆ ಎಂದಿಗೂ ಒಂದೇ ರೀತಿಯ ಸಂಬಂಧವನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಸನ್ನಿವೇಶಗಳಿಗೆ ಅನುಗುಣವಾಗಿ ದೇಶಗಳ ಮಧ್ಯೆ ಸಂಬಂಧ ಹಳಸುತ್ತವೆ. ಇದಕ್ಕೆ ಭಾರತ ಮತ್ತು ನೇಪಾಳವೂ ಹೊರತಲ್ಲ.

ನೇಪಾಳದಲ್ಲಿ ರಾಜ ಮನೆತನವಿದ್ದಾಗ, ಭಾರತ ತಮ್ಮ ಆಡಳಿತವನ್ನು ಬುಡಮೇಲು ಮಾಡಲು ಯತ್ನಿಸುತ್ತಿದೆ ಎಂದು ನೇಪಾಳದ ರಾಜರು ಆರೋಪಿಸುತ್ತಲೇ ಇದ್ದರು. ಇದು 1975 ರಲ್ಲಿ ತೀವ್ರ ಮಟ್ಟಕ್ಕೂ ತಲುಪಿತ್ತು. ಆ ಸಮಯದಲ್ಲಿ ಸಿಕ್ಕಿಮ್‌ಗೆ ಆದಂತೆ ತನಗೂ ಆಗುವುದು ಬೇಡ ಎಂಬ ದಿಸೆಯಲ್ಲಿ, ತನ್ನ ನೆಲದಲ್ಲಿ ಯಾವುದೇ ಸೇನಾ ಸ್ಫರ್ಧಾತ್ಮಕತೆಗೆ ಅವಕಾಶವನ್ನು ಕೊಡದೇ ಇರುವ “ಶಾಂತಿಯ ಪ್ರದೇಶ” ಎಂದು ಘೋಷಿಸಲು ನಿರ್ಧರಿಸಿತ್ತು. ನೇಪಾಳವನ್ನು ಮೆಚ್ಚಿಸಲು ಚೀನಾ ಮತ್ತು ಪಾಕಿಸ್ತಾನ ತಕ್ಷಣವೇ ಇದಕ್ಕೆ ಸಹಿ ಹಾಕಿದವು. ಆದರೆ ಈಗಾಗಲೇ ನೇಪಾಳದ ಜೊತೆಗೆ ಶಾಂತಿ ಮತ್ತು ಸ್ನೇಹದ ಒಪ್ಪಂದವಿದೆ. ಹೀಗಾಗಿ ಈ ಒಪ್ಪಂದ ಅಗತ್ಯವಿಲ್ಲ ಎಂದು ನಿರಾಕರಿಸಿತು.

ಆದರೆ ಈ ಶಾಂತಿ ಮತ್ತು ಸ್ನೇಹದ ಒಪ್ಪಂದಕ್ಕೆ 1988 ರಲ್ಲಿ ನೇಪಾಳ ಪುನಃ ಸಹಿ ಮಾಡಲು ನಿರಾಕರಿಸಿತು. ಇದರಿಂದ ಭಾರತವು ನೇಪಾಳದ ಗಡಿಯಲ್ಲಿ ಆರ್ಥಿಕ ದಿಗ್ಬಂಧನ ವಿಧಿಸಿತು. ಆ ನಂತರ, 1991 ರಲ್ಲಿ ಎರಡು ಪ್ರತ್ಯೇಕ ಒಪ್ಪಂದಗಳಿಗೆ ಸಹಿ ಹಾಕಿದ ನಂತರದಲ್ಲಿ ಈ ಸಂಘರ್ಷ ಕೊನೆಯಾಗಿತ್ತು. ಇದೇ ರೀತಿಯ ಪರಿಸ್ಥಿತಿ 2015 ರಲ್ಲಿ ನೇಪಾಳದ ಸಂವಿಧಾನ ತಿದ್ದುಪಡಿಯಿಂದಾಗಿ ಮಧೇಸಿ ಜನರು ಸಿಟ್ಟಿಗೆದ್ದಾಗಲೂ ಉಂಟಾಗಿತ್ತು. ನೇಪಾಳದ ಗಡಿ ಭಾಗದಲ್ಲಿ ವಾಸವಿರುವ ಭಾರತೀಯ ಮೂಲದ ಜನರನ್ನು ಇಲ್ಲಿ ಮಧೇಸಿಯರು ಎಂದು ಕರೆಯಲಾಗುತ್ತದೆ.

ಆದರೆ ಪ್ರಸ್ತುತ ಉಂಟಾದ ಭಾರತ ಮತ್ತು ನೇಪಾಳದ ಗಡಿ ವಿವಾದಕ್ಕೆ ಬ್ರಿಟಿಷರ ಕಾಲದ ಇತಿಹಾಸವೇ ಇದೆ. 1816 ರಲ್ಲಿ ನೇಪಾಳದ ಪಶ್ಚಿಮ ಭಾಗದಲ್ಲಿ ಹುಟ್ಟುವ ಕಾಳಿ ನದಿಯ ಮೂಲವು ಗಡಿ ಎಂದು ಬ್ರಿಟಿಷ್‌ ಕಾಲದಲ್ಲಿ ಭಾರತ ಮತ್ತು ನೇಪಾಳದ ಮಧ್ಯೆ ಒಪ್ಪಂದವಾಗಿತ್ತು. ಇದು ಈಗಿನ ವಿವಾದ ಕೇಂದ್ರಬಿಂದುವಾಗಿದೆ. ಭಾರತದ ಪ್ರಕಾರ ಲಿಪುಲೇಖ್‌ ಪಾಸ್‌ನಲ್ಲಿ ಕಾಳಿ ನದಿ ಉಗಮವಾಗುತ್ತದೆ. ಆದರೆ, ನೇಪಾಳದ ಪ್ರಕಾರ ನದಿ ಇನ್ನೂ ಪಶ್ಚಿಮಕ್ಕೆ ಲಿಂಪಿಯಾಧುರಾದಲ್ಲಿ ಉಗಮವಾಗುತ್ತದೆ. ಹೀಗಾಗಿ ಉತ್ತರಾಖಂಡದ ಭಾಗವೂ ತನ್ನದೇ ಎಂದು ನೇಪಾಳ ವಾದಿಸುತ್ತಿದೆ.

ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಒಲಿ, ತನ್ನ ಅಧಿಕಾರಾವಧಿಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ ಮತ್ತು ಚೀನಾದ ರಾಯಭಾರಿ ಹೌ ಯಾಂಖಿ ಜೊತೆಗಿನ ತನ್ನ ಸಂಬಂಧದ ಬಗ್ಗೆ ದೇಶಾದ್ಯಂತ ಎದ್ದಿರುವ ಟೀಕೆಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಸಂಸತ್‌ನಿಂದ ಅತ್ಯಂತ ವೇಗವಾಗಿ ನೇಪಾಳದ ನಕ್ಷೆಯನ್ನು ಬದಲಿಸಿ ಮಸೂದೆಗೆ ಅನುಮೋದನೆ ಪಡೆಯಲು ಯಶಸ್ವಿಯಾಗಿದ್ದಾರೆ.

ಈ ಮೊದಲೇ ಒಪ್ಪಂದ ಮಾಡಿಕೊಂಡಂತೆ ಮತ್ತೊಂದು ಪಕ್ಷದ ಮುಖಂಡ ಪ್ರಂಚಡ ಅವರಿಗೆ ಅಧಿಕಾರವನ್ನು ಬಿಟ್ಟುಕೊಡಲು ಒಪ್ಪದ ಒಲಿಯ ಮೇಲೆ ಪಕ್ಷದಲ್ಲೇ ಭಿನ್ನಮತ ವ್ಯಕ್ತವಾಗುತ್ತಿದೆ. ಇನ್ನೊಂದೆ ಭಾರತದ ಮೇಲೆ ಒಲಿ ಮಾಡಿದ ಆರೋಪಗಳೂ ಸ್ವಪಕ್ಷದ ನಾಯಕರನ್ನು ಸಿಟ್ಟಿಗೆಬ್ಬಿಸಿದೆ ಮತ್ತು ಒಲಿ ತನ್ನ ಪಕ್ಷದಲ್ಲೇ ಒಂಟಿಯಾಗಿದ್ದಾರೆ. ಈ ಸಮಯದಲ್ಲಿ ಒಲಿಯನ್ನು ರಕ್ಷಿಸಲು ಹೌ ಯಾಂಖಿ ಮಧ್ಯಪ್ರವೇಶಿಸಿದ್ದಾರೆ. ಅಧ್ಯಕ್ಷ ಮತ್ತು ಪ್ರಧಾನಿ ಜೊತೆಗೆ ಹಲವು ಬಾರಿ ಸಭೆ ನಡೆಸಿದ ಯಾಂಖಿ, ಎಲ್ಲ ಶಿಷ್ಟಾಚಾರಗಳನ್ನೂ ಮೂಲೆಗುಂಪು ಮಾಡಿದ್ದಾರೆ. ಇದು ಈ ಸಭೆಗಳಲ್ಲಿ ಕೈಗೊಂಡಿರಬಹುದಾದ ದುಷ್ಟಕೂಟಗಳ ಬಗ್ಗೆ ಹಲವು ಅನುಮಾನವನ್ನೂ ಮೂಡಿಸಿದೆ.

ಭಾರತ ಮತ್ತು ನೇಪಾಳ ಸಂಬಂಧದಲ್ಲಿ ಚೀನಾ ಯಾಕೆ ಮತ್ತು ಹೇಗೆ ಮೂಗು ತೂರಿಸುತ್ತಿದೆ ಎಂದು ನಾವು ಕೇಳಬಹುದು. ಇದಕ್ಕೆ ಕಾರಣವೂ ನಿಖರವಾಗಿಯೇ ಇದೆ. ಭಾರತವು ನೇಪಾಳದಲ್ಲಿ ಮಾಡುತ್ತಿರುವ ಹೂಡಿಕೆ ಮತ್ತು ನೆರವಿಗೆ ಬದಲಾಗಿ ಚೀನಾ ತನ್ನ ಬಾರ್ಡರ್‌ ರೋಡ್ ಇನಿಶಿಯೇಟವ್‌ ಅಡಿಯಲ್ಲಿ ನೇಪಾಳವನ್ನು ಸಾಲದ ಸುಳಿಗೆ ಸಿಲುಕಿಸಲು ಚೀನಾ ಮೊಟ್ಟ ಮೊದಲನೆಯದಾಗಿ ಪ್ರಯತ್ನಿಸುತ್ತಿದೆ. ಇನ್ನು ಎರಡನೆಯದಾಗಿ, ಭಾರತಕ್ಕೆ ಮುಜುಗರ ಉಂಟು ಮಾಡಲು ತನ್ನ ಸುಪರ್ದಿಗೆ ನೇಪಾಳವನ್ನು ತೆಗೆದುಕೊಳ್ಳಲು ಚೀನಾ ತನ್ನ ಪ್ರಭಾವವನ್ನು ಬೀರುತ್ತಿದೆ.

ಮೂರನೆಯದಾಗಿ, ಈ ವಲಯದಲ್ಲಿ ಭಾರತದ ಬದಲಿಗೆ ಚೀನಾ ಅಭಿವೃದ್ಧಿಗೆ ಪೂರಕವಾಗಿದೆ ಎಂಬುದನ್ನು ಸಾರ್ಕ್‌ನ ಎಲ್ಲ ದೇಶಗಳಿಗೆ ಸಂದೇಶ ಸಾರುವ ಅಗತ್ಯವನ್ನು ಚೀನಾ ಹೊಂದಿದೆ. ಇನ್ನು ಕೊನೆಯದಾಗಿ, ನೇಪಾಳದ ಜೊತೆಗೆ ಭಾರತ ಕಾದಾಡುವುದು ಚೀನಾಗೆ ಅಗತ್ಯವಿದೆ. ಈ ಮೂಲಕ ಜಾಗತಿಕ ಗಮನ ಕೇಂದ್ರೀಕರಣವು ವ್ಯಾಪಾರ ಮತ್ತು ಮಾನವ ಹಕ್ಕುಗಳಿಂದ ಬೇರೆ ಕಡೆಗೆ ತಿರುಗಬೇಕಾಗಿದೆ.

ತನ್ನ ಸಾಲದ ಸುಳಿಯಲ್ಲಿ ನೇಪಾಳವನ್ನು ಸಿಲುಕಿಸುವುದು ಮತ್ತು ತಾನು ಹೇಳಿದಂತೆ ನೇಪಾಳವನ್ನು ಆಡಿಸುವುದು ಚೀನಾದ ಸಾಮಾನ್ಯ ವಿಧಾನ. ಸದ್ಯ, ನೇಪಾಳದಲ್ಲಿ ಚೀನಾ ಹಲವು ಪ್ರಾಜೆಕ್ಟ್‌ಗಳನ್ನು ನಡೆಸುತ್ತಿದೆ. ಪೋಖ್ರಾದಲ್ಲಿ ವಿಮಾನ ನಿಲ್ದಾಣ, ವಿಶ್ವವಿದ್ಯಾಲಯ, ಹಲವು ರಸ್ತೆಗಳ ನಿರ್ಮಾಣ, ಭಾರತ ಮತ್ತು ನೇಪಾಳ ಗಡಿಯಲ್ಲಿನ ಒಂದು ರಸ್ತೆಯನ್ನೂ ಚೀನಾ ನಿರ್ಮಿಸುತ್ತಿದೆ, ಆಣೆಕಟ್ಟೆಗಳು ಮತ್ತು ಟಿಬೆಟ್ ಅನ್ನು ಕಾಠ್ಮಂಡು ಜೊತೆಗೆ ಸಂಪರ್ಕಿಸುವ ಬೃಹತ್ ರೈಲ್ವೆ ಯೋಜನೆಯನ್ನೂ ಇದು ಕೈಗೊಂಡಿದೆ. ಈ ರೈಲ್ವೆ ಯೋಜನೆಯಂತೂ ಪರ್ವತ ಪ್ರದೇಶದಲ್ಲಿ ಸುರಂಗದ ಮೂಲಕ ರೈಲ್ವೆ ಹಳಿ ಹಾದು ಹೋಗಲಿದೆ. ಇದು 600 ಕೋಟಿ ರೂ. ಯೋಜನೆಯಾಗಿದೆ.

ನೇಪಾಳ ಸದ್ಯಕ್ಕೆ ಚೀನಾಗೆ 2 ಬಿಲಿಯನ್ ಡಾಲರ್‌ ಆಗಿದೆ. ಇದು ರೈಲ್ವೆ ಪ್ರಾಜೆಕ್ಟ್‌ ಅನ್ನೂ ಸೇರಿಸಿದರೆ 8 ಬಿಲಿಯನ್ ಡಾಲರ್ ಆಗಿರಲಿದೆ. 2020 ಕ್ಕೆ ಇದು ಜಿಡಿಪಿಯ ಶೇ. 29 ರಷ್ಟಾಗಲಿದೆ ಎಂದು ಊಹಿಸಲಾಗಿದೆ. ನೇಪಾಳವು ಚೀನಾದ ಸಾಲ ಮರುಪಾವತಿ ಮಾಡಲು ಸಾಧ್ಯವಾಗದ್ದರಿಂದ, ಚೀನಾದ ಸಾಲದ ಸುಳಿಗೆ ಸಿಲುಕುವ ಎಲ್ಲ ಸಾಧ್ಯತೆಯೂ ಇದೆ. ಆದರೆ, ಚೀನಾದ ಕಾರ್ಯತಂತ್ರಕ್ಕೆ ಈಗ ಹಿನ್ನಡೆಯಾಗುತ್ತಿದೆ.

ಸ್ವಂತ ಪಕ್ಷದಲ್ಲೇ ಒಲಿ ವಿಪರೀತ ವಿರೋಧವನ್ನು ವ್ಯಕ್ತಪಡಿಸುತ್ತಿರುವುದು ಮತ್ತು ಹಲವು ಕಡೆಗಳಲ್ಲಿ ನೇಪಾಳದ ಗಡಿಯನ್ನು ಚೀನಾ ಒತ್ತುವರಿ ಮಾಡಿಕೊಂಡಿರುವ ವಿಷಯ ಬಹಿರಂಗವಾಗಿರುವುದು ಮತ್ತು ರೈಲ್ವೆ ಯೋಜನೆಯು ಆರ್ಥಿಕವಾಗಿ ಸಾಧುವಲ್ಲ ಎಂಬ ಅಂಶ ಮತ್ತು ಭಾರತವನ್ನು ವಿರೋಧಿಸುವ ದೃಷ್ಟಿಯಿಂದ ಚೀನಾಗೆ ವಿಪರೀತ ಹತ್ತಿರವಾಗುತ್ತಿರುವುದು ವಿರೋಧಕ್ಕೆ ಕಾರಣವಾಗಿದೆ. ಚೀನಾ ಪ್ರಾಯೋಜಿತ ರೈಲ್ವೆ ಯೋಜನೆಯನ್ನಂತೂ ನೇಪಾಳದ ರಾಜಕಾರಣದ ವಲಯದಲ್ಲಿ ಕಾಗದದ ಮೇಲಿನ ಯೋಜನೆ ಎಂದೇ ಹೇಳಲಾಗುತ್ತಿದೆ. ಕೊನೆಗೂ, ಭಾರತದ ಗಡಿಯಲ್ಲಿ ಇತ್ತೀಚೆಗೆ ಸ್ಥಾಪಿಸಿದ ಹಲವು ಪೊಲೀಸ್‌ ನೆಲೆಗಳನ್ನು ತೆಗೆದುಹಾಕುವ ಮೂಲಕ ಭಾರತದ ಕಡೆಗೆ ನೇಪಾಳ ಸ್ವಲ್ಪ ಮಟ್ಟಿನ ಒಲವು ತೋರಿದೆ.

ಆದರೆ, ಮುಂದಿನ ಬಾರಿ ಪಕ್ಷದ ಸ್ಥಾಯಿ ಸಮಿತಿ ನಡೆಸಲಿರುವ ಸಭೆಯ ನಂತರವೇ ಉಭಯ ದೇಶಗಳ ಮಧ್ಯೆ ಸಂಬಂಧ ಸುಧಾರಣೆಯ ಸ್ಪಷ್ಟ ನಿದರ್ಶನಗಳು ಗೋಚರಿಸಲಿವೆ.

ABOUT THE AUTHOR

...view details